Appu-darshan-fan-war

ದರ್ಶನ್ ಮೇಲೆ ಚಪ್ಪಲಿ ಎಸೆತ – ಇಲ್ಲಿ ದರ್ಶನ್ ತಪ್ಪಿದೆಯಾ? ಅವರ ಅಭಿಮಾನಿಗಳ ತಪ್ಪಿದೆಯಾ? ಅಥವಾ ಅಪ್ಪು ಫ್ಯಾನ್ಸ್ ತಪ್ಪಿದೆಯಾ? ವಿಡಿಯೊ ನೋಡಿ ನೀವೇ ಹೇಳಿ…

CINEMA/ಸಿನಿಮಾ Entertainment/ಮನರಂಜನೆ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ, ಕಳೆದ ಒಂದು ತಿಂಗಳಿನಿಂದಲೂ ಕೂಡ ಕರ್ನಾಟಕದ ವಿವಿಧ ಭಾಗಗಳಿಗೆ ಹೋಗಿ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿಯೂ ಕೂಡ ಸಂದರ್ಶನ ನೀಡಿದ್ದಾರೆ. ಇನ್ನು ಕಳೆದ ಎರಡು ವರ್ಷದಿಂದಲೂ ಕೂಡ ನಟ ದರ್ಶನ್ ಅವರನ್ನು ಮಾಧ್ಯಮಗಳಿಂದ ಬ್ಯಾನ್ ಮಾಡಲಾಗಿದೆ.

ಹಾಗಾಗಿ ಅವರ ಕ್ರಾಂತಿ ಸಿನಿಮಾ ಬಗ್ಗೆ ಯಾವುದೇ ರೀತಿಯಾದಂತಹ ಅಡಚಣೆ ಉಂಟಾಗಬಾರದು. ಜನರಿಗೆ ಈ ಸಿನಿಮಾದಲ್ಲಿ ಇರುವಂತಹ ಸಾರಾಂಶ ತಿಳಿಯಬೇಕು ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸ್ವತಃ ದರ್ಶನ್ ಕಳೆದ ಎರಡು ತಿಂಗಳಿನಿಂದ ಹಗಲು ರಾತ್ರಿ ಎನ್ನದೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ.

ಇನ್ನು ಕ್ರಾಂತಿ ಸಿನಿಮಾದ ಮೊದಲ ಹಾಡು ಆದಂತಹ ಧರಣಿ ಎಂಬ ಹಾಡನ್ನು ಕೆ.ಆರ್ ಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡಲಾಯಿತು ಇದಾದ ನಂತರ ಎರಡನೇ ಹಾಡು ಆದಂತಹ “ಬೊಂಬೆ ಬೊಂಬೆ” ಎಂಬ ಹಾಡನ್ನು ಬಳ್ಳಾರಿಯ ಹೊಸಪೇಟೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸುತ್ತದೆ.

ಅದರಂತೆಯೇ ದರ್ಶನ್ ಹಾಗೂ ರಚಿತಾರಾಮ್ ಕ್ರಾಂತಿ ಸಿನಿಮಾದ ಸಹಕಲಾವಿದರು ನಿರ್ಮಾಪಕರು ನಿರ್ದೇಶಕರು ಎಲ್ಲರೂ ಕೂಡ ನಿನ್ನೆ ಸಂಜೆ 7:00 ಗಂಟೆಗೆ ಹೊಸಪೇಟೆಯಲ್ಲಿ ನಿಗದಿ ಮಾಡಿದಂತಹ ಸ್ಥಳಕ್ಕೆ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗಲು ಮುಂದಾಗುತ್ತಾರೆ, ಆದರೆ ಅಲ್ಲಿ ನಡೆದದ್ದೇ ಬೇರೆ. ಕನ್ನಡ ಚಿತ್ರರಂಗದಲ್ಲಿ ಹಿಂದೆ ನಡೆಯಲಾರದ ಒಂದು ಕಹಿ ಘಟನೆ ನಡೆದು ಹೋಯಿತು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿ ಬಳಗ ಬಹಳಷ್ಟು ಇದೆ, ಅಪ್ಪು ಹಾಗೂ ಹೊಸಪೇಟೆ ಜನರಿಗೆ ಮೊದಲಿನಿಂದಲೂ ಅವಿನಾಭವ ಸಂಬಂಧವಿದೆ. ಈ ಕಾರಣಕ್ಕಾಗಿ ಅಪ್ಪು ವಿಧಿವಶರಾದ ನಂತರ ಹೊಸಪೇಟೆಯ ಸರ್ಕಲ್ ನಲ್ಲಿ ಅಪ್ಪು ಅವರ ಪುತ್ಥಳಿಯನ್ನು ಸ್ಥಾಪಿಸಿ ಈಗಲೂ ಕೂಡ ಅಲ್ಲಿ ಅಪ್ಪು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ.

