ನಮ್ಮ ದೇಶದ ಆರ್ಥಿಕ ಬೆನ್ನೆಲುಬು ರೈತ, ಕೃಷಿಯು ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ಮಾಡುವ ಕಸುಬು ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬದಲಾಯಿಸಿ ಕೃಷಿಯನ್ನು ಕೂಡ ಒಂದು ಉದ್ಯಮವಾಗಿ ಮಾರ್ಪಡಿಸುತ್ತಿದ್ದಾರೆ. ಈಗ ರೈತರು ಕೃಷಿ ಮಾಡುವುದರ ಜೊತೆಗೆ ತಮ್ಮ ವ್ಯವಸಾಯಕ್ಕೂ ಅನುಕೂಲ ಆಗುವ ಮತ್ತು ಅದರಿಂದಲೂ ಸಹ ಆದಾಯ ಬರುವಂತಹ ಇನ್ನಿತರ ಕೆಲಸಗಳನ್ನು ಜೊತೆ ಜೊತೆಗೆ ಮಾಡಿಕೊಳ್ಳುತ್ತಿದ್ದಾರೆ.
ಅಂಥ ಕೆಲಸಗಳಲ್ಲಿ ಕುರಿಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣಿಕೆ ಇನ್ನು ಇತ್ಯಾದಿಗಳನ್ನು ಉದಾಹರಣೆಸಬಹುದು. ಅದರಲ್ಲಿ ಹೈನುಗಾರಿಕೆಯು ಕೃಷಿಯ ಭಾಗವು ಹೌದು, ಉದ್ಯಮವು ಹೌದು (Dairy farming information ). ರೈತ ತನ್ನ ವ್ಯವಸಾಯಕ್ಕೆ ಅನುಕೂಲ ಆಗಲಿ ಎಂದು ಮನೆಯಲ್ಲಿ ಸಾಮಾನ್ಯವಾಗಿ ದನಗಳನ್ನು – ಹಸುಗಳನ್ನು ಸಾಕುತ್ತಾನೆ. ಅದನ್ನು ಉಳಿಮೆ ಕೆಲಸಕ್ಕೆ ಅಥವಾ ಇತರ ಕೃಷಿ ಭೂಮಿಯ ಕೆಲಸಕ್ಕೆ ಪಳಗಿಸಿಕೊಳ್ಳುತ್ತಾನೆ. ಜೊತೆಗೆ ಅದರ ಸೆಗಣಿಯನ್ನು ಉತ್ತಮ ಗೊಬ್ಬರವನ್ನಾಗಿ ಬಳಸುತ್ತಾನೆ ಹಾಗೂ ಅದು ಕೊಡುವ ಹಾಲನ್ನು ತನ ದಿನನಿತ್ಯದ ಖರ್ಚಿಗೆ ಬಳಸಿಕೊಳ್ಳುತ್ತಾನೆ.
ಈಗ ಎಲ್ಲಾ ಕ್ಷೇತ್ರದಂತೆ ಕೃಷಿಯಲ್ಲೂ ಸಹ ಸಾಕಷ್ಟು ಮಾರ್ಪಾಡು ಆಗಿರುವುದರಿಂದ ಹೈನುಗಾರಿಕೆಯನ್ನು ಈಗ ಅತಿ ದೊಡ್ಡ ಉದ್ಯಮವನ್ನಾಗಿ ಮಾಡಿಕೊಳ್ಳಲಾಗಿದೆ. ಪ್ರಪಂಚದಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಹೈನುಗಾರಿಕೆಯು ಉತ್ತಮ ಆದಾಯ ತರುವ ಕಸುಬಾಗಿದೆ. ನಮ್ಮ ದೇಶದಲ್ಲೂ ಅನೇಕರು ಇದೇ ಉದ್ಯಮದಲ್ಲಿ ತೊಡಗಿಕೊಂಡಿದ್ದು ತಿಂಗಳಿಗೆ ಯಾವುದೇ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಗೂ ಕಡಿಮೆ ಇರದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ನಿವಾಸಿಯಾದ ರಾಮಕೃಷ್ಣ ಎನ್ನುವವರನ್ನು ಉದಾಹರಣೆಯಾಗಿ ಹೇಳಬಹುದು. ರಾಮಕೃಷ್ಣ ಅವರು ಒಬ್ಬ ಕೃಷಿಕ ಹಾಗೂ ಕುಸ್ತಿಪಟು ಕೂಡ ಆಗಿದ್ದಾರೆ. ವೃತ್ತಿ ಕೃಷಿಯಾಗಿದ್ದರೆ ಪ್ರವೃತ್ತಿಯಾಗಿ ಕುಸ್ತಿಪಟು ಆಗಿರುವ ಇವರು ಕೃಷಿ ಕೆಲಸ ಜೊತೆ ಹೈನುಗಾರಿಕೆಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ.
