ಪುರುಷರೇ,ಈ ಆರೋಗ್ಯ ಸಮಸ್ಯೆಗಳು ಕಂಡುಬಂದರೆ,ಕೂಡಲೇ ವೈದ್ಯರನ್ನು ಸಂಪರ್ಕಿಸಿ…

HEALTH/ಆರೋಗ್ಯ

ಆರೋಗ್ಯ ಎಂಬುದು ಪ್ರತಿಯೊಬ್ಬರಿಗೂ ಮುಖ್ಯ, ಇದು ಯಾವುದೇ ಒಂದು ಲಿಂಗಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಹೋಗುವುದು, ಉತ್ತಮ ಆಹಾರ ಮತ್ತು ಜೀವನಶೈಲಿಯ ಅನುಸರಿಸಬೇಕು. ಆದರೆ ಅನೇಕ ಅಧ್ಯಯನಗಳು ಪುರುಷರು ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತವೆ. ಏಕೆಂದರೆ ಪುರುಷರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ, ತಮ್ಮನ್ನು ತಾವು ಫಿಟ್ ಮತ್ತು ಆರೋಗ್ಯಕರ ಎಂದು ಭಾವಿಸಿರುತ್ತಾರೆ.

ಮೂತ್ರ ವಿಸರ್ಜನೆಗೆ ಕಷ್ಟ ಅಥವಾ ಬಣ್ಣದಲ್ಲಿ ಬದಲಾವಣೆ: ಮೂತ್ರದ ಬಣ್ಣದಲ್ಲಿ ಬದಲಾವಣೆ ಅಥವಾ ಬಾತ್‌ರೂಮ್‌ಗೆ ಹೋಗುವ ಅವಧಿಗಳಲ್ಲಿ ಹೆಚ್ಚು-ಕಡಿಮೆ ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇವು ಕೆಲವು ಸಮಸ್ಯೆಗಳ ಎಚ್ಚರಿಕೆಯಾಗಿರಬಹುದು. ಉದಾಹರಣೆಗೆ, ಮೂತ್ರದಲ್ಲಿ ರಕ್ತವನ್ನು ಕಂಡುಬರುವುದು ಕೆಲವು ಸೋಂಕಿನ ಸಂಕೇತವಾಗಬಹುದು, ಅಥವಾ ಕೆಲವು ಸಂದರ್ಭಗಳಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಅಥವಾ ಕಿಡ್ನಿ ಸ್ಟೋನ್‌ನ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿರಬಹುದು. ಆದ್ದರಿಂದ ಮೂ ತ್ರವಿಸರ್ಜನೆಯಲ್ಲಿ ಯಾವುದಾದರೂ ಬದಲಾವಣೆ ಕಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯೋದ್ರಿಂದ ` ಈ ಗಂಭೀರ ಆರೋಗ್ಯ ಸಮಸ್ಯೆ'ಗಳು ಉಂಟಾಗಬಹುದು | cold drinks - Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ...

ಜನನಾಂ *ಗಗಳಲ್ಲಿ ಗಡ್ಡೆ ಕಂಡುಬರುವುದು: ‘ಜನ *ನಾಂಗಗಳ’ ಬಗ್ಗೆ ಯಾರೂ ಮಾತನಾಡುವುದಿಲ್ಲ, ಅದರ ಬಗ್ಗೆ ಹೇಳಿಕೊಳ್ಳಲು ಒಂದು ರೀತಿಯ ಮುಜುಗರ. ಆದರೆ ಇದನ್ನು ನಿರ್ಲಕ್ಷಿಸದಿರುವುದು ಬಹಳ ಮುಖ್ಯ. ಶಿ *ಶ್ನ ಅಥವಾ ವೃ ಷಣಗಳ ಸುತ್ತ ಯಾವುದೇ ಗಡ್ಡೆಗಳು ಕಂಡುಬಂದರೆ ಎಚ್ಚರಗೊಳ್ಳುವುದು ಮುಖ್ಯ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಧ್ಯಯನದ ಪ್ರಕಾರ, ವೃಷಣ ಕ್ಯಾ *ನ್ಸರ್ ಯುವಕರಲ್ಲಿ ಕಂಡುಬರುವ ಸಾಮಾನ್ಯ ವಿಧದ ಕ್ಯಾ *ನ್ಸರ್‌ಗಳಲ್ಲಿ ಒಂದಾಗಿದ್ದು, ಹೆಚ್ಚಿನ ಗಮನಕ್ಕೆ ಬರುವುದಿಲ್ಲ. ಜನ ನಾಂಗಗಳಲ್ಲಿ ಯಾವುದೇ ಗ *ಡ್ಡೆಗಳು ಅಥವಾ ದೇಹದ ಇತರ ಭಾಗಗಳಲ್ಲಿ ಊತಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು.

ಲೈಂ *ಗಿಕ ತೃಪ್ತಿ ಇಲ್ಲದೇ ಇರುವುದು: ಇದೊಂದು ಸಾಮಾನ್ಯವಾಗಿ ವಯಸ್ಸಿನಲ್ಲಿ ಪುರು ಷರು ಎದುರಿಸುತ್ತಿರುವ ಸಮಸ್ಯೆಯಾಗಿದೆ, ಆದರೆ ಬಹಳಷ್ಟು ಜನರು ಇದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆದರೆ ಇದು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ತಜ್ಞರ ಪ್ರಕಾರ, ಸುಮಾರು 70% ಪ್ರಕರಣಗಳು ಇತರ ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದ್ದು, ಮುಂದೆ ಎದುರಿಸಬೇಕಾಗಿರುವ ಗಂಭೀರ ಸಮಸ್ಯೆಗಳ ಸೂಚನೆ ಎನ್ನುತ್ತಾರೆ. ಲೈಂ *ಗಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರ *ಪಿಂಡ ವೈಫಲ್ಯ, ನರ ವೈಜ್ಞಾನಿಕ ಅಸ್ವಸ್ಥತೆಗಳು, ತೀವ್ರ ಮಧು ಮೇಹ, ಮದ್ಯ ಪಾನ ಅಥವಾ ಯಾವುದೇ ರೀತಿಯ ಚಟಗಳು ಸೇರಿಕೊಂಡಿವೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ರಸ್ತೆಯಲ್ಲಿ ನಿಂತು ಸ್ಮೋ-ಕಿಂಗ್ ಮಾಡಿದ್ರ ಬಿಗ್ಬಾಸ್ ನಿವೇದಿತಾ..? ಇಲ್ನೋಡಿ ವಿಡಿಯೋ...