cute-dance

VIDEO : ಹಿಟ್ ಹಾಡಿಗೆ ಕ್ಯೂಟ್ ಹುಡುಗಿಯ ಮಸ್ತ್ ಡ್ಯಾನ್ಸ್! ವಿಡಿಯೊ ವೈರಲ್…

Entertainment/ಮನರಂಜನೆ

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಅಬ್ಬರಿಸಲು ರೆಡಿಯಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಶೇಷತೆಯಿಂದ ಸುದ್ದಿಯಾಗುತ್ತಿದೆ. ಈಗ ಐಟಂ ಸಾಂಗ್ ಅನ್ನು ರಿಲೀಸ್ ಮಾಡಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದೆ. ಕಳೆದ ವಾರ ಯೂಟ್ಯೂಬ್ನಲ್ಲಿ ರಿಲೀಸ್ ಆದ ಈ ಹಾಡು ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿದೆ. ರಾರಾ ರಕ್ಕಮ್ಮ ಎನ್ನುವ ಈ ಹಾಡಿಗೆ ಸಿನಿಮಾದಲ್ಲಿ ಸುದೀಪ್ ಮತ್ತು ಜಾಕ್ಲಿನ್ ಅವರು ಸಕ್ಕತ್ತಾಗಿ ಹೆಜ್ಜೆ ಹಾಕಿದ್ದಾರೆ.

ಈ ಹಾಡಿಗೆ ಅನುಪ್ ಬಂಡಾರಿ ಅವರು ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ನೀಡಿದ್ದಾರೆ ಮತ್ತು ನಕಾಶ್ ಅಝೀಝ್ ಹಾಗೂ ಸುನಿಧಿ ಚೌಹಾಣ್ ಅವರು ಧ್ವನಿಯನ್ನು ನೀಡಿದ್ದಾರೆ ಮತ್ತು ಜಾನಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಅದ್ಭುತವಾಗಿ ಮೂಡಿ ಬರುವುದಕ್ಕೆ ಇವರೆಲ್ಲರೂ ಕಾರಣವಾಗಿದ್ದಾರೆ. ಎಲ್ಲಕ್ಕಿಂತ ವಿಶೇಷ ಎಂದರೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ಜಾಕ್ಲಿನ್ ಅವರು ಈ ಟಾಸ್ಕ್ ನೀಡಿದ್ದರು. ಕಿಚ್ಚ ಸುದೀಪ್ ಅವರು ಕೂಡ ಜಾಕ್ಲಿನ್ ಅವರಿಗೆ ಒಂದು ವಾಕ್ಯ ಕನ್ನಡದಲ್ಲಿ ಮಾತನಾಡುವಂತೆ ಸವಾಲು ನೀಡಿದ್ದರು. ಜಾಕ್ಲಿನ್ ಅವರು ಕನ್ನಡದಲ್ಲಿ ಮಾತನಾಡಿದ ಬಳಿಕ ಸುದೀಪ್ ಅವರು ಕೂಡ ರಾ ರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಮಾಡಿದ್ದೇ ತಡ ಈಗ ಕಿರುತೆರೆ ಹಾಗೂ ಚಿತ್ರರಂಗದ ಕಲಾವಿದರುಗಳು ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಸುದೀಪ್ ಅವರು ಹಾಕಿದ್ದ ಹೆಜ್ಜೆಗಳನ್ನೇ ಫಾಲೋ ಮಾಡುತ್ತಾ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಸದ್ಯಕ್ಕೆ ಈ ಹಾಡಿನ ಹವಾ ಕ್ರಿಯೇಟ್ ಆಗಿದೆ. ಕನ್ನಡ ಅಲ್ಲದೆ ಬೇರೆ ಭಾಷೆ ಕಲಾವಿದರುಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಕುಣಿಯುತ್ತಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಇವಾಗ ವಿಕ್ರಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿನ ರೀಲ್ಸ್ ಹೊಸದೊಂದು ದಾಖಲೆ ಬರೆಯುತ್ತಿದೆ. ದಿನಕ್ಕೆ ನೂರಾರು ಜನ ಈ ಹಾಡಿಗೆ ರೀಲ್ಸ್ ಮಾಡಿ ತಾವುಗಳು ಮುನ್ನೆಲೆಗೆ ಬರುವುದರ ಜೊತೆಗೆ ಸಿನಿಮಾಗೂ ಪ್ರಚಾರ ನೀಡುತ್ತಿದ್ದಾರೆ.

ಕಿರುತೆರೆಯ ಕಲಾವಿದರುಗಳಾದ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ, ವೈಷ್ಣವಿ ಗೌಡ, ಪ್ರಿಯಾಂಕ ಮತ್ತು ಗೌತಮಿ, ಗಿಚ್ಚ ಗಿಲಿಗಿಲಿ ಕಾರ್ಯಕ್ರಮದ ಕಲಾವಿದರುಗಳು, ಚಂದನ ಮತ್ತು ವಾಸುಕಿ ವೈಭವ್ ಜೊತೆಗೆ ಇನ್ನು ಅನೇಕ ಕಲಾವಿದರುಗಳು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಮೊದಲಿಗೆ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ ಎರಡೇ ದಿನದ ಒಳಗಡೆ ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಇದೇ ಹಾಡಿಗೆ ಕಿಚ್ಚ ಸುದೀಪ್ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ.

ಈಗ ನೀಲಿ ಬಣ್ಣದ ಸಾದಾ ಉಡುಪಿನಲ್ಲಿರುವ ಕ್ಯೂಟ್ ಹುಡುಗಿಯೊಬ್ಬಳು ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು ಸಾಕಷ್ಟು ಜನ ಈ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ. ಈ ರೀಲ್ಸ್ ಅನ್ನು Kichcha ism 2.0 ಎಂಬ ಫೇಸ್ಬುಕ್ ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ವಿಡಿಯೊಗೆ ಸಾಕಷ್ಟು ಲೈಕ್ ಕಾಮೆಂಟ್ ಬಂದಿವೆ.

ಕಿರುತೆರೆ ನಟಿಯರು – ಹಿರೋಯಿನ್ ಗಳು ಜೊತೆಗೆ ಸಾಕಷ್ಟು ಜನ ನೃತ್ಯ ಪಟುಗಳು ಸಹ ೀ ಹಾಡಿಗೆ ರೀಲ್ಸ್ ಮಾಡುತ್ತಿರುವುದು ಸುದೀಪ್ ಅಭಿಮಾನಿಗಳಿಗೆ ಖುಷಿಯಾಗಿದೆ. ಇಂಥ ಸಾಕಷ್ಟು ಕಲಾವಿದರು ರೀಲ್ಸ್ ಮಾಡುತ್ತಾ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಚಿತ್ರಕ್ಕೆ ಆನ್ ಲೈನ್ ಪ್ರಚಾರ ನೀಡುತ್ತವೆ, ಕನ್ನಡ ಸಿನೆಮಾಗಳಿಗೆ ಇಂಥದೊಂದು ಟ್ರೆಂಡ್ ಸುರುವಾಗಿರೋದು ನಿಜಕ್ಕೂ ಖುಷಿಯ ಸಂಗತಿ.

ಆ ವಿಡಿಯೊ ಕೆಳಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.