ಅಪ್ಪು ಅವರಿಗೂ ದರ್ಶನ್ ಅವರ ಈ ಒಂದು ಪ್ರಕರಣಕ್ಕೂ ಸಂಬಂಧವೇನು ಕಾರಣವೇನು ಎಂದು ನೋಡುವುದಾದರೆ, ಆದರೆ ಅಸಲಿ ವಿಚಾರವೇ ಬೇರೆ ಇದೆ ಅಪ್ಪು ಅವರು ವಿಧಿವಶರಾದ ನಂತರ ದರ್ಶನ್ ಅವರು ಕ್ರಾಂತಿ ಸಿನಿಮಾದ ಸಂದರ್ಶನ ಒಂದರಲ್ಲಿ ಪಾಲ್ಗೊಂಡಾಗ ಅವರು ಹೇಳಿದಂತಹ ಹೇಳಿಕೆಯೊಂದು ಇಷ್ಟೆಲ್ಲಾ ರಾಮಾಯಣಕ್ಕೆ ಕಾರಣವಾಗಿದೆ. ಸಂದರ್ಶನಗಾರರ ಜೊತೆ ಮಾತನಾಡುತ್ತಿದ್ದ ಸಮಯದಲ್ಲಿ ದರ್ಶನ್ ಆಡಿದ ಮಾತಿನಿಂದ ಇಷ್ಟೆಲ್ಲ ರಗಳೆಗಳಾದವು.

ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ನನ್ನ ಅಭಿಮಾನಿಗಳೇ ಮಾಡುತ್ತಿದ್ದಾರೆ ಇದನ್ನು ನೋಡಿ ನಿಜಕ್ಕೂ ನಾನು ಭಾವುಕನಾದೆ. ಅಷ್ಟೇ ಅಲ್ಲದೆ ಅಪ್ಪು ಅವರು ವಿಧಿವಶರಾದ ನಂತರ ಎಷ್ಟು ಜನ ಸೇರಿದರು, ಅವರಿಗೆ ಎಷ್ಟು ಅಭಿಮಾನಿಗಳು ಇದ್ದರೂ ಎಂಬುದನ್ನು ನಾನು ನೋಡಿದೆ. ಆದರೆ ನಾನು ಬದುಕಿದ್ದಾಗಲೇ ನನ್ನ ಅಭಿಮಾನಿಗಳು ಇಷ್ಟೆಲ್ಲಾ ಪ್ರೀತಿ ತೋರಿದ್ದಾರೆ ಎಂಬ ಒಂದೇ ಒಂದು ಹೇಳಿಕೆಯನ್ನು ನೀಡುವುದರ ಮೂಲಕ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಆದರೆ ಇಲ್ಲಿ ದರ್ಶನ್ ಅವರು ಯಾವುದೇ ರೀತಿಯಾದಂತಹ ಕೆಟ್ಟ ಉದ್ದೇಶವನ್ನು ಹೊಂದಿರಲಿಲ್ಲ, ಅಷ್ಟೇ ಅಲ್ಲದೆ ಅಪ್ಪು ಅವರ ಬಗ್ಗೆ ಅವರಿಗೆ ಯಾವುದೇ ರೀತಿಯಾದಂತಹ ತಿರಸ್ಕಾರ ಮನೋಭಾವನೆ ಆಗಲಿ ಅಥವಾ ಅವಮಾನ ಮಾಡಬೇಕು ಎಂಬ ಮನೋಭಾವ ಆಗಲಿ ಇರಲಿಲ್ಲ. ಅಪ್ಪು ಅವರನ್ನು ಉದಾಹರಣೆಗೆ ಕೊಟ್ಟರೇ ಹೊರತು ಇನ್ಯಾವುದೇ ಕೆಟ್ಟ ಉದ್ದೇಶ ಅವರ ಮನಸ್ಸಿನಲ್ಲಿ ಇರಲಿಲ್ಲ.

ಆದರೆ ಅವರು ಆಡಿದ ಮಾತು ಹಲವು ಅರ್ಥ ಹೊರಡಿಸಿ ಈ ಪ್ರಕರಣ ಇಷ್ಟರ ಮಟ್ಟಿಗೆ ತಲುಪುತ್ತದೆ. ಅಪ್ಪು ಅಭಿಮಾನಿಯೊಬ್ಬರು ನೀವು ಅದೇಗೆ ಹೊಸಪೇಟೆಗೆ ಕಾಲಿಡುತ್ತೀರೋ ನಾವು ನೋಡೆ ಬಿಡುತ್ತೇವೆ ಎಂದು ಹೇಳುತ್ತಾರೆ, ಮತ್ತೊಂದು ಕಡೆ ದರ್ಶನ್ ಅಭಿಮಾನಿಗಳು ಕೂಡ ನಿಮ್ಮ ಅಡ್ಡೆಗೆ ಬಂದು ಕಾಂತ್ರಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡುತ್ತೇವೆ ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ.

