ಕ್ರಾಂತಿʼಗೆ ಬಾಯ್ಕಾಟ್‌ ಬಿಸಿ..! ದರ್ಶನ್‌ ʼಅದೃಷ್ಟ ದೇವತೆಯ ಬಟ್ಟೆ ಬಿಚ್ಚುವʼ ಹೇಳಿಕೆ : ಇದು ಎಷ್ಟು ಸರಿ ?

ಎಲ್ಲ ಸರಿಯಾಗಿದೆ ಎನ್ನುವಾಗಲೇ ಇದೇನಿದು ಕ್ರಾಂತಿʼಗೆ ಬಾಯ್ಕಾಟ್‌ ಬಿಸಿ… ದರ್ಶನ ಅವರು ಯಾವಾಗಲು ವಿವಾದಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ʼಬಾಯ್ಕಾಟ್‌ ಕ್ರಾಂತಿʼ ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡಲು ಪ್ರಾರಂಭಿಸುತ್ತಿದೆ. ಇದು ಹೀಗೆ ಮುಂದುವರೆದ್ರೆ ದಚ್ಚು ಸಿನಿಮಾದ ವಿರುದ್ಧ ಬಾಯ್ಕಾಟ್‌ ʼಕ್ರಾಂತಿʼ ಶುರುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.

/news_images/2022/12/darshan-kranti-movie-boycott1670773765.jpgಈಗಿರುವಾಗ ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ ಮಾತು ಹಿಂದೂ ಪರ ಸಂಘಟನೆ ಸೇರಿದಂತೆ ಕೆಲವು ಜನರ ಕೋಪಕ್ಕೆ ಗುರಿಯಾಗಿದೆ. ಅಲ್ಲದೆ, ದರ್ಶನ್‌ ಸಿನಿಮಾ ಕ್ರಾಂತಿ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್ಕಾಟ್‌ ಎಂಬ ಪದ ಕೇಳಿ ಬರುವಂತೆ ಮಾಡಿದೆ

ಹೌದು, ಸಂದರ್ಶನವೊಂದರಲ್ಲಿ ದರ್ಶನ ಅವರು, ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತ ಸಮಯ ಬಂದ್ರೆ ಅದೃಷ್ಟ ದೇವತೆಯನ್ನು ಬೆಡ್‌ ರೂಮ್‌ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸಿಬಿಡಬೇಕು ಎಂದು ಹೇಳಿದ್ದರು. ಅವರು ಹೇಳಿದ್ದರ ಉದ್ದೇಶವೇ ಬೆರೆಯಾಗಿತ್ತು. ಅಂದ್ರೆ ಒಳ್ಳೆಯ ಅವಕಾಶ ಒಂದಾಗ ಅದರ ಉಪಯೋಗ ಪಡೆಯಬೇಕು ಅಂತ ಅರ್ಥ. ಆದ್ರೆ ಅವರು ಹೇಳಿದ ವಿಧಾನ ಕೆಲವರ ಮನಸ್ಸಿಗೆ ನೋವು ಉಂಟು ಮಾಡಿದೆ. ಇನ್ನು ಟ್ಟಿಟರ್‌ನಲ್ಲಿ ದಚ್ಚು ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಹಲವಾರು ನೆಟ್ಟಿಗರು ಗಜನ ವಿರುದ್ಧ ಕಿಡಿಕಾರಿದ್ದರೆ. ಅದೃಷ್ಟ ದೇವತೆ ಅಂದ್ರೆ ಮಹಾಲಕ್ಷ್ಮಿ, ದರ್ಶನ ಅವರು ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಗೂಗಲ್‌ನಲ್ಲಿ ಅದೃಷ್ಟ ದೇವತೆ ಎಂದು ಸರ್ಚ್‌ ಮಾಡಿ ನೆಟ್ಟಿಗರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ʼಅದೃಷ್ಟ ದೇವತೆಯನ್ನು ಮನೆಯ ಬೆಡ್ ರೂಮನಲ್ಲಿ ಕುಳ್ಳರಿಸಿ, ಬಿಟ್ಟಿ ಬಿಚ್ಚಬೇಕು ಎಂದು ಹೇಳಿ ಕೊಟ್ಯಾಂತರ ಹಿಂದೂ ಮಾತೆಯರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುವ ದೇವತೆಗಳ ಅಪಮಾನ ಅಲ್ಲವೇ?.ʼ ಎಂದು ಕಿಡಿಕಾರಿದ್ದಾರೆ.

You might also like

Comments are closed.