ನಡು ರಸ್ತೆಯಲ್ಲಿ ಸುಂಟರಗಾಳಿ ಹಾಡಿಗೆ ಮುದುಕರು ಹುಚ್ಚೆದ್ದು ಕುಣಿಯುವಂತೆ ಡಾನ್ಸ್ ಮಾಡಿದ ದಾವಣಗೆರೆಯ ಚೆಲುವೆ! ವಾವ್ ಸೂಪರ್ ಡಾನ್ಸ್ ನೋಡಿ!!

Entertainment/ಮನರಂಜನೆ

ನೀವು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದೀರಾ? ಹಾಗಾದರೆ ಇನ್ಸ್ಟಾಗ್ರಾಮ್ ನಲ್ಲಿ ಹಲವರನ್ನು ಫಾಲೋ ಮಾಡ್ತಾ ಇರ್ತಿರಿ. ಇತ್ತೀಚಿಗೆ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಹಲವು ಯುವತಿಯರು ಇನ್ಸ್ಟಾದಲ್ಲಿ ಇಂದು ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಅಂತವರಲ್ಲಿ ವಿದ್ಯಾ ವಿಧು ಎನ್ನುವ ಹುಡುಗಿ ಕೂಡ ಒಬ್ಬಳು.

ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ. ಇತ್ತೀಚಿಗೆ ಬಿಗ್ ಬಾಸ್ ಒಟಿಟಿಗೆ ಹೋಗಿ ಬಂದ ಸೋನು ಶ್ರೀನಿವಾಸ ಗೌಡ ಇರಬಹುದು, ಸ್ಪೂರ್ತಿ ಗೌಡ ಇರಬಹುದು. ಇವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗಳನ್ನು ಮಾಡಿ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಮೊದಲು ಟಿಕ್ ಟಾಕ್ ಎನ್ನುವ ಆಪ್ ಇತ್ತು.

ಆಗ ಅಲ್ಲಿ ಹಲವು ಯುವಕ ಯುವತಿಯರು, ಸಿನಿಮಾ ಹಾಡುಗಳಿಗೆ ಸ್ಟೆಪ್ಸ್ ಹಾಕ್ತಾ ಇದ್ರು. ಆ ಆಪ್ ಬ್ಯಾನ್ ಆದ ನಂತರ ಎಲ್ಲರೂ ಆಯ್ದುಕೊಂಡಿದ್ದು ಇನ್ಸ್ಟಾಗ್ರಾಮ್. ಇಂದು ಹಲವರ ಆದಾಯದ ಮೂಲವೂ ಕೂಡ ಆಗಿದೆ ಇನ್ಸ್ಟಾಗ್ರಾಮ್. ದಾವಣಗೆರೆಯ ವಿದ್ಯಾ, ತಮ್ಮನ್ನು ಹೆಮ್ಮೆಯ ಕನ್ನಡತಿ ಎಂದು ಕರೆದುಕೊಳ್ಳುತ್ತಾರೆ. ಈ ಹಿಂದೆ ಟಿಕ್ ಟಾಕ್ ಸ್ಟಾರ್ ಆಗಿದ್ದ ವಿದ್ಯಾ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದರ ಮೂಲಸ ಸೂಶಿಯಲ್ ಮಿಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ಇತ್ತಿಚಿಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳನ್ನೂ ಕೂಡ ಪಡೆದುಕೊಂಡಿದ್ದಾರೆ. ಹೌದು, ಸಿರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಮರ ಮಧುರ ಪ್ರೇಮ ಎನ್ನುವ ಧಾರಾವಾಹಿಯಲ್ಲಿ ವಿದ್ಯಾ ಮಧುರ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚಿಗೆ ಎಸಿಎಫ್‌ಎ ಇಂಡಿಯನ್ ಐಕಾನ್ ಗೋಲ್ಡನ್ ಅಚೀವರ್ಸ್ ಅವಾರ್ಡ್ 2022 ನಲ್ಲಿ ’ಬೆಸ್ಟ್ ಆಸ್ಪೈರಿಂಗ್ ಆಕ್ಟ್ರೆಸ್ಸ್ ಆಫ್ ದಿ ಇಯರ್’ ಎನ್ನುವ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ವಿದ್ಯಾ.

ವಿದ್ಯಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 300k ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಇತ್ತೀಚಿಗೆ ಕಾಂತರಾ ಸಿನಿಮಾದ ನಿರ್ದೇಶಕ ರಿಷಭ್ ಶೆಟ್ಟಿ ಅವರ ಜೊತೆಗೆ ಸಿಂಗಾರ ಸಿರಿಯೆ ಹಾಡಿಗೂ ಕೂಡ ನೃತ್ಯ ಮಾಡಿದ್ರು. ಇದಕ್ಕೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳು ಬಂದಿವೆ. ಇನ್ನು ಜೋಷ್ ಆಪ್‌ನಲ್ಲಿಯೂ ಕೂಡ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವ ವಿದ್ಯಾ ಅವರಿಗೆ ಜೋಶ್ ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ.

ಇತ್ತೀಚಿಗೆ ವಿದ್ಯಾ ಅವರು ಸುಂಟರಗಾಳಿ ಹಾಡಿಗೆ ಸ್ಟೆಪ್ಸ್ ಹಾಕಿದ್ದು ಪಡ್ಡೆ ಹುಡುಗರ ನಿದ್ದೆ ಗಾಳಿಗೆ ಹಾರಿಹೋದಂತಾಗಿದೆ. ಅಷ್ಟು ಹಾಟ್ ಆಗಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ವಿದ್ಯಾ. ಇವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳು ಬಂದಿವೆ. ವಿದ್ಯಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ನೀವು ನೋಡಬಹುದು. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

 

View this post on Instagram

 

A post shared by Vidhya_vidhu (@vidhya_vidhu21)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...