
ಕಳೆದ ಎರಡ್ಮೂರು ವರುಷದ ಭಾರತದ ಅಂರ್ಜಾಲದಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದ ಅಪ್ಲಿಕೇಶನ್ ಎಂದರೆ ಅದು ಟಿಕ್ ಟಾಕ್ ಅಪ್ಲಿಕೇಶನ್. ಹೌದು ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರ ವರೆಗೂ ಪ್ರತಿಯೊಬ್ಬರು ಕೂಡ ಈ ಟಿಕ್ ಟಾಕ್ ಮಾಯಕ್ಕೆ ಮಾರು ಹೋಗಿದ್ದರು. ಚೀನಾ ಮೂಲದ ಅಪ್ಲಿಕೇಶನ್ ಇದಾಗಿದ್ದು ಭಾರತದಲ್ಲಿ ದಿನಕ್ಕೆ ಲಕ್ಷಾಂತರ ಜನ ಇದನ್ನು ಡೌನ್ಲೋಡ್ ಮಾಡುತ್ತಿದ್ದರು. ಯುವ ಪೀಳಿಗೆಗಳಂತು ತಾವು ಸ್ಟಾರ್ ಆಗುವ ಕನಸನ್ನು ಕಂಡು ಪ್ರತಿನಿತ್ಯ ಸಿಕ್ಕಸಿಕ್ಕ ಜಾಗದಲ್ಲಿ ವಿಡಿಯೋಗಳನ್ನು ಮಾಡುತ್ತಾ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದರು.

Comments are closed.