ಡ್ಯಾನ್ಸ್ ಅಂದರೆ ಯಾರಿಗೆ ತಾನು ಇಷ್ಟವಿಲ್ಲ ಹೇಳಿ? ಡಾನ್ಸ್ ಮನಸ್ಸಿಗೆ ಮುದ ನೀಡುತ್ತದೆ, ಬೇಸರವನ್ನು ಕಳೆಯುತ್ತದೆ ಹಾಗೂ ಕೆಲವೊಮ್ಮೆ ಉತ್ಸಾಹದಿಂದ ಕುಣಿಯುತ್ತಿರುವವರ ಜಬರ್ ದಸ್ತ್ ನೃತ್ಯವನ್ನು ನೋಡಿದಾಗ ನಮ್ಮ ಮನಸ್ಸು ಕೂಡಾ ಹುಚ್ಚೆದ್ದು ಕುಣಿಯುತ್ತದೆ ಎಂದರೆ ಕೂಡಾ ತಪ್ಪಾಗುವುದಿಲ್ಲ. ಟಿವಿಗಳಲ್ಲಾದರೆ ಇತ್ತೀಚಿನ ವರ್ಷಗಳಲ್ಲಿ ರಿಯಾಲಿಟಿ ಶೋಗಳ ಜನಪ್ರಿಯತೆ ನೋಡಿದರೆ ಅರ್ಥವಾಗುತ್ತದೆ ಡಾನ್ಸ್ ಎಂದರೆ ಜನರಿಗೆ ಎಷ್ಟು ಮೋಹ ಎಂದು. ಅಲ್ಲದೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಕೆಲವರ ವೀಡಿಯೋಗಳು ಯಾವ ಮಟ್ಟಕ್ಕೆ ವೈರಲ್ ಆಗುತ್ತವೆ ಎಂದರೆ ಇಂತಹವರಿಗೆ ಅನಂತರ ಟಿವಿ ಶೋಗಳಿಗೂ ಕೂಡಾ ಆಹ್ವಾನ ದೊರೆಯುತ್ತದೆ. ಎಲ್ಲೆಡೆ ಜನಪ್ರಿಯ ಆಗಿ ಬಿಡುತ್ತಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಡಾನ್ಸ್ ವೀಡಿಯೋ ಜಬರ್ದಸ್ತ್ ಆಗಿ ವೈರಲ್ ಆಗುತ್ತಿದ್ದು, ಇದು ನೋಡುಗರ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಅಲ್ಲದೆ ನೋಡಿದವರೆಲ್ಲಾ ಕೂಡಾ ವಾರೆವ್ಹಾ ಎಂತ ಟ್ಯಾಲೆಂಟ್ ಎಂದು ಹಾಡಿ ಹೊಗಳುತ್ತಿದ್ದಾರೆ. ಈ ವೀಡಿಯೋದ ಡಾನ್ಸ್ ನ ವಿಶೇಷತೆ ಏನು ಎನ್ನುವುದಾದರೆ ಇದರಲ್ಲಿ ಡಾನ್ಸ್ ಮಾಡಿರುವುದು ಯಾರು ಎಂದರೆ ಮನೆಗೆ ಹೊಸದಾಗಿ ಅಡಿಯಿಟ್ಟ ಸೊಸೆ. ಹೌದು ಅತ್ತೆ ಮನೆಗೆ ಬಂದಿದ್ದ ನವ ವಧುವು ಬಾಲಿವುಡ್ ನ ಹಾಡಿಗೆ ಮುಖದ ಮೇಲೆ ಗೂಂಗಟ್( ಸೆರಗನ್ನು ಮುಖ ಕಾಣಿಸದಂತೆ ಹಾಕಿಕೊಳ್ಳುವುದು) ಹಾಕಿ, ಭರ್ಜರಿ ಡಾನ್ಸ್ ಮಾಡಿದ್ದಾಳೆ.
ಸೊಸೆ ಅತ್ತೆ ಮನೆಯಲ್ಲಿ ಮಾಡಿದ ಈ ಡಾನ್ಸ್ ನಲ್ಲಿ ಆಕೆ ಮನೆಯ ಗೌರವವನ್ನು ಕಾಪಾಡುವಂತೆ ನೃತ್ಯ ಮಾಡಿದ್ದಾಳೆ. ಪೂರ್ತಿ ಡಾನ್ಸ್ ನಲ್ಲಿ ಎಲ್ಲೂ ಕೂಡಾ ಆಕೆಯ ಮುಖದ ಮೇಲಿಂದ ಸೆರಗು ಪಕ್ಕಕ್ಕೆ ಸರಿಯದಂತೆ ಆಕೆ ಎಚ್ಚರ ವಹಿಸಿದ್ದಾರೆ. ಇನ್ನು ಬಾಲಿವುಡ್ ಹಾಡಿಗೆ ಮನೆಯ ಸೊಸೆ ಮಾಡಿದ ಈ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ನೋಡಿ ಮೆಚ್ಚುಗೆಗಳ ಮಳೆಯನ್ನೇ ಸುರಿಸಿದ್ದಾರೆ. ಆಕೆ ತನ್ನ ಟ್ಯಾಲೆಂಟ್ ಅನ್ನು ಪ್ರದರ್ಶನ ಮಾಡಿದ ಈ ವೀಡಿಯೋ ಈಗ ಜನ ಮೆಚ್ಚುಗೆ ಪಡೆದಿದೆ, ಅಲ್ಲದೆ ಆಕೆ ಡಾನ್ಸ್ ಮಾಡಲು ಅವಕಾಶ ಮಾಡಿಕೊಟ್ಟ ಆಕೆಯ ಅತ್ತೆ ಮನೆಯವರ ಬಗ್ಗೆ ಕೂಡಾ ಮೆಚ್ಚುಗೆ ಕೇಳಿ ಬರುತ್ತಿದೆ.
ವಿಡಿಯೋ ನೋಡಿ
ಸಾಮಾಜಿಕ ಜಾಲತಾಣಗಳಲ್ಲಿ ದಿನ, ಪ್ರತಿದಿನ ಅದೆಷ್ಟೋ ವೀಡಿಯೋಗಳು ಬರುತ್ತವೆ, ಹೋಗುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಅದೆಷ್ಟೋ ಜನರು ತಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತಿದೆ. ಮನೆಯಿಂದ ಹೊರಗೆ ಬಂದು ತಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಪಡೆಯಲು ಅನೇಕರು ವಿಫಲರಾಗಿದ್ದಾರೆ. ಅಂತಹವರಿಗೆ ಇಂದು ಈ ಸಾಮಾಜಿಕ ಜಾಲತಾಣಗಳು ವೇದಿಕೆಯನ್ನು ಕಲ್ಪಿಸುವಲ್ಲಿ ಅಕ್ಷರಶಃ ನೆರವಾಗಿದೆ. ವೀಡಿಯೋ ಜೊತೆಗೆ ಹಾಡಿಗೆ ಹೆಜ್ಜೆ ಹಾಕಿ ಮನರಂಜನೆ ನೀಡಿದ್ದ ಈ ಹೊಸ ಸೊಸೆಯ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.