CRIME NEWS :ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ, ಸೊಸೆ ಸಹಿತ ಮೂವರ ಬಂಧನ

ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಹತ್ಯೆಗೈದಿದ್ದ ಸೊಸೆ ಸೇರಿ ಮೂವರನ್ನು ಬ್ಯಾಡರಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿರನ್ನು ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಹತ್ಯೆಗೈದಿದ್ದ ಸೊಸೆ ಸೇರಿ ಮೂವರನ್ನು ಬ್ಯಾಡರಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 5ರಂದು ಲಕ್ಷ್ಮಮ್ಮ (50) ಸಾವನ್ನಪ್ಪಿದ್ದರು ಇವರ ಸಾವಿಗೆ ಹೃದಯಾಘಾತವೆಂದು ಕಥೆ ಸೃಷ್ಟಿಸಿದ್ದರು, ಆದರೆ ಇದು ಕೊಲೆಯಾಗಿತ್ತು ಎನ್ನಲಾಗಿದೆ. ಈ ನಡುವೆ ಅಕ್ಟೋಬರ್ 5ರಂದು ಮನೆಯಲ್ಲಿ ಗಂಡ ಇರದಿದ್ದಾಗ ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿದ್ದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದಿದ್ದಳು ಅಂತ ತನಿಖೆ ಅಂತ ತಿಳಿದುಬಂದಿದೆ. ಈ ನಡುವೆ ರಶ್ಮಿಯ ಪತಿ ಮಂಜುನಾಥ್ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ಮಂಜುನಾಥ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧೀಸಿ ಜೈಲಿಗೆ ಕಳುಹಿಸಿದ್ದಾರೆ.

You might also like

Comments are closed.