ನಿಜಕ್ಕೂ ಇವೆಲ್ಲವೂ ಕೂಡ ದರ್ಶನ್ ಅವರ ಮೇಲೆ ಇನ್ನಷ್ಟು ಕೋಪವನ್ನು ಹೆಚ್ಚು ಮಾಡುವಂಥಾಗುತ್ತದೆ. ನಿಜ ಹೇಳಬೇಕೆಂದರೆ ಯಾವ ಸ್ಟಾರ್ ನಟರು ಕೂಡ ಮತ್ತೊಬ್ಬ ಸ್ಟಾರ್ ನಟರನ್ನು ಅವಮಾನಿಸುವುದಿಲ್ಲ, ಅಗೌರವಿಸುವುದಿಲ್ಲ. ಆದರೆ ಫಾನ್ಸ್ ಗಳಿಂದಲೇ ಸ್ಟಾರ್ ವಾರ್ ಗಳು ಪ್ರಾರಂಭವಾಗುತ್ತಿವೆ, ಸದ್ಯಕ್ಕೆ ದರ್ಶನ್ ಪ್ರಕರಣದಲ್ಲೂ ಕೂಡ ಇದೇ ರೀತಿ ಆಗಿದೆ.

ದರ್ಶನ್ ಹಾಗೂ ಅಪ್ಪು ಆತ್ಮೀಯ ಸ್ನೇಹಿತರು, ಒಳ್ಳೆಯ ಒಡನಾಟವನ್ನು ಹೊಂದಿದ್ದರು, ನಿಜ ಜೀವನದಲ್ಲಿ ಅವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಮನಸ್ತಾಪ ಇರಲಿಲ್ಲ, ಆದರೆ ಇವರಿಬ್ಬರ ನಡುವೆ ತಂದು ಇಡುವಂತಹ ಕೆಲಸವನ್ನು ಫ್ರಾನ್ಸ್ ಗಳೇ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ದರ್ಶನ್ ಅವರು ಎರಡನೇ ಹಾಡು ಆದಂತಹ ಬೊಂಬೆ ಎಂಬ ಹಾಡನ್ನು ರಿಲೀಸ್ ಮಾಡುತ್ತಿರುವಾಗಲೇ ವೇದಿಕೆಯ ಮೇಲೆ ಇಂದತಹ ದರ್ಶನ್ ಅವರ ಮೇಲೆ ಕೆಳಗೆ ಇದ್ದ ವ್ಯಕ್ತಿಯೋರ್ವ ಚಪ್ಪಲಿ ಎಸೆಯುತ್ತಾರೆ.

ಇದನ್ನು ನೋಡಿ ಸ್ವತಃ ದರ್ಶನ ಅವರಿಗೂ ಶಾಕ್ ಆಗುತ್ತದೆ, ಅಷ್ಟೇ ಅಲ್ಲದೆ ಅಲ್ಲಿ ಇದ್ದಂತಹ ಚಿತ್ರತಂಡ ಮತ್ತು ಪೊಲೀಸರು ಎಲ್ಲರಿಗೂ ಕೂಡ ನಿಜಕ್ಕೂ ಶಾಕ್ ಆಗುತ್ತದೆ. ಇಷ್ಟೆಲ್ಲಾ ಆದರೂ ಕೂಡ ದರ್ಶನ್ ಸ್ವಲ್ಪವೂ ಬೇಸರ ಪಟ್ಟಿಕೊಳ್ಳದೆ “ಇರಲಿ ಬಿಡು ಚಿನ್ನ ಇಂತಹ ಅವಮಾನಗಳನ್ನು ನಾನು ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ, ಅದರಲ್ಲಿ ಇದು ಕೂಡ ಒಂದು, ತಪ್ಪೇನಿಲ್ಲ” ಎಂದು ಹೇಳುವ ಮೂಲಕ ಸುಮ್ಮನಾಗುತ್ತಾರೆ.

ಇಲ್ಲಿ ದರ್ಶನ್ ತಪ್ಪಿದೆಯಾ? ಅವರ ಅಭಿಮಾನಿಗಳ ತಪ್ಪಿದೆಯಾ? ಅಥವಾ ಅಪ್ಪು ಫ್ಯಾನ್ಸ್ ತಪ್ಪಿದೆಯಾ? ನೀವೇ ನಿರ್ಧರಿಸಿ. ಕೆಳಗೆ ಥರ್ಡ್ ಐ ಚಾನೆಲ್ ನವರ ವಿಡಿಯೊ ಇದೆ, ಅದನ್ನು ನೋಡಿ ಕಾಮೆಂಟ್ ಮಾಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.