ನೇಹಾ ಎನ್ನುವ ಹುಡುಗಿ ಬಾಲಿವುಡ್ ಚಿತ್ರರಂಗದ ಆಲ್ ಟೈಮ್ ಸೂಪರ್ ಹಿಟ್ ಹಾಡು ಆಗಿರುವ ಮುನ್ನಿ ಬದ್ನಾಮ್ ಹುಯಿ ಎನ್ನುವ ಹಾಡಿಗೆ ದೇವಸ್ಥಾನದ ಆವರಣದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ನೋಡಿರುವ ಬಜರಂಗದಳದ ಕಾರ್ಯಕರ್ತರು ಆಕೆಯ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಹಿಂದುಗಳ ಭಾವನೆಗೆ ದಕ್ಕೆ ತರುವಂತಹ ವಿಡಿಯೋ ಇದಾಗಿದೆ ಎಂಬುದಾಗಿ ಆಕೆಯ ವಿರುದ್ಧ ಕೆಂಗಣ್ಣು ಕಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಕೆಗೆ ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದಾರೆ. ವೀವ್ಸ್ ಪಡೆಯುವ ಚಟಕ್ಕೆ ಇಂತಹ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಿರುವ ಆಕೆಯ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು ಆಕೆಯ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಕೂಡ ಇದೆ. ಇನ್ನು ವಿಡಿಯೋ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೇಹಾ ಆ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದಾಳೆ.
ವಿಡಿಯೋವನ್ನು ಡಿಲೀಟ್ ಮಾಡಿದ್ದ ನಂತರ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಅದರಲ್ಲಿ ಯಾರಿಗಾದರೂ ನನ್ನಿಂದ ಅವರ ಭಾವನೆಗೆ ದಕ್ಕೆ ಆಗಿದ್ದರೆ ಕ್ಷಮಿಸಿ, ಈ ತರಹ ವಿಡಿಯೋ ಮಾಡಬಾರದಾಗಿತ್ತು ಎಂಬುದಾಗಿ ಕ್ಷಮೆ ಕೋರಿದ್ದಾಳೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.