ಮನುಷ್ಯ ಅಂದಮೇಲೆ ಮಾನವೀಯತೆ ಇರಬೇಕು ಆದರೆ ಈ ಮಾನವೀಯತೆಯನ್ನು ಮರೆತು ತಮಗೆ ಬೇಕಾದ ಹಾಗೆ ಸ್ವಾರ್ಥದಿಂದ ಬದುಕುತ್ತಾ ಇರುವವರು ಸಾಕಷ್ಟು ಮಂದಿ ಇದ್ದಾರೆ. ಎಷ್ಟೇ ಹಣ ಇದ್ದರೂ ಬೇರೆ ಒಬ್ಬರಿಗೆ ಬಿಡಿಗಾಸನ್ನು ಕೂಡ ಕೊಡುವ ಬುದ್ಧಿ ಇರುವುದಿಲ್ಲ. ದುಡ್ಡು ಕೊಡುವುದು ಹಾಗಿರಲಿ ತೊಟ್ಟು ನೀರು ಕೊಡುವುದಕ್ಕೂ ಯೋಚನೆ ಮಾಡುವ ಜನ ನಮ್ಮ ಸುತ್ತ ಇದ್ದಾರೆ ಅಂದ್ರೆ ನಿಜಕ್ಕೂ ಬೇಸರ ಎನಿಸುತ್ತೆ. ಹೀಗೆ ಮಾನವೀಯತೆಯನ್ನೇ ಮರೆತು ದು-ಷ್ಟಳಾಗಿ ನಡೆದುಕೊಂಡ ಒಬ್ಬ ಮಹಿಳೆಯ ಕಥೆ ಇದು.
ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಮಹೇಶ ಎನ್ನುವ ಸಿಲಿಂಡರ್ ಗ್ಯಾಸ್ ಡೆಲಿವರಿ ಬಾಯ್ ಆ ದಿನ ಯಾವ ಮಗ್ಗುಲಲಿ ಎದ್ದಿದ್ನೋ ಗೊತ್ತಿಲ್ಲ. ಕೆಟ್ಟ ದಿನ ಹಾಗೂ ಒಳ್ಳೆಯ ದಿನ ಎರಡನ್ನು ಒಟ್ಟಿಗೆ ನೋಡುತ್ತಾನೆ. ತಮಿಳುನಾಡಿನ ಸಾಕಷ್ಟು ಅಪಾರ್ಟ್ಮೆಂಟ್ ಗಳಿಗೆ ಸಿಲಿಂಡರ್ ಹೊತ್ತುಕೊಂಡು ಹೋಗಿ ಕೊಡುವ ಮಹೇಶ ಆ ದಿನ ಸಿಕ್ಕಾಪಟ್ಟೆ ದಣಿದಿದ್ದ.
ಹಾಗಾಗಿ ಬೇಗ ನಿದ್ದೆಗೆ ಜಾರಿದ. ಬೆಳಿಗ್ಗೆ ಸಾಕಷ್ಟು ಮನೆಗೆ ಸಿಲಿಂಡರ್ ಡೆಲಿವರಿ ಮಾಡುವ ಕೆಲಸವಿತ್ತು ಆದರೆ ಎದ್ದೇಳಲು ಸ್ವಲ್ಪ ತಡವಾಯಿತು. ಎತ್ತ ತಕ್ಷಣ ತೊಟ್ಟು ನೀರನ್ನು ಕುಡಿಯದೆ ಸೀದಾ ತನ್ನ ಕೆಲಸಕ್ಕೆ ಹೋದ ಮಹೇಶ. ತಮಿಳುನಾಡಿನ ಅಪಾರ್ಟ್ಮೆಂಟ್ ಒಂದರಲ್ಲಿ ಗ್ಯಾಸ್ ಡಿಲೆವರಿ ಕೊಡಲು ಹೋಗುತ್ತಾನೆ ಅದು ಸುಮಾರು 8 ಫ್ಲೋರ್ ಇರುವ ಅಪಾರ್ಟ್ಮೆಂಟ್.
ಅಲ್ಲಿ ಎಂಟನೇ ಮಹಡಿಯಲ್ಲಿ ಹಾಗೂ ನಾಲ್ಕನೇ ಮಹಡಿಯಲ್ಲಿ ಸಿಲಿಂಡರ್ ಡೆಲಿವರಿ ಮಾಡಬೇಕಾಗಿರುತ್ತದೆ. ಆಗ ಮಹೇಶ ಮೊದಲಿಗೆ 8ನೇ ಫ್ಲೋರ್ ನಲ್ಲಿರುವ ಸುಜಾತ ಎಂಬವರ ಮನೆಗೆ ಹೋಗುತ್ತಾನೆ. ಅದು ಕರೋನ ಸಮಯ. ಕೇವಲ ಮನೆಯಲ್ಲಿ ಇರುವವರಿಗೆ ಮಾತ್ರವಲ್ಲ ಡೆಲಿವರಿ ಕೊಡುವ ಹುಡುಗರಿಗೂ ಈ ಭಯ ಇದ್ದೇ ಇರುತ್ತದೆ.
