ಬೇಸಿಗೆ ಬಂತೆಂದರೆ ಸಾಕು ಪ್ರತಿ ವರ್ಷವೂ ಮದುವೆಗಳು ಸಾಲು ಸಾಲಾಗಿ ನಡೆಯುತ್ತಲೇ ಇರುತ್ತವೆ, ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ವಿವಾಹಗಳು ಒಂದಿಲ್ಲ ಒಂದು ವಿಶೇಷತೆಯಿಂದ ಕೂಡಿರುತ್ತವೆ. ವಧು ವರರ ಮೆರವಣಿಗೆ ಹೋಗುವುದು ಸಹ ಒಂದು ವಿಶೇಷ ಆಚರಣೆಯಾಗಿರುತ್ತದೆ. ಇಂತಹ ಮೆರವಣಿಗೆಯಲ್ಲಿ ಪಾಲ್ಗೊಂಡವರು ನೃತ್ಯ ಮಾಡುವುದು ಸಾಮಾನ್ಯ, ಅಂತಹ ಘಟನೆಗಳನ್ನು ಅಲ್ಲಿದ್ದ ಯಾರಾದರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಇಂತಹ ವಿಡಿಯೋಗಳು ನೆಟ್ಟಿಗರ ಮೊಗದಲ್ಲಿ ಮಂದಹಾಸ ತರುತ್ತಿರುತ್ತವೆ. ಏಕೆಂದರೆ ಅವರು ಮಾಡುವ ಆ ನೃತ್ಯಗಳಲ್ಲಿ ಇದುವರೆಗೂ ನೀವು ನೋಡಿದಂತೆ ನಾಗಿನ್ ಡಾನ್ಸ್ ಮಾಡುವ, ಡಾನ್ಸ್ ಮಾಡುತ್ತಲೇ ಕೆಳಗೆ ಬೀ’ ಳು ವ ಇತ್ಯಾದಿ ಇತ್ಯಾದಿ ಚಿತ್ರ ವಿಚಿತ್ರ ರೀತಿಯಲ್ಲಿ ಡಾನ್ಸ್ ಮಾಡುವ ವಿಡಿಯೋಗಳನ್ನು ನೀವು ನೋಡಿರಬಹುದು.
ಆದರೆ ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಈ ಒಂದು ವಿಡಿಯೋನೇ ಬೇರೆ. ಏಕೆಂದರೆ ಈ ವಿಡಿಯೋದಲ್ಲಿ ಮದುವೆಯ ಮೆರವಣಿಗೆ ಹೋಗುತ್ತಿರುವಾಗ ನೃತ್ಯ ಮಾಡಿದ್ದು ಸ್ವತಃ ಮಧುಮಗನೇ ಆಗಿದ್ದು, ಅವರು ಮಾಡಿರುವ ಆ ಒಂದು ನೃತ್ಯದ ಝಲಕ್ ಕಂಡು ಮೆರವಣಿಗೆಗೆ ಬಂದವರೆಲ್ಲ ನಗುತ್ತಲೇ ಕಾಲ್ಕಿತ್ತಿದ್ದಾರೆ.
ಅಲ್ಲಿದ್ದ ಯಾರೋ ಒನ್ ಟೂ ತ್ರಿ ಸ್ಟಾರ್ಟ್ ಎನ್ನುತ್ತಿದ್ದಂತೆ ಈತ ಸ್ಟೆಪ್ಸ್ ಹಾಕಲು ಶುರು ಮಾಡುತ್ತಾನೆ, ಈತನ ಜೊತೆಗೆ ಇನ್ನಿಬ್ಬರು ಮಹಿಳೆಯರು ಸಹ ಹೆಜ್ಜೆ ಹಾಕಿದ್ದು ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ಇದಲ್ಲದೆ ವಿವಾಹಕ್ಕೆ ಸಂಬಂಧಿಸಿದ ಇನ್ನು ಕೆಲವು ಫನ್ನಿ ವಿಡಿಯೋಗಳು ಸಹ ಈ ವಿಡಿಯೋದಲ್ಲಿ ಅಡಗೊಂಡಿದ್ದು, ನಿಮ್ಮನ್ನು ನಕ್ಕು ನಗಿಸುವಲ್ಲಿ ಹಿಂದೆ ಬೀಳುವುದಿಲ್ಲ.
ಅಂದಹಾಗೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಯೂ ಟ್ಯೂಬ್ ನ DPA Tech info ಎಂಬ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದ್ದು ಇದುವರೆಗೂ 15 ಲಕ್ಷ ವೀಕ್ಷಣೆ ಹಾಗೂ ಹತ್ತಿರ ಹತ್ತಿರ 8 ಸಾವಿರ ಲೈಕ್ಸ್ ಪಡೆದಿದೆ. ಅಲ್ಲದೇ ಹಲವಾರು ಜನರು ಕಾಮೆಂಟ್ ಮೂಲಕ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದು ಅದರಲ್ಲಿ ಓರ್ವ ಈತ ಶಕೀರಾಳನ್ನು ಮೀರಿಸಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾನೆ!
ಆ ವಿಡಿಯೊ ಕೆಳಗಿದೆ ನೋಡಿ…