
ಇದೀಗ ಭಾರತ ಚಿತ್ರರಂಗದಲ್ಲಿ ನಮ್ಮ ಕನ್ನಡ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ, ಅದರಲ್ಲಿ ಇದೀಗ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕೂಡ ಅದೇ ಹಾದಿಯಲ್ಲಿ ಬರುತ್ತಿದೆ. ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ಬಹುಭಾಷಾ ನಟರಾಗಿದ್ದಾರೆ. ಎಲ್ಲಾ ಭಾಷೆಗಳಲ್ಲಿಯೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕನ್ನಡದಲ್ಲಿ ಒಂದು ಹೊಸ ದಾಖಲೆಯನ್ನು ಮಾಡಹೊರಟಿದ್ದಾರೆ, ವಿಕ್ರಾಂತ್ ರೋಣ ಸಿನಿಮಾ ಎಲ್ಲರೂ ಅಂದುಕೊಂಡಿರುವ ಹಾಗೆ ಬಹುನಿರೀಕ್ಷಿತ ಚಿತ್ರವಾಗಿದೆ.
ಕಿಚ್ಚ ಸುದೀಪ್ ಎಂದರೆ ಸಾಕಷ್ಟು ಅಭಿಮಾನಿಗಳು ಅವರ ಸಿನೆಮಾಗಳಿಗಾಗಿ ಕಾಯುತ್ತಿರುತ್ತಾರೆ, ಈಗ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಹಾಡು ಎಲ್ಲೆಡೆ ಗಮನವನ್ನು ಸೆಳೆಯುತ್ತಿದೆ, ಸಾಕಷ್ಟು ಜನರು ಈ ಒಂದು ಹಾಡಿಗೆ ಹೆಜ್ಜೆ ಹಾಕಿ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಬಿಡುಗಡೆಯಾಗಿ ಮನೆಮನೆಯನ್ನೂ ತಲುಪಿದೆ.
ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಕಿಚ್ಚ ಸುದೀಪ್ ಮತ್ತು ಜಾಕ್ವಲಿನ್ ಫರ್ನಾಂಡೀಸ್ ಅವರು ಸ್ಟೆಪ್ ಹಾಕಿದ್ದು ಜಾನಿ ಮಾಸ್ಟರ್ ಅವರು ಈ ಹಾಡಿಗೆ ನೃತ್ಯ ನಿರ್ದೇಶಕರಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನದೇ ಹವಾ, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಹಾಡು ರೀಚ್ ಆಗಿದೆ. ಈ ಹಾಡಿಗೆ ತಮ್ಮದೇ ಆದಂತಹ ಸ್ಟೆಪ್ ಗಳ ಮೂಲಕ ಜನರು ಎಂಜಾಯ್ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ ಎಂದಕೂಡಲೇ ನಮಗೆಲ್ಲರಿಗೂ ಒಂದು ರೀತಿಯಾದಂತಹ ಕುತೂಹಲ ಇರುತ್ತದೆ, ಸುದೀಪ್ ಅವರು ಅಭಿನಯ ಮಾಡಿರುವಂತಹ ಎಲ್ಲಾ ಸಿನಿಮಾಗಳು ಸಹ ಅದ್ಭುತವಾದಂತಹ ಪ್ರದರ್ಶನವನ್ನು ಕಂಡಿವೆ. ಅದರಲ್ಲಿ ವಿಕ್ರಾಂತ್ ರೋಣ ಸಿನಿಮಾ ಕೂಡ ಒಂದಾಗಬಹುದು. ಸಿನಿಮಾ ರಿಲೀಸ್ ಗೆ ಮುಂಚೆ ಇಷ್ಟೊಂದು ಸದ್ದು ಮಾಡುತ್ತಿದೆ ತೆರೆಗೆ ಬಂದ ನಂತರ ಸಿನಿಮಾ ಎಷ್ಟರಮಟ್ಟಿಗೆ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ತ್ರಿಡಿಯಲ್ಲೂ ಕೂಡ ಮೂಡಿ ಬರುತ್ತಿದೆ, ಈಗಾಗಲೇ 3D ಯಲ್ಲಿ ಟ್ರೈಲರ್ ನೋಡಿ ಬಾಲಿವುಡ್ ಸಲ್ಮಾನ್ ಖಾನ್ ಮೆಚ್ಚಿಕೊಂಡಿದ್ದಾರೆ. ಬಹಳಷ್ಟು ಸ್ಟಾರ್ ನಟರು ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಅನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ, ಇವೆಲ್ಲವನ್ನೂ ನೋಡುತ್ತಿದ್ದರೆ ಖಂಡಿತವಾಗಿಯೂ ಕೂಡ ವಿಕ್ರಾಂತ್ ರೋಣ ಸಿನಿಮಾ ಮತ್ತೊಂದು ಇತಿಹಾಸವನ್ನು ಸೃಷ್ಟಿ ಮಾಡುತ್ತದೆ ಅಂತಾನೆ ಹೇಳಬಹುದು.
ಕಿಚ್ಚ ಸುದೀಪ್ ಹಾಗು ಜಾಕ್ವೇಲಿನ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಸಾಂಗ್ ಈಗಾಗಲೇ ಬಹಳಷ್ಟು ಸದ್ದು ಮಾಡಿದೆ, ಈ ಹಾಡನ್ನು ವಿಷ್ಣು ದಾದಾ ಅಭಿನಯದ ಹಾಡೊಂದಕ್ಕೆ ಸೆಟ್ ಮಾಡಲಾಗಿದೆ. ಆಗಿನ ಕಾಲದ ಡ್ಯಾನ್ಸ್ ಗೆ ಈ ಹಾಡು ಕರಾರುವಾಕ್ಕಾಗಿ ಹೊಂದಿಕೊಂಡಿದೆ. ಈ ಹಾಡಿಗೂ ಈ ನೃತ್ಯಕ್ಕೂ ಒಂದಕ್ಕೊಂದು ಸಂಬಂಧ ಇರುವಂತೆ ಸೆಟ್ ಮಾಡಲಾಗಿದೆ.
ಸಧ್ಯಕ್ಕಂತು ಯಾವುದೇ ಸೋಶಿಯಲ್ ಮೀಡಿಯಾ ನೋಡಿದ್ರು ಈ ಸಾಂಗ್ ನದೇ ಹವಾ. ವಿಷ್ಣುವರ್ಧನ್ ಅವರ ಹಳೆಯ ಹಾಡಿಗೆ ಮಾತ್ರವಲ್ಲದೆ ಇನ್ನೂ ಅನೇಕ ಹಾಡುಗಳಿಗೆ ರಕ್ಕಮ್ಮ ಹಾಡನ್ನು ರಿಮಿಕ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡುತ್ತಿದ್ದಾರೆ. ಅದರಲ್ಲಿ ಈ ಹಾಡಿಗೆ ಸಿಂಕ್ ಮಾಡಿದ್ದು ಅದ್ಭುತವಾಗಿ ಮೂಡಿಬಂದಿದೆ.
ಆ ವಿಡಿಯೊ ಕೆಳಗಿದೆ ನೋಡಿ…
Comments are closed.