ಮದುವೆ ಅನ್ನೋದು ಜೀವನದಲ್ಲಿ ಅತ್ಯಂತ ಸಂಭ್ರಮದ ಒಂದು ಗಳಿಗೆಗಳಲ್ಲಿ ಒಂದು. ಮದುವೆಯಾಗುವ ಹುಡುಗ ಮತ್ತು ಹುಡುಗಿ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗುವುದು ಮಾತ್ರವಲ್ಲ , ಅಲ್ಲಿ ಎರಡು ಕುಟುಂಬಗಳು ಜೊತೆಯಾಗಿ ಕೂಡಿ ಸಂಭ್ರಮವನ್ನು ಆಚರಿಸುತ್ತಾರೆ. ಎರಡು ಕುಟುಂಬಗಳು ಒಂದಾಗುತ್ತಾರೆ. ಇನ್ನು ಮದುವೆಯಾಗಲು ಹೊರಟ ಆಕೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.
ತನ್ನ ಗಂಡನ ಮನೆ ಅವರು ತನ್ನ ಮುಂದಿನ ಸಂಸಾರ ಇದೆಲ್ಲದರ ಬಗ್ಗೆ ಸಾಕಷ್ಟು ಆಸೆ ಕನಸುಗಳು ಆಕೆಯ ಕಣ್ಣಿನಲ್ಲಿರುತ್ತವೆ. ಸಾಕಷ್ಟು ಹುಡುಗಿಯರಿಗೆ ವರ ಎನ್ನುವಂತೆ ಉತ್ತಮವಾದ ಮನೆಯೇ ಸಿಗುತ್ತದೆ ಆದರೆ ಇನ್ನೂ ಕೆಲವರಿಗೆ ಗಂಡನ ಮನೆ ಅನ್ನುವುದು ನರಕ ಸದೃಶವು ಹೌದು. ಒಬ್ಬಳು ಹುಡುಗಿ ಮದುವೆಯಾಗಿ ತಮ್ಮ ಮನೆಗೆ ಕರೆದುಕೊಂಡು ಬರುತ್ತೇವೆ ಎನ್ನುವಾಗ ಆ ಮನೆಯಲ್ಲಿಯೂ ಕೂಡ ಸಂತಸ ಮನೆ ಮಾಡಿರುತ್ತೆ.
ತಮ್ಮ ಮನೆಗೆ ಸೊಸೆಯಾಗಿ ಬರುವ ಹುಡುಗಿ ಮಗಳಾಗಿ ತಮ್ಮೊಂದಿಗೆ ಬೆರೆಯಬೇಕು ಎನ್ನುವ ಆಸೆ ಅವರಲ್ಲಿಯೂ ಇರುತ್ತೆ ಇನ್ನು ಮದುವೆಯಾಗುವ ಗಂಡು ಕೂಡ ತಾನು ಮದುವೆಯಾಗುವ ಹುಡುಗಿ ಅತ್ಯಂತ ಚೆನ್ನಾಗಿ ನನ್ನೊಂದಿಗೆ ಸಂಸಾರ ನಡೆಸಿಕೊಂಡು ಹೋಗಬೇಕು ಎನ್ನುವ ಆಸೆ ಇರುತ್ತೆ. ಹಾಗಾಗಿ ಮದುವೆಯನ್ನು ಎರಡು ಕುಟುಂಬದವರು ಅತ್ಯಂತ ಸಂಭ್ರಮದಲ್ಲಿಯೇ ನೆರವೇರಿಸುತ್ತಾರೆ.
ಇನ್ನು ಮದುವೆ ಎನ್ನುವುದು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಇರುತ್ತೆ. ಕೆಲವರು ಮದುವೆಯಲ್ಲಿ ಅಂತೂ ನೃತ್ಯವೇ ಮುಖ್ಯ ಆಕರ್ಷಣೆ. ಮದುವೆಯ ಹುಡುಗ ಹಾಗೂ ಹುಡುಗಿಯ ಸ್ನೇಹಿತರು ಮನೆಯವರು ಕೂಡಿ ನೃತ್ಯ ಸಂಯೋಜನೆ ಮಾಡುತ್ತಾರೆ. ಜೊತೆಗೆ ಹಸಿಮಣೆ ಏರಲಿರುವ ಹುಡುಗ ಹುಡುಗಿಯು ಕೂಡ ನೃತ್ಯ ಮಾಡಿ ತಮ್ಮ ಈ ಸಂಭ್ರಮದ ಕ್ಷಣವನ್ನು ಇನ್ನಷ್ಟು ಹಸಿರಾಗಿಸಿಕೊಳ್ಳುತ್ತಾರೆ.
