Clove Benefits: ಇಂದು ನಾವು ಲವಂಗವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಮತ್ತು ಅದರ ಅನುಕೂಲಗಳನ್ನು ತಿಳಿದುಕೊಳ್ಳೋಣ. ಲವಂಗ, ಇದು ಒಂದು ಮಸಾಲೆ ಪದಾರ್ಥ ಮತ್ತು ಹಲ್ಲು ನೋವಿನ ಸಮಯದಲ್ಲಿ ಲವಂಗವನ್ನು ಉಪಯೋಗಿಸುತ್ತಾರೆ ಹಲ್ಲು ನೋವು ಇರುವ ಜಾಗದಲ್ಲಿ ಲವಂಗ ಇಟ್ಟುಕೊಳ್ಳುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. ಲವಂಗ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಸರಿ ಮಾಡುತ್ತದೆ ಇವೆಲ್ಲ ಸಾಮಾನ್ಯವಾಗಿ ಜನರಿಗೆ ಗೊತ್ತಿರುವಂತದ್ದು, ಇನ್ನೂ ಕೆಲವು ಉಪಯೋಗಗಳನ್ನು ತಿಳಿದುಕೊಳ್ಳೋಣ.
ಲವಂಗ “ಕಾ-ಮೋತ್ತೇಜಕ”. ಸುಗಂಧ ದ್ರವ್ಯವನ್ನು ಹೊಂದಿರುವ ಪದಾರ್ಥಗಳು ಹೆಚ್ಚಿನದಾಗಿ ಕಾಮೋತ್ತೇಜಕವಾಗಿರುತ್ತದೆ. ಲವಂಗವನ್ನು ತಂದು ಪುಡಿ ಮಾಡಿ ಆ ಪುಡಿಯನ್ನು ಹಾಲಿನ ಜೊತೆ ಮಿಶ್ರಣ ಮಾಡಿಕೊಂಡು ಬೆಳಿಗ್ಗೆ ಮತ್ತು ಸಾಯಂಕಾಲ ಕುಡಿಯುವುದರಿಂದ ಕಾ-ಮದ ಆಸಕ್ತಿ ಹೆಚ್ಚಾಗುತ್ತದೆ.
ಕಾ-ಮೋತ್ತೇಜನೆಯಲ್ಲಿ ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ ಬಹಳ ಮುಖ್ಯವಾಗಿರುತ್ತದೆ. ಕಾ-ಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುವುದು ಮೆದುಳು ಅಂದರೆ ಮೆದುಳು ಸೂಚನೆ ನೀಡಿದರೆ ಮಾತ್ರ ಕಾ-ಮದ ಆಸಕ್ತಿ ಹೆಚ್ಚಾಗುತ್ತದೆ.
ಯಾವೆಲ್ಲ ವಸ್ತು ಸುಗಂಧ ದ್ರವ್ಯವನ್ನು ಹೊಂದಿರುತ್ತದೆಯೊ ಅವೆಲ್ಲವೂ ಕೂಡ ಮನಸ್ಸನ್ನು ಪ್ರಕುಲ್ಲಗೊಳಿಸುತ್ತದೆ ಮನಸ್ಸು ಪ್ರಕುಲ್ಲಗೊಳ್ಳುವುದರಿಂದ ಕಾ-ಮದ ಶಕ್ತಿ ಹೆಚ್ಚಾಗುತ್ತದೆ. ಲವಂಗವನ್ನು ಹಾಲಿನಲ್ಲಿ ಮಿಶ್ರಣ ಮಾಡುವುದರಿಂದ ಹಾಲು ದೈಹಿಕವಾಗಿಯೂ ಶಕ್ತಿ ಕೊಡುತ್ತದೆ ಹಾಗೂ ಲವಂಗ ಮಾನಸಿಕವಾಗಿ ಶಕ್ತಿ ಕೊಡುತ್ತದೆ.
ಲವಂಗದಿಂದ ತಯಾರಾಗಿರುವ ಹಲವಾರು ವಾಜಿಕರ ಔಷಧಿಗಳು ಲಭ್ಯವಿರುತ್ತದೆ ಅವಶ್ಯಕತೆ ಇರುವಂತಹ ವ್ಯಕ್ತಿಗಳು ಹತ್ತಿರದ ಆಯುರ್ವೇದದ ವೈದ್ಯರ ಬಳಿ ಹೋಗಿ ತೆಗೆದುಕೊಂಡು ಬನ್ನಿ ಅದು ನಿಮಗೆ ಉಪಯುಕ್ತವಾಗುತ್ತದೆ. ಮಕ್ಕಳಾಗದೇ ಇರುವಂತಹ ದಂಪತಿಗಳು ಹಾಗೂ ಕಾ-ಮದ ಉತ್ಸಾಹ ಕಡಿಮೆಯಿರುವಂತವರು ಲವಂಗವನ್ನು ಹೆಚ್ಚಾಗಿ ಸೇವಿಸಬೇಕು.