Chicken lovers beware, here’s the info: ಬೆಂಗಳೂರು: ನೀವು ಚಿಕನ್ ಪ್ರಿಯರೇ ಆಗಿದ್ದರೆ ಎಚ್ಚರ (Beware)…ಹೌದು ಏಕೆ ಎಂದು ಕೇಳುತ್ತಿದ್ದೀರಾ ಅದಕ್ಕೆ ಕಾರಣವಿದೆ.. ನೀವು ಚಿಕನ್ ಪ್ರಿಯರಾಗಿದ್ದರೆ ದಯವಿಟ್ಟು ಈ ಸುದ್ದಿಯನ್ನು ನೋಡಲೇಬೇಕು..
ಜನರೇ ಎಚ್ಚರ..ಎಚ್ಚರ.. ಹಕ್ಕಿ ಜ್ವರ ಬಂದಿದೆ. ಚಳಿಗಾಲದಲ್ಲಿ ಅಲರ್ಟ್ (Alert) ಆಗದೇ ಇದ್ರೆ ಡೇಂಜರ್. ಹೌದು, ಕೇರಳದಲ್ಲಿ ಹಕ್ಕಿ ಜ್ವರ (Bird Flu) ಕಾಣಿಸಿಕೊಂಡಿದ್ದರಿಂದ ಆತಂಕ ಹೆಚ್ಚಾಗಿದ್ದು, ಕೋಯಿಕ್ಕೋಡ್ ಫಾರ್ಮ್‌ವೊಂದರಲ್ಲಿ ಸಾವಿರಾರು ಕೋಳಿ ಸಾವನಪ್ಪಿದೆ, 2000ಕ್ಕೂ ಹೆಚ್ಚು ಕೋಳಿಗಳ ಸಾವಿನಿಂದ ಆತಂಕ ಶುರುವಾಗಿದೆ.
ಕೋಳಿಗಳಲ್ಲಿ H5N1 ಸೋಂಕು ಇರುವುದು ದೃಢ ಪಟ್ಟಿದೆ.
ಈಗಾಗಿ ಮಧ್ಯಪ್ರದೇಶದ (Madhya Pradesh) ಭೋಪಾಲ್ ಲ್ಯಾಬ್ (Bhopal Lab) ನಲ್ಲಿ ಪರೀಕ್ಷೆ ನಡೆದಿದ್ದು, 5000ಕ್ಕೂ ಹೆಚ್ಚು ಕೋಳಿಗಳನ್ನು ತಜ್ಞರು ಪರೀಕ್ಷೆ ಮಾಡಿದ್ದಾರೆ. 2000ಕ್ಕೂ ಹೆಚ್ಚು ಕೋಳಿಗಳಲ್ಲಿ H5N1 ಸೋಂಕು ಪತ್ತೆಯಾಗಿದೆ. ಹೀಗಾಗಿ ಕೇರಳ ಗಡಿ ಭಾಗದಲ್ಲಿ ಹಕ್ಕಿಜ್ವರದ ಅಲರ್ಟ್ (Alert) ಆಗಿದ್ದಾರೆ. ಕೇರಳದ ಕೋಳಿಗಳ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಚಿಕನ್ (Chicken) ಪ್ರಿಯರಾಗಿದ್ದರೆ ದಯವಿಟ್ಟು ಚಿಕನ್ ತಿನ್ನುವ ಮುನ್ನ ಎಚ್ಚರ ವಹಿಸಲೇಬೇಕಾಗಿದೆ. ಇಲ್ಲವಾದರೆ ಮಾರಕವಾಗಿರುವ ಎಚ್ 5 ಎನ್ 1 ರೋಗಕ್ಕೆ ತುತ್ತಾಗಬೇಕಾಗಿದೆ. ಎಚ್ವರ ವಹಿಸಿ ಆರೋಗ್ಯವಾಗಿರಿ..