ಆದರೂ ತಾವು ಕೆಲಸ ಮಾಡುವುದನ್ನು ಮಾತ್ರ ಅವರು ನಿಲ್ಲಿಸಲಿಲ್ಲ. ಆಗಲೇ ಸಿಕ್ಕಾಪಟ್ಟೆ ದಣಿದಿದ್ದ ಮಹೇಶ ಸುಜಾತ ಅವರಿಗೆ ಸಿಲಿಂಡರ್ ಕೊಟ್ಟು ಒಂದು ಲೋಟ ನೀರು ಕೊಡುವಂತೆ ಕೇಳುತ್ತಾನೆ ಆದರೆ ಸುಜಾತ ಸ್ವಲ್ಪವೂ ದಯೆ, ಕರುಣೆ ಇಲ್ಲದೆ ನಿನ್ನಿಂದಾಗಿ ಕರೋನ ನನಗೂ ಬರಬಹುದು ನೀರು ಕೊಡುವುದಿಲ್ಲ ಹೋಗು ಎಂದು ಮುಖಕ್ಕೆ ಹೊಡೆದಂತೆ ಬಾಗಿಲು ಹಾಕಿಕೊಳ್ಳುತ್ತಾಳೆ. ಇದರಿಂದ ಮಹೇಶ ಸಿಕ್ಕಾಪಟ್ಟೆ ದುಃಖಪಡುತ್ತಾನೆ.
ಆದರೂ ನಾಲ್ಕನೇ ಮಹಡಿಗೆ ಬಂದು ಸುಮಾ ಅವರ ಮನೆಯ ಮುಂದೆ ಸಿಲಿಂಡರ್ ಇಟ್ಟು ಕಾಲಿಂಗ್ ಬೆಲ್ ಒತ್ತುತ್ತಾನೆ. ಮುಂದೆ ನಡೆದಿದ್ದೇ ಬೇರೆ. ಸುಮಾ ಸಿಲೆಂಡರ್ ತೆಗೆದುಕೊಳ್ಳಲು ಹೊರ ಬಂದು ಮಹೇಶ್ ತುಂಬಾ ಸುಸ್ತಾಗಿದ್ದನ್ನು ಗಮನಿಸುತ್ತಾರೆ. ಆತ ನೀರು ಕೇಳುವುದಕ್ಕೂ ಮೊದಲೇ ನೀರು ತಂದುಕೊಡುತ್ತಾರೆ. ಸ್ವಲ್ಪ ಸುಧಾರಿಸಿಕೋ ಎಂದು ಹೇಳುತ್ತಾರೆ.
ಇದರಿಂದ ಕಣ್ಣೀರಿಟ್ಟ ಮಹೇಶ ಸುಮಾ ಅವರ ಕಾಲಿಗೆ ಬಿದ್ದು ನಿಮ್ಮಂತವರು ಇದ್ದಾರಲ್ಲ ಎಂದು ಖುಷಿಯಿಂದ ಕೈ ಮುಗಿಯುತ್ತಾನೆ. ಸುಮಾ ಅವಳಿಗೆ ಇದು ಬಹಳ ಬೇಸರ ಎನಿಸುತ್ತದೆ ನೀನು ಇನ್ನು ಸ್ವಲ್ಪ ಹೊತ್ತು ಸುಧಾರಿಸಿಕೋ ಎಂದು ಹೇಳಿ ನೂರು ರೂಪಾಯಿ ಟಿಪ್ಸ್ ಕೊಟ್ಟು ಮಹೇಶ್ ನನ್ನು ಕಳುಹಿಸುತ್ತಾರೆ. ಹೌದು ಇದೊಂದು ನೈಜ ಘಟನೆ ಎಲ್ಲರಿಗೂ ಮಾದರಿ ಆಗುವಂಥದ್ದು ಪರಿಸ್ಥಿತಿ ಎಂತದ್ದೇ ಇರಲಿ, ಆದರೆ ಒಬ್ಬ ವ್ಯಕ್ತಿ ನೀರು ಕೇಳಿದರೆ ಕೊಡದೆ ಇರುವಷ್ಟು ಅವಮಾನವೀಯತೆ ಮನುಷ್ಯರಲ್ಲಿ ಬೇಡ ಅಲ್ವೇ.