ಮಕ್ಕಳನ್ನ ದೇವರ ಸ್ವರೂಪ ಎಂದು ಕರೆಯಲಾಗುತ್ತದೆ, ಹೌದು ಮಕ್ಕಳಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ ಮತ್ತು ಅದೂ ನಿಜ ಅನ್ನುವುದು ಹಲವು ಭಾರಿ ಸಾಭೀತಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳನ್ನ ನೋಡಿದರೆ ನಮಗೆ ಆಶ್ಚರ್ಯ ಅನಿಸಬಹುದು, ಆದರೆ ಅವುಗಳು ನಿಜ ಎಂದು ತಿಳಿದಾಗ ನಮಗೆ ಶಾಕ್ ಆಗುತ್ತದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ 20 ತಿಂಗಳ ಮಗು ಅಂದರೆ ಸುಮಾರು ಒಂದೂವರೆ ವರ್ಷದ ಮಗು 5 ಹೊಸ ಜೀವನವನ್ನ ಕೊಟ್ಟಿದ್ದು ಎಲ್ಲರ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿದ್ದಾಳೆ ಎಂದು ಹೇಳಿದರೆ ತಪ್ಪಾಗಲ್ಲ.
ಮಕ್ಕಳ ಹೆತ್ತವರ ಘನತೆಯನ್ನ ಮತ್ತು ಅವರ ಗೌರವವನ್ನ ಹೆಚ್ಚು ಮಾಡುತ್ತಾರೆ ಎಂದು ನಾವು ಕೇಳಿರುತ್ತೇವೆ, ಆದರೆ ಈ ಮಗು ತನ್ನ ಚಿಕ್ಕ ವಯಸ್ಸಿನಲ್ಲಿಯೇ ತಂದೆ ಮತ್ತು ಅಪಾರ ಗೌರವ ತರುವ ಕೆಲಸವನ್ನ ಮಾಡಿದ್ದು ಈ ಮಗುವಿಗೆ ದೇಶದ ಜನರು ಸೆಲ್ಯೂಟ್ ಹೊಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ 20 ತಿಂಗಳ ಮಗು 5 ಜನರಿಗೆ ಹೊಸ ಜೀವನವನ್ನ ಕೊಡಿಸಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಗುವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ನಾವು ಹೇಳುತ್ತಿರುವ ಈ ಮಗುವಿನ ಹೆಸರು ಧನಿಷ್ಠ, 20 ತಿಂಗಳ ಧನಿಷ್ಠ ಇದೀಗ ದೇಶದ ಅತ್ಯಂತ ಕಿರಿಯ ವಯಸ್ಸಿನ ಬಹು ಅಂಗಾಂಗ ದಾನಿಯಾಗಿ ಹೆಸರಾಗಿದ್ದಾಳೆ. ದೇಶದ ರಾಜಧಾನಿಯ ದೆಹಲಿಯ ದಂಪತಿಗಳಾದ ಆಶಿಶ್ ಕುಮಾರ್ ಮತ್ತು ಬಬಿತಾ ಅವರ 20 ತಿಂಗಳ ಧಾನಿಷ್ಠ ಅನ್ನುವ ಹೆಸರಿನ ಹೆಣ್ಣು ಮಗು ಜನವರಿ 8 ನೇ ತಾರೀಕಿನಂದು ಮನೆಯ ಬಾಲ್ಕನಿಯಲ್ಲಿ ಆಟವನ್ನ ಆಡುವ ಸಮಯದಲ್ಲಿ ಕಾಲುಜಾರಿ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಮತ್ತು ಆಕೆಯನ್ನು ತಕ್ಷಣವೇ ಸರ್ ಗಂಗಾರಾಂ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಎಷ್ಟೇ ಸೂಕ್ತ ಚಿಕೆತ್ಸೆಯನ್ನ ಕೊಟ್ಟರು ಕೂಡ ಮಗುವಿನ ದೇಹ ಚಿಕೆತ್ಸೆ ಸ್ಪಂಧಿಸದೆ 11 ನೇ ತಾರೀಕಿನಂದು ಮಗುವಿನ ಮೆದುಳು ಕೆಲಸ ಮಾಡುವುದನ್ನ ನಿಲ್ಲಿಸಿದೆ.
ಇನ್ನು ಮೆದುಳಿನ ಹೊರತಾಗಿ ಬೇರೆಲ್ಲ ಅಂಗಗಳು ಸರಿಯಾಗಿ ಕೆಲಸವನ್ನ ಮಾಡುತ್ತಿದ್ದವು. ಇನ್ನು ಮೆದುಳು ತನ್ನ ಕೆಲಸವನ್ನ ಮಾಡುವುದನ್ನ ನಿಲ್ಲಿಸಿದರೆ ಒಬ್ಬ ವ್ಯಕ್ತಿ ಎರಡು ಅಥವಾ ಮೂರೂ ದಿನಗಳ ಕಾಲ ಬದುಕಬಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ವೈದ್ಯರ ಮಾತನ್ನ ಕೇಳಿ ಬಹಳ ಗಟ್ಟಿ ನಿರ್ಧಾರವನ್ನ ತೆಗೆದುಕೊಂಡ ಆಶಿಶ್ ದಂಪತಿಗಳು ಮಗುವ ಬಹು ಅಂಗಾಂಗವನ್ನ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ತಂದೆ ತಾಯಿಗಳ ಒಪ್ಪಿಗೆಯ ಮೇರೆಗೆ ಮಗುವಿನ ಎರಡು ಕಣ್ಣು, ಹೃದಯ, ಎರಡು ಕಿಡ್ನಿ ಮತ್ತು ಕರುಳನ್ನು ದಾನ ಮಾಡಲಾಗಿದೆ, ಇನ್ನು ಮಗುವಿನ ಅಂಗಾಂಗವನ್ನ ಐದು ಜನರಿಗೆ ಹಾಕಲಾಗಿದ್ದು 20 ತಿಂಗಳ ಧನಿಷ್ಠ ಐದು ಜನರಿಗೆ ಜೀವದಾನ ಮಾಡಿದ್ದಾಳೆ.
ಪ್ರೀತಿಯಿಂದ ಸಾಕಿದ್ದ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡುವುದು ಕಷ್ಟವಾಗಿತ್ತು, ಆದರೆ ಅದೆಷ್ಟೋ ರೋಗಿಗಳು ಅಂಗಾಂಗಳಿಗಾಗಿ ಪರದಾಡುತ್ತಿದ್ದುದ್ದನ್ನು ನಾನು ಆಸ್ಪತ್ರೆಯಲ್ಲಿ ನೋಡಿದೆ. ನನ್ನ ಮಗಳು ಬದುಕುವುದಿಲ್ಲ ಎಂದು ತಿಳಿದ ಮೇಲೆ ಆಕೆಯಿಂದ ಇನ್ನೊಂದಿಷ್ಟು ಜೀವಗಳಾದರೂ ಸಂತೋಷ ಪಡಲಿ ಎಂದು ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡೆ ಎಂದು ಆಶಿಶ್ ತಿಳಿಸಿದ್ದಾರೆ. ಸ್ನೇಹಿತರೆ ಧನಿಷ್ಠ ಹೆತ್ತವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ನೀವು ಧಾನಿಷ್ಠ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