Chikkamagaluru sateesh wife : ಇತ್ತೀಚೆಗಿನ ದಿನಗಳಲ್ಲಿ ನಡೆಯುವ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತವೆ. ಇಲ್ಲೊಬ್ಬ ವ್ಯಕ್ತಿಯೂ ಪೊಲೀಸ್ ಠಾಣೆಗೆ ಬಂದ ರೀತಿ ನೋಡಿದರೆ ಅಚ್ಚರಿ ಮೂಡಿಸಿತ್ತು. ಹೌದು, ಚಿಕ್ಕಮಗಳೂರಿನ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಪಾಲಿಗೆ ವಿಚಿತ್ರ ದಿನ ಎನ್ನಬಹುದು. ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂ-ದಿರುವುದಾಗಿ ಹೇಳಿಕೊಂಡು ಒಂದು ಕೈಯಲ್ಲಿ ಚೀಲ, ಇನ್ನೊಂದು ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಕಾಲಿಟ್ಟನು.
ಹೌದು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ, 35 ವರ್ಷದ ಸತೀಶ್ ಎಂದು ಗುರುತಿಸಲಾದ ವ್ಯಕ್ತಿ, ಕೊ-ಲೆಯ ಬಗ್ಗೆ ಹೇಳುತ್ತಿರುವುದನ್ನು ಕಾಣಬಹುದು. “ಇವಳು ನನ್ನ ಹೆಂಡತಿ ಸರ್. ನಾನು ಅವಳಿಗೆ ನನ್ನಿಂದಾಗುವ ಎಲ್ಲ ಪ್ರೀತಿಯನ್ನು ನೀಡಿದ್ದೇನೆ ”ಎಂದು ಸತೀಶ್ ಅವರು ತಮ್ಮ ಪತ್ನಿ ರೂಪಾಳ ತಲೆಯನ್ನು ಕಪ್ಪು ಪ್ಲಾಸ್ಟಿಕ್ ಚೀಲದಿಂದ ಹೊರತೆಗೆದು ಅದನ್ನು ಎತ್ತುತ್ತಿದ್ದಾನೆ. ತಕ್ಷಣವೇ ಅದನ್ನು ಒಳಗೆ ಇರಿಸಿ!” ಪೊಲೀಸ್ ಅಧಿಕಾರಿಯೊಬ್ಬರು ಕೂಗುವುದು ಇದೆ
ಸತೀಶ್ ತನ್ನ ಹೆಂಡತಿಯ ತಲೆಯನ್ನು ಮತ್ತೆ ಚೀಲಕ್ಕೆ ಹಾಕಿ ಹೇಳಬೇಕಾಗಿರುವ ವಿಚಾರವನ್ನು ಹೇಳಲು ಶುರುಮಾಡುತ್ತಾನೆ. ಹೌದು, ಅವಳು ನನಗೆ ಮೋಸ ಮಾಡಿದಳು. ನಾನು ಅವಳನ್ನು ತೋಟದ ಬಳಿ ಆ ವ್ಯಕ್ತಿಯೊಂದಿಗೆ ನೋಡಿದೆ. ನಾನು ಅವಳ ಕಥೆಯನ್ನು ಮುಗಿಸಿದ್ದೇನೆ. ಆದರೆ ಆ ವ್ಯಕ್ತಿ ಓಡಿಹೋದ. ಆದರೂ ಆತನನ್ನು ಕೊ-ಲ್ಲಲಾಗಲಿಲ್ಲ” ಎಂದು ವಿಡಿಯೋದಲ್ಲಿ ಸತೀಶ್ ಹೇಳಿಕೊಂಡಿದ್ದಾರೆ. ಈಗಾಗಲೇ “ಸುನೀಲ್ ವಿರುದ್ಧ ಮೂರ್ನಾಲ್ಕು ಪ್ರಕರಣಗಳಿವೆ ಮತ್ತು ಇನ್ನೂ ಅವಳು ಅವನನ್ನು ಆಯ್ಕೆ ಮಾಡಿದಳು.
ನಾನು ಟ್ಯಾಕ್ಸಿ ಡ್ರೈವರ್ ಆಗಿದ್ದೆ. ನಾನು ನಿಮಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೇನೆ. ರೂಪ ಅವನನ್ನು ಭೇಟಿಯಾಗಬೇಕೆಂದು ಹೇಳಿದ್ದೆ ಎಂದು ”ಸತೀಶ್ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡು ಬಂದಿದೆ.ಕೊನೆಗೆ ಕೋಪಗೊಂಡ ಸತೀಶ್ ತನ್ನ ಹೆಂಡತಿಯ ತಲೆಯಿರುವ ಪ್ಲಾಸ್ಟಿಕ್ ಚೀಲವನ್ನು ಮೇಲಕ್ಕೆತ್ತಿ, ಮಚ್ಚನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಮತ್ತೊಮ್ಮೆ ಚೀಲವನ್ನು ತೆರೆಯಲು ಮುಂದಾಗಿದ್ದಾನೆ. ನೋಡು! ಇವಳು ನನ್ನ ಪತ್ನಿ. ಆಕೆ ತನ್ನ ಪ್ರಿಯಕರನಿಗೆ ಕೊಡಲು 3 ಲಕ್ಷ ರೂಪಾಯಿ ಸಾಲ ಮಾಡಿದ್ದಾಳೆ ಹೊರತು ನನಗಲ್ಲ.
