ಸದ್ಯ ಈ ತಮಾಷೆಯ ನೃತ್ಯದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಕರ ಡಿಜೆ ಡ್ಯಾನ್ಸ್ ಎಲ್ಲರಲ್ಲೂ ಮುಗುಳ್ನಗೆ ಮೂಡಿಸಿದೆ. ಹೀಗಾಗಿ, ಈ ವಿಡಿಯೋವನ್ನು ಹಲವರು ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಮೆಹೆಂದಿ, ಮದುವೆ, ರಿಸೆಪ್ಶನ್‌ಗಳು ಈಗೀಗ ನೃತ್ಯ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಈ ಡ್ಯಾನ್ಸ್ ಅಲ್ಲಿನ ಸಂಭ್ರಮವನ್ನೂ ಇಮ್ಮಡಿಯಾಗಿಸುತ್ತವೆ. ಉತ್ಸಾಹಿಗಳು ಡಿಜೆಗೆ ಕುಣಿದು ಅಂದು ಆನಂದಿಸುತ್ತಾರೆ. ಸಂಬಂಧಿಕರು, ವಧು ವರರ ಸ್ನೇಹಿತರಿಗೆ ಇದೊಂದು ಖುಷಿಯ ಕ್ಷಣ ಕೂಡಾ ಹೌದು. ಇಂತಹ ಖುಷಿಯ ನೃತ್ಯವನ್ನು ಎಲ್ಲರೂ ಸಖತ್ ಎಂಜಾಯ್ ಮಾಡುತ್ತಾರೆ.
ಮದುವೆ ಸೀಸನ್‌ನಲ್ಲಿ ಇಂತಹ ಡ್ಯಾನ್ಸ್‌ನ ದೃಶ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳಲ್ಲಿ ಕೆಲವೊಂದು ನೋಡಿದ ತಕ್ಷಣ ನಮ್ಮಲ್ಲಿ ತಟ್ಟನೆ ನಗುವರಳಿಸುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದೆ. ಇದು ಯುವಕರ ತಂಡದ ತಮಾಷೆಯ ದೃಶ್ಯ. ಮ್ಯೂಸಿಕ್ ಕಿವಿಗೆ ಬೀಳುತ್ತಿದ್ದಂತೆಯೇ ಈ ಯುವಕರು ಭರ್ಜರಿ ನೃತ್ಯದಲ್ಲಿ ತೊಡಗಿದ್ದರು. ಇವರ ನೃತ್ಯ ಅಲ್ಲಿ ಎಲ್ಲರಲ್ಲೂ ನಗುವಿನಲೆ ಮೂಡಿಸಿತ್ತು. ಈ ದೃಶ್ಯವನ್ನು ಕೆಲವರು ಎರಡೆರಡು ಸಲ ನೋಡಿದರೂ ಅಚ್ಚರಿಯೇನೂ ಇಲ್ಲ.
@iAnshulkaushik ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಡಿಜೆಗೆ ಯುವಕರ ತಂಡ ಹುಚ್ಚೆದ್ದು ಕುಣಿಯುವ ದೃಶ್ಯದ ಮೂಲಕ 23 ಸೆಕೆಂಡಿನ ಈ ದೃಶ್ಯ ಶುರುವಾಗುತ್ತದೆ. ಈ ನೃತ್ಯದ ವೇಳೆ ಈ ಯುವಕರು ತೋರುವ ಹಾವಭಾವ ಎಲ್ಲರಲ್ಲೂ ನಗುವರಳಿಸುವಂತಿದೆ. ಒಬ್ಬ ಬಟ್ಟೆ ಒಗೆಯುವಂತೆ ನಟಿಸಿದರೆ, ಇನ್ನೊಬ್ಬ ನೆಲದಲ್ಲಿ ಹೊರಳಾಡುತ್ತಿರುವುದು ಕೂಡಾ ಇಲ್ಲಿ ಕಾಣಿಸುತ್ತದೆ. ಇನ್ನು ಕೆಲವರು ಚಿತ್ರವಿಚಿತ್ರ ನೃತ್ಯದಲ್ಲಿ ತೊಡಗಿರುವುದನ್ನೂ ಇಲ್ಲಿ ನೋಡಬಹುದು. ಇತ್ತ, ಕ್ಯಾಮೆರಾ ತಿರುಗುತ್ತಿದ್ದಂತೆಯೇ ಅಲ್ಲೊಬ್ಬ ಕಂಬದಲ್ಲಿ ನೇತಾಡುತ್ತಾ ಕುಣಿಯುತ್ತಿದ್ದ…!
इतना भयंकर डांस देखने के बाद जरूर इन्हे बुलाने वाला पछता रहा होगा।#dance #indiandancer pic.twitter.com/8yx6V761wN
— Anshul kaushik🇮🇳 (@iAnshulkaushik) April 13, 2022