ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವೀಡಿಯೋಗಳಿಗೆ ಕೊರತೆಯೇನಿಲ್ಲ. ಸೆಲೆಬ್ರಿಟಿಗಳಿಗಿಂದ ಹಿಡಿದು ಸಾಮಾನ್ಯರ ವರೆಗೆ, ತರಬೇತಿ ಪಡೆದ ಡ್ಯಾನ್ಸರ್ ಗಳಿಂದ ಹಿಡಿದು, ಹವ್ಯಾಸಿ ಡ್ಯಾನ್ಸರ್ ಗಳ ವರೆಗೂ ಸಹಸ್ರಾರು ಸಂಖ್ಯೆಯಲ್ಲಿ ಡ್ಯಾನ್ಸ್ ಪ್ರಿಯರು ತಮ್ಮ ಡ್ಯಾನ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವೀಡಿಯೋಗಳ ಸಹಾ ಭರ್ಜರಿಯಾಗಿ ವೈರಲ್ ಆಗುತ್ತವೆ.
ಆದರೆ ಕೆಲವೊಮ್ಮೆ ಕೆಲವು ವಿಚಿತ್ರ ಎನಿಸುವ ಡ್ಯಾನ್ಸ್ ಗಳು ಸಹಾ ವೈರಲ್ ಆಗುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ. ಇಂತಹ ವೀಡಿಯೋಗಳನ್ನು ನೋಡಿದ ಮಂದಿ ಸಹಾ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳನ್ನು ನೀಡುತ್ತಾರೆ ಮತ್ತು ಶೇರ್ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರವಾದ ಡ್ಯಾನ್ಸ್ ಈಗ ಎಲ್ಲರನ್ನೂ ನಕ್ಕು ನಗಿಸುತ್ತಿದೆ.
ಏಕೆಂದರೆ ಇದು ಬ್ರೇಕ್ ಅಥವಾ ಡಿಸ್ಕೋ ಡ್ಯಾನ್ಸ್, ಇನ್ನಾವುದೋ ಆಧುನಿಕ ಡ್ಯಾನ್ಸ್ ಆಗಲೀ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾಗಿರುವ ನಾಗಿನ್ ಡ್ಯಾನ್ಸ್ ಸಹಾ ಅಲ್ಲ.ಬದಲಾಗಿ ಇದು ಕೋಳಿ ಡ್ಯಾನ್ಸ್ ಆಗಿದೆ. ಬಹುಶಃ ನಿಮಗೆ ಈ ಡ್ಯಾನ್ಸ್ ನ ಹೆಸರನ್ನು ಕೇಳಿಯೇ ಅಚ್ಚರಿ ಉಂಟಾಗಿರಬಹುದು ಆದರೆ ಸದ್ಯಕ್ಕಂತೂ ಈ ಡ್ಯಾನ್ಸ್ ಎಲ್ಲರ ಗಮನವನ್ನು ಸೆಳೆದಿದೆ.
ನೋಡುಗರು ಮಾತ್ರ ಇದನ್ನು ಸಾಕಷ್ಟು ಮೆಚ್ಚಿಕೊಂಡು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಹಾಗಾದ್ರೆ ಏನೀ ಡ್ಯಾನ್ಸ್ ಎಂದು ನಾವು ಸ್ವಲ್ಪ ನೋಡೋಣ ಬನ್ನಿ. ವೀಡಿಯೋದಲ್ಲಿ ಯಾವುದೋ ಒಂದು ಡ್ಯಾನ್ಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ವೇದಿಕೆಯ ಮೇಲೆ ಬಂದ ಯುವಕ ಅಲ್ಲಿನ ಡ್ಯಾನ್ಸರ್ ಗಳ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುತ್ತಾನೆ.
ಆತ ಕೋಳಿಯ ಮ್ಯೂಸಿಕ್ ಗೆ ಸಖತ್ ಸ್ಟೆಪ್ ಗಳನ್ನು ಹಾಕಿ, ಅಲ್ಲಿದ್ದ ಡ್ಯಾನ್ಸರ್ ಗೂ ಹಾಗೆ ಮಾಡುವಂತೆ ಸೂಚನೆ ನೀಡುತ್ತಾನೆ. ಆದರೆ ಆ ಯುವತಿಗೆ ಯುವಕನ ಹಾಗೆ ಕೋಳಿಯಂತೆ ಡ್ಯಾನ್ಸ್ ಮಾಡುವುದು ಆಗುವುದಿಲ್ಲ. ಆದರೆ ಯುವಕ ಮಾತ್ರ ಕೋಳಿ ಮ್ಯೂಸಿಕ್ ಗೆ ಭರ್ಜರಿ ಹೆಜ್ಜೆಗಳನ್ನು ಹಾಕಿ ಗಮನ ಸೆಳೆದಿದ್ದಾನೆ. ಆತನ ಡ್ಯಾನ್ಸ್ ನಲ್ಲಿ ಸಿಕ್ಕಾಪಟ್ಟೆ ಜೋಶ್ ಹಾಗೂ ಡ್ಯಾನ್ಸ್ ಮಾಡುವ ಕ್ರೇಜ್ ಎರಡೂ ಸಹಾ ಕಂಡಿದೆ.
ವೈರಲ್ ಆಗಿರುವ ಈ ವೀಡಿಯೋವನ್ನು ಲಕ್ಷಗಳ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ಮೂರು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಡಿಯೋಗೆ ಲೈಕ್ ನೀಡಿದ್ದರೆ, ಒಂಬತ್ತು ಸಾವಿರಕ್ಕೂ ಅಧಿಕ ಮಂದಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವೀಡಿಯೋಗೆ ಕಾಮೆಂಟ್ ಗಳು ಹರಿದು ಬಂದಿವೆ.
ನೆಟ್ಟಿಗರು ವೀಡಿಯೋಗೆ ವೈವಿದ್ಯಮಯ ಕಾಮೆಂಟ್ ಗಳನ್ನು ನೀಡಿದ್ದಾರೆ. ಬಹುತೇಕ ಎಲ್ಲರೂ ಈ ಹೊಸ ಶೈಲಿಯ ಡ್ಯಾನ್ಸ್ ಗೆ ಮೆಚ್ಚುಗೆ ನೀಡಿದ್ದಾರೆ. ಒಂದಷ್ಟು ಜನ ಯುವಕನ ಜೋಶ್ ನೋಡಿ ಸೂಪರ್ ಎಂದಿದ್ದಾರೆ. ಒಂದಿಬ್ಬರು ಅವನೊಬ್ಬ ಹುಚ್ಚ ಎಂದು ವ್ಯಂಗ್ಯ ಮಾಡಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…