ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ ಎನ್ನುವ ಮಾತನ್ನು ನಾವು ಈಗಾಗಲೇ ಬಹಳಷ್ಟು ಬಾರಿ ಕೇಳಿದ್ದೇನೆ ಅದಕ್ಕೆ ಸಾಕ್ಷಿ ಎನ್ನುವಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಹೋದರೂ ಕೂಡಾ ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಎದುರಿಸಿ ಸವಾಲುಗಳನ್ನು ದಾಟಿಕೊಂಡು ಸಾಧನೆಯನ್ನು ನಡೆದಂತಹ ಅಷ್ಟು ಜನ ಪ್ರತಿಭಾವಂತ ಸಾಧಕರು ಕಣ್ಮುಂದೆ ಇದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಗುರಿಯ ಕಡೆಗೆ ದೃಢವಾದ ನಿರ್ಧಾರ ಹಾಗೂ ಶ್ರಮ ಹಾಕಿದರೆ, ಯಶಸ್ಸಿನತ್ತ ಸಾಗುವ ಪ್ರತಿಭಾವಂತನನ್ನು ತಡೆಯುವ ಶಕ್ತಿ ಯಾವುದೂ ಇಲ್ಲ ಎನ್ನುವ ವಿಷಯ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ.
ಪ್ರತಿಭೆ ಎಲ್ಲಿ ಬೇಕಾದರೂ ಅರಳಬಹುದು ಎನ್ನುವುದನ್ನು ಸಾಬೀತು ಮಾಡುತ್ತದೆ. ಪ್ರತಿಭೆ ಎನ್ನುವುದಕ್ಕೆ ಬಡವ ಅಥವಾ ಶ್ರೀಮಂತ ಎನ್ನುವ ಬೇಧವಿಲ್ಲ. ಪ್ರತಿಭೆಯು ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತಿರುವ ಅರಮನೆಯಲ್ಲಿ ಬೇಕಾದರೂ ಅರಳಬಹುದು ಅಥವಾ ಯಾವುದೇ ಅಗತ್ಯ ಸೌಲಭ್ಯಗಳು ಇಲ್ಲದ ಒಂದು ಪುಟ್ಟ ಗುಡಿಸಿಲಿನಲ್ಲಿ ಕೂಡಾ ಅರಳಬಹುದು. ಅದಕ್ಕೆ ಭಾಷೆ, ಸಂಸ್ಕೃತಿ, ರಾಜ್ಯ, ಧ ರ್ಮ ಅಂತಹ ಯಾವುದೇ ಗಡಿಗಳು ಇರುವುದಿಲ್ಲ.
ಪ್ರತಿಭಾವಂತನ ಅತಿದೊಡ್ಡ ಶಕ್ತಿಯೇ ಆತನಲ್ಲಿರುವ ಪ್ರತಿಭೆಯೆನ್ನಬಹುದು. ಸೋಶಿಯಲ್ ಮೀಡಿಯಾ ಗಳು ಬಹಳಷ್ಟು ಪ್ರಭಾವಶಾಲಿಯಾಗಿರುವ ಇತ್ತೀಚಿನ ವರ್ಷಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಪ್ರತಿಭೆ ಕೂಡಾ ಬಹಳ ಸುಲಭವಾಗಿ ಜನರ ಮುಂದೆ ಬರಲು ಸಾಧ್ಯವಾಗಿದೆ.
ಸೋಶಿಯಲ್ ಮೀಡಿಯಾಗಳ ಪ್ರಭಾವದಿಂದಾಗಿ ಅದೆಷ್ಟೋ ಜನ ಪ್ರತಿಭಾವಂತರ ಪ್ರತಿಭೆಯು ವಿಡಿಯೋಗಳ ರೂಪದಲ್ಲಿ ಜನರ ಮುಂದೆ ಬರುತ್ತಿವೆ, ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿವೆ, ಕೆಲವರಿಗೆ ಅವರ ಜೀವನದ ದಿಕ್ಕನ್ನು ಬದಲಿಸಲು ಕಾರಣವಾಗುತ್ತಿದೆ. ಪ್ರಸ್ತುತ ಅಂತಹುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಜನರು ಸಹಾ ಅಪಾರವಾದ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಈ ವಿಶೇಷ ವಿಡಿಯೋದಲ್ಲಿ ಗುಡಿಸಲುಗಳಲ್ಲಿ ವಾಸಿಸುವ ಬಡವರ ಮಕ್ಕಳು ಅದ್ಭುತವಾಗಿ ಡಾನ್ಸ್ ಮಾಡುವುದನ್ನು ನಾವು ನೋಡಬಹುದಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯರು ಹಿಂದಿ ಸಿನಿಮಾವೊಂದರ ಹಾಡಿಗೆ ಬಹಳ ಅಚ್ಚುಕಟ್ಟಾಗಿ ಹಾಗೂ ಬಹಳ ಸುಂದರವಾದ ಸ್ಟೆಪ್ಪುಗಳನ್ನು ಹಾಕುವ ಮೂಲಕ ತಮ್ಮ ಡಾನ್ಸ್ ಪ್ರತಿಭೆಯನ್ನು ತೋರಿಸಿದ್ದಾರೆ.
ಯಾವುದೇ ತರಬೇತಿ ಪಡೆಯದೆ ತಮ್ಮ ಪ್ರತಿಭೆಯಿಂದಲೇ ಅದ್ಭುತವಾಗಿ ನೃತ್ಯ ಮಾಡಿರುವ ಈ ಬಾಲಕಿಯರ ಕಂಡು ನೆಟ್ಟಿಗರು ಅಚ್ಚರಿಯನ್ನೂ ಜೊತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭೆ ಎನ್ನುವುದಕ್ಕೆ ಬಡವ ಅಥವಾ ಶ್ರೀಮಂತ ಎನ್ನುವ ಭೇ ದ ವಿಲ್ಲ ಎಂದು ಈ ವೀಡಿಯೋ ಸಾಬೀತು ಮಾಡಿದೆ ಎಂದು ಕೆಲವರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…