ಇನ್ನು ಮದುವೆಯಲ್ಲಿ ನೃತ್ಯ ಮಾಡುವುದು ಉತ್ತರದ ಭಾಗದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿರುವ ಒಂದು ವಿಡಿಯೋವನ್ನು ನೋಡಿದರೆ ನಿಮಗೆ ಇದರ ಬಗ್ಗೆ ಕ್ಲಾರಿಟಿ ಸಿಗುತ್ತೆ. ಯಾಕಂದ್ರೆ ಮದುವೆಯಾಗಿ ಗಂಡನ ಮನೆ ಸೇರಿದ ವಧುವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡ ಆ ಮನೆಯವರು ಆಕೆಗೆ ನೃತ್ಯವನ್ನು ಕಲಿಸುವ ಮೂಲಕ, ಆಕೆಯೊಂದಿಗೆ ಹಾಡಿಗೆ ಸ್ಟೆಪ್ ಹಾಕುವುದರ ಮೂಲಕ ಆ ಸಮಯವನ್ನು ಇನ್ನಷ್ಟು ರಂಗಾಗಿಸಿದ್ದಾರೆ.
ಮನೆಗೆ ಬಂದ ಅತ್ತಿಗೆಗೆ ನಾದಿನಿ ಒಂದು ಹಾಡಿಗೆ ಡ್ಯಾನ್ಸ್ ಕಲಿಸಲು ಮುಂದಾಗಿದ್ದಾಳೆ. ಮನೆಯವರೆಲ್ಲರೂ ಕುಳಿತು ಈ ನೃತ್ಯ ಪ್ರದರ್ಶನವನ್ನು ನೋಡುತ್ತಿದ್ದಾರೆ. ಆದರೆ ಮೊದಲು ಸುಮ್ಮನೆ ಕುಳಿತಿದ್ದ ಮದುಮಗಳು ಹಾಡಿನ ಬೀಟ್ಸ್ ಬರುತ್ತಿದ್ದ ಹಾಗೆ ಸುಂದರವಾಗಿ ಆ ಹಾಡಿಗೆ ಸ್ಟೆಪ್ಸ್ ಹಾಕಿದ್ದಾಳೆ. ಆಕೆಗೆ ದೃತ್ಯದ ಸ್ಟೆಪ್ಸ್ ಕಲಿಸಲು ಹೋದ ನಾದಿನಿ ಕೊನೆಗೆ ಆಕೆ ಸುಸ್ತಾಗಿ ಬಿಟ್ಟಿದ್ದಾಳೆ. ಅತ್ತಿಗೆಗೆ ನೃತ್ಯ ಮಾಡೋದಕ್ಕೆ ಬರೋಲ್ಲ ಎನ್ನುವ ನಾದಿನಿಯ ಲೆಕ್ಕಾಚಾರ ತಲೆಕೆಳಗಾಗಿದೆ.
ನಾದಿನಿಗಿಂತಲೂ, ಮನೆಗೆ ಬಂದ ಹೊಸ ವಧು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಅತ್ತಿಗೆ ಹಾಗೂ ನಾದಿನಿಯರ ಈ ವಿಡಿಯೋ ಎರಡು ನಿಮಿಷ ಐದು ಸೆಕೆಂಡುಗಳ ಕಾಲ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ byohbaraat ಎನ್ನುವ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಲೈಕ್ ಕಮೆಂಟ್ ಗಳು ಬಂದಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೋಡಿದರೆ ಖಂಡಿತವಾಗಿಯೂ ನಿಮಗೆ ಖುಷಿಯಾಗುತ್ತೆ.