ಇವರು ಹೈನುಗಾರಿಕೆಯನ್ನೇ ತಮ್ಮ ಉದ್ಯಮವನ್ನಾಗಿ ಕೂಡ ಮಾಡಿಕೊಂಡಿದ್ದಾರೆ, ಮೊದಲಿಗೆ ತಮ್ಮ ಮಕ್ಕಳಿಗಾಗಿ ಹಸುವನ್ನು ಖರೀದಿಸಿ ತಂದಿದ್ದ ಇವರು ನಂತರ ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಎರಡರಿಂದ ನಾಲ್ಕು ನಾಲ್ಕರಿಂದ ಎಂಟು ಹೀಗೆ ಬೆಳೆದು ಈಗ 50 ಹಸು ಗಳನ್ನು ಸಾಕುತ್ತಿದ್ದಾರೆ. ತಮ್ಮ ಊರಿನ ಹಾಲಿನ ಡೈರಿಯ ಕೆಲಸಗಾರರ ಜೊತೆ ಬೇಸರಿಸಿಕೊಂಡ ಇವರು ಅದೇ ಹಠಕ್ಕಾಗಿ ತಾವೇ ಡೈರಿ ಓಪನ್ ಮಾಡುವ ಹಠ ತೊಟ್ಟು ಹೈನುಗಾರಿಕೆಗೆ ಇಳಿದರು.
ಅದೃಷ್ಟಕ್ಕೆ ಅವರ ನಿರೀಕ್ಷೆ ಹಾಗೂ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ದೊರೆತಿದೆ. ಈಗ 50 ಹಸುಗಳನ್ನು ಸಾಕುತ್ತಿರುವ ಅವರು ಅವರ ಎಲ್ಲಾ ಖರ್ಚುಗಳನ್ನು ಕಳೆದು ತಿಂಗಳಿಗೆ ಎರಡು ಲಕ್ಷ ಹಣವನ್ನು ಉಳಿಸುತ್ತಿದ್ದಾರಂತೆ. ತಮಗೆ ಇರುವ ಒಂದೂವರೆ ಎಕರೆ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಫಾರ್ಮ್ ನಿರ್ಮಿಸಿ ಮತ್ತು ಉಳಿದ ಒಂದು ಎಕರೆಯಲ್ಲಿ ಹಸುಗಳಿಗಾಗಿ ಮೇವು ಮೇವಿನ ಪೈರನ್ನು ಬೆಳೆಸುತ್ತಿದ್ದಾರೆ.
ಇವರು ತುಂಬಾ ಅಚ್ಚುಕಟ್ಟಾಗಿ ಅವುಗಳ ಪೋಷಣೆ ಮಾಡುತ್ತಿದ್ದಾರೆ. ಹಸುಗಳಿಗಾಗಿ ಶೆಡ್ ನಿರ್ಮಿಸಿ ಅವುಗಳ ಮೇವಿಗೆ ಮತ್ತು ಅವುಗಳನ್ನು ಕ್ಲೀನ್ ಮಾಡಲು ಸೇವೆ ಮಾಡಲು ಮತ್ತು ನೀರು ಕುಡಿಸಲು ಎಲ್ಲವನ್ನೂ ಸಹ ವ್ಯವಸ್ಥಿತವಾಗಿ ಮಾಡಿಕೊಂಡಿದ್ದಾರೆ. ಅವರ ಬಾಯಿಂದಲೇ ಅವರ ಸ್ಪೂರ್ತಿದಾಯಕ ಈ ಜರ್ನಿಯನ್ನು ಕೇಳಲು ಹಾಗೂ ಹೈನುಗಾರಿಕೆ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.