ನಮಸ್ಕಾರ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಾಡೆಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಸಾಂಗ್. ಹೌದು ಗೆಳೆಯರೇ ಈ ಸಾಂಗ್ ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕೂಡ ಪಂಚ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಬೆಡಗಿ ಆಗಿರುವ ಜಾಕ್ವಲಿನ್ ಫರ್ನಾಂಡೀಸ್ ರವರು ಸೊಂಟ ಬಳುಕಿಸಿ ರುವ ಈ ಹಾಡು ಈಗಾಗಲೇ ಪ್ರತಿಯೊಬ್ಬರ ನೆಚ್ಚಿನ ಹಾಡಾಗಿ ಕಾಣಿಸಿಕೊಳ್ಳುತ್ತಿದೆ.
ಚಿತ್ರ ಈಗಾಗಲೇ ವೀಕ್ಷಕರಿಂದ ಸೂಪರ್ಹಿಟ್ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದು ಚಿತ್ರ ಇದೇ ಜುಲೈ 28ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳಿಂದ ಸೆಲೆಬ್ರಿಟಿಯ ವರೆಗೂ ಕೂಡ ಈ ಹಾಡಿಗೆ ಈಗಾಗಲೇ ಎಲ್ಲರೂ ಕೂಡ ರೀಲ್ಸ್ ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಪ್ರೇಕ್ಷಕರು ಕೂಡ ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಈಗ ಈ ಹಾಡಿಗೆ ಸುದ್ದಿಯಾಗುತ್ತಿರುವುದು ಕಿಚ್ಚ ಸುದೀಪ್ ಅಲ್ಲ ಬದಲಾಗಿ ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ರವರು.
ಹೌದು ಗೆಳೆಯರೆ ವಿಷ್ಣುವರ್ಧನ್ ರವರ ಹಳೆಯ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿರುವ ಹಾಡಿಗೆ ರಾರಾ ರಕ್ಕಮ್ಮ ಸಾಂಗನ್ನು ಸಿಂಕ್ ಮಾಡಿ ಎಡಿಟ್ ಮಾಡಲಾಗಿದೆ. ಇದು ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿದ್ದು ಈ ಹಾಡಿನಲ್ಲಿ ಕೂಡ ದಾದಾ ರವರ ಸ್ಟೆಪ್ ಸಕ್ಕತ್ ಸಿಂಕ್ ಆಗುತ್ತಿದೆ. ನೀವು ಕೂಡ ಈ ವೈರಲ್ ಆಗಿರುವ ವಿಡಿಯೋವನ್ನು ನೋಡಬಹುದಾಗಿದ್ದು ವಿಡಿಯೋ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.