
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಸಹ ಆಕ್ಟಿವ್ ಆಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಕೆಲವರು ಜನರಿಗೆ ಸಂದೇಶಗಳನ್ನು ಹೊರಡಿಸಲು ಪ್ರಯತ್ನಿಸುತ್ತಾರೆ.
ಹೌದು, ಕೆಲವು ಜನರು ಸೋಶಿಯಲ್ ಮೀಡಿಯಾದ ಮುಖಾಂತರ ಜನರಿಗೆ ಒಳ್ಳೆಯ ಸಂದೇಶವನ್ನು ನೀಡಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇನ್ನು ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ..
ತಮ್ಮ ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಲಿ ಎಂದು ಅವರ ಪೋಷಕರು ದಿನ ರಾತ್ರಿ ದುಡಿದು ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಓದುವ ಬದಲು ಬೇರೆ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ಇದೀಗ ಇಬ್ಬರು ಹುಡುಗಿಯರು ಶಾಲೆ ಮುಗಿಸಿಕೊಂಡು ರಸ್ತೆಯಲ್ಲಿ ಹೋಗುವಾಗ ಅದೇ ಶಾಲೆಯ ಕೆಲವು ಹುಡುಗರು ಆ ಹುಡುಗಿಯರನ್ನು ಚುಡಾಯಿಸಲು ನಿಂತಿದ್ದಾರೆ. ಹೌದು, ಈ ಹುಡುಗರು ಆ ಇಬ್ಬರು ಹುಡುಗಿಯರ ಕೈ ಹಿಡಿದು ಅವರನ್ನು ಬಲವಂತ ಮಾಡುತ್ತಿದ್ದಾರೆ.
ಇನ್ನು ಇಬ್ಬರು ಹುಡುಗಿಯರು ಸಹ ತಮ್ಮನ್ನು ಬಿಟ್ಟು ಬಿಡುವಂತೆ ಕಣ್ಣೀರು ಹಾಕುತ್ತಾ ಆ ಹುಡುಗರ ಮುಂದೆ ಗೋಗಿರೆಯುತ್ತಿದ್ದಾರೆ. ಇನ್ನು ಇದೇ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಒಬ್ಬ ವ್ಯಕ್ತಿ ಇದನ್ನು ನೋಡಿ ಆ ಹುಡುಗರಿಗೆ ಸರಿಯಾಗಿ ಪಾಠ ಕಲಿಸುತ್ತಾನೆ. ಹೌದು ಆ ವ್ಯಕ್ತಿ ಆ ಹುಡುಗರನ್ನು ಈ ರೀತಿ ಏಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ,
ಅವರು ಇದು ನಮ್ಮ ಇಷ್ಟ ನಿನ್ನ ಪಾಡಿಗೆ ನೀನು ಹೋಗು ಎಂದು ಆತನ ಮೇಲೆ ಕಿರುಚಾಡಿದ್ದಾರೆ. ಇನ್ನು ಆ ಹುಡುಗಿಯರ ಕಣ್ಣೀರು ನೋಡಿದ ಈ ವ್ಯಕ್ತಿ ಆ ಹುಡುಗರ ಮೇಲೆ ಕೈ ಮಾಡಿದ್ದಾನೆ. ಆ ಹುಡುಗರಿಗೆ ಸರಿಯಾಗಿ ಹೊಡೆದು ಆ ಹೆಣ್ಣು ಮಕ್ಕಳ ಬಳಿ ಕ್ಷಮೆ ಕೇಳುವಂತೆ ಹೇಳಿದ್ದಾನೆ. ನಂತರ ಆ ಹುಡುಗರು ಆ ಇಬ್ಬರ ಹುಡುಗಿಯರ ಬಳಿ ಕ್ಷಮೆ ಕೇಳಿದ್ದಾರೆ.
ಇನ್ನು ಆ ಹುಡುಗಿಯರಿಗೆ ನಾಳೆ ಶಾಲೆಯಲ್ಲಿ ಈ ಬಗ್ಗೆ ಪ್ರಾಂಶುಪಾಲರ ಬಳಿ ಹೋಗಿ ದೂರು ನೀಡುವಂತೆ ಈ ವ್ಯಕ್ತಿ ಹೇಳಿದ್ದಾನೆ. ನಂತರ ಈ ರೀತಿ ಮಾಡುವವರಿಗೆ ಹೀಗೆ ಬುದ್ಧಿ ಕಲಿಸಬೇಕು ಎಂದು ಆತ ತನ್ನ ಯೌಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋವನ್ನು ಆ ಹುಡುಗಿಯರ ಒಪ್ಪಿಗೆ ಪಡೆದುಕೊಂಡು ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Comments are closed.