ನೀವು ಅವಳನ್ನು ನೋಡಿದ್ದೀರಿ, ಅಲ್ಲವೇ? ನಮ್ಮ ಜಗಳವನ್ನು ಬಗೆಹರಿಸಿಕೊಳ್ಳಲು ನಾವು ಎಷ್ಟು ಬಾರಿ ಪೊಲೀಸ್ ಠಾಣೆಗೆ ಬಂದಿಲ್ಲ? ನಿಮಗೆ ಗೊತ್ತಾ, ಸರಿ?” ಸತೀಶ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾನೆ. ಈ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳು ಸತೀಶ್ ಅವರನ್ನು ಸಮಾಧಾನಪಡಿಸಿದ್ದು, ಅವರ ಹೇಳಿಕೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದು, ತದನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಸತೀಶ್ ತನ್ನ ಹೆಂಡತಿ ತನಗೆ ಮೋ-ಸ ಮಾಡುತ್ತಿದ್ದಾಳೆ ಎಂದು ಶಂಕಿಸಿ ಹಿಂಬಾಲಿಸಿದ್ದಾನೆ. ಶಿವಾನಿ ರೈಲು ನಿಲ್ದಾಣದ ಬಳಿಯಿರುವ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಸುನೀಲ್‌ನನ್ನು ಭೇಟಿಯಾಗಿರುವುದನ್ನು ನೋಡಿದ ಆತ ಆಕೆಯ ತಲೆಯನ್ನು ಕ-ತ್ತರಿಸಿದ್ದಾನೆ ಎಂದು ತಿಳಿಸಿದ್ದಾರೆ. ಸಿಐ ರಾಮಚಂದ್ರ ಪ್ರಕಾರ, ಸತೀಶ್ ತನ್ನ ಪತ್ನಿ ಮತ್ತು ಸುನೀಲ್ ಇಬ್ಬರನ್ನೂ ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.
ಸತೀಶ್ ಪತ್ನಿ ಮೇಲೆ ಹ-ಲ್ಲೆ ನಡೆಸಿದಾಗ ಸುನೀಲ್ ಪರಾರಿಯಾಗಿದ್ದಾನೆ. ಅವರ ಹೇಳಿಕೆಯನ್ನು ತೆಗೆದು ಎಫ್‌ಐಆರ್ ದಾಖಲಿಸಿದ ನಂತರ ನಾವು ಅವರನ್ನು ಸ್ಥಳಕ್ಕೆ ಕರೆದೊಯ್ದಿದ್ದೇವೆ. ಹೆಂಡತಿಯ ಶ-ವ ಎಲ್ಲಿದೆ ಎಂದು ನಮಗೆ ತೋರಿಸಿದನು. ಕೊಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಇಬ್ಬರೂ ಬೇರೆ ಬೇರೆ ಜಾತಿಯವರು, ಸತೀಶ್ ಮೇಲ್ಜಾತಿಯವರೆ ರೂಪಾ ಒಬಿಸಿ ಸಮುದಾಯದವರು, ಮದುವೆಯಾದಾಗ ಜನ ಊರಿನಿಂದ ಹೊರ ಹಾಕಿದ್ದರು.ಒಂದೆರಡು ವರ್ಷಗಳ ತನಕ ನೆಮ್ಮದಿಯಿಂದ ಇದ್ದರು. ಸತೀಶ್ ಮತ್ತು ರೂಪ ತಮ್ಮ ವೈವಾಹಿಕ ಜೀವನದಲ್ಲಿ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ಹಲವಾರು ಬಾರಿ ತನ್ನ ಬಳಿಗೆ ಬಂದಿದ್ದರು. ಕಳೆದ ಎರಡು ವರ್ಷಗಳಿಂದ, ಅವರು ಸಾಕಷ್ಟು ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಕೆಯ ಮೇಲೆ ಸದಾ ಸಂಶಯಪಡುತ್ತಿದ್ದ ಆತ ಆಕೆಗೆ ಬೇರೆ ಬೇರೆ ಪುರುಷರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಹೇಳುತ್ತಿದ್ದ.
ಇದು ನಿಜವೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಈ ಸುನೀಲ್ ಯಾರೆಂದು ಪತ್ತೆ ಹಚ್ಚುತ್ತಿದ್ದೇವೆ. ಕಳೆದ ತಿಂಗಳು ಮಹಿಳೆ ತನ್ನ ಅತ್ತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತೊಂದರೆ ಇದೆ ಎಂದು ನನ್ನ ಬಳಿಗೆ ಬಂದಿದ್ದಳು. ಈ ಹಿಂದೆ ಮನೆಯ ದಿನಸಿ ಸಾಮಗ್ರಿ ತರಲು ಹಣವನ್ನು ನೀಡುವುದಿಲ್ಲ ಎಂದು ಆಕೆಯಿಂದ ದೂರುಗಳು ಬಂದಿದ್ದವು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯೂ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.