
ಕಾಂತಾರ ಸಿನಿಮಾದ ಯಶಸ್ಸಿನ ನಂತರ ಎಲ್ಲೆಲ್ಲೂ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಹಾಗೂ ಸೆಲೆಬ್ರಿಟಿಗಳು ಸಹಾ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಇದರ ನಡುವೆಯೇ ಅಲ್ಲೊಬ್ಬರು, ಇಲ್ಲೊಬ್ಬರು ಸಿನಿಮಾ ಕುರಿತು ಟೀಕೆ ಮಾಡುವವರು ಸಹಾ ಇರುವುದು ಸಹಜ. ಆದರೆ ಕಾಂತಾರ ಸಿನಿಮಾ ಮಾತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಸಹಾ ಯಶಸ್ಸು ಪಡೆದು ಮುನ್ನುಗ್ಗಿದೆ. ಐಎಂಡಿಬಿ ರೇಟಿಂಗ್ ನಲ್ಲಿ ಕಾಂತಾರ ಸಿನಿಮಾ ನಂಬರ್ ಒನ್ ಸಿನಿಮಾ ಆಗಿ ಹೊರಹೊಮ್ಮುವ ಮೂಲಕ ತನ್ನ ಛಾಪನ್ನು ಮೂಡಿಸಿದೆ. ಕಾಂತಾರ ಇಡೀ ದೇಶದ ಜನರ ಮೆಚ್ಚುಗೆಗಳನ್ನು ಪಡೆದ ಸಿನಿಮಾ ಆಗಿ ಅಬ್ಬರಿಸಿದೆ.
ಕಾಂತಾರ ಸಿನಿಮಾ ಹೀಗೆ ಸದ್ದನ್ನು ಮಾಡುವಾಗಲೇ ಕನ್ನಡದ ನಟ, ಸಾಮಾಜಿಕ ಹೋರಾಟಗಾರ ಎಂದು ಗುರ್ತಿಸಿಕೊಂಡಿರುವ ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಅವರು ಕಾಂತಾರ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು, ಈ ಸಿನಿಮಾದಲ್ಲಿನ ಭೂತ ಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳುತ್ತಾ, ಒಂದಷ್ಟು ವಿಚಾರಗಳನ್ನು ಹಂಚಿಕೊಂಡ ನಂತರ ಅದೊಂದು ದೊಡ್ಡ ಸುದ್ದಿಯಾಗಿದ್ದು, ನಟನ ಬಗ್ಗೆ ವ್ಯಾಪಕ ಟೀಕೆಗಳು ಹರಿದು ಬರುತ್ತಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಉಪ್ಪಿ ಚೇತನ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಪ್ಪಿ ಅವರು ಮಾದ್ಯಮವೊಂದರ ಜೊತೆ ಮಾತನಾಡುತ್ತಾ, ಕಾಂತಾರದಂತೆ ತನ್ನ ಸಿನಿಮಾ ಹಿಟ್ ಆಗಲ್ಲಾ ಅಂತ ನಟ ಚೇತನ್ ಅವರಿಗೆ ಹೊಟ್ಟೆ ಕಿಚ್ಚು ಇರಬಹುದು. ಹಾಗಾಗಿ ಅವರು ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಚೇತನ್ ಅವರ ಮಾತಿಗೆ ತಿರುಗೇಟನ್ನು ನೀಡಿದ್ದಾರೆ. ಅವರೊಬ್ಬ ನಟನೂ ಅಲ್ಲ, ಎಡಪಂಥೀಯನೂ ಅಲ್ಲ ಎಂದಿದ್ದಾರೆ ಉಪ್ಪಿ ಅವರು. ಅಂತಹವರು ಬುಡುಕಟ್ಟು ಜನಾಂಗದವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಹುನ್ನಾರವನ್ನು ಮಾಡುತ್ತಿದ್ದಾರೆ.
ಆದರೆ ಅವರಿಗೆ ಆದಿವಾಸಿ ಜನಾಂಗ, ದಲಿತ ಹೀಗೆ ಎಲ್ಲರೂ ಸೇರಿಯೇ ಹಿಂದೂ ಧರ್ಮವಾಗಿದೆ. ಆಕಾಶಕ್ಕೆ ಮುಖ ಮಾಡಿ ಉಗುಳುವ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ಅದೇ ಅವರ ಮುಖದ ಮೇಲೆ ಬೀಳುತ್ತದೆ. ಈ ಹಿಂದೆ ಹಿಂದಿಯಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತೆ ಸಿನಿಮಾವನ್ನು ಮಾಡಲಾಗುತ್ತಿತ್ತು. ಆಗೆಲ್ಲಾ ಚೇತನ್ ರಂತಹವರು ಸುಮ್ಮನಿದ್ದರು ಎಂದಿದ್ದಾರೆ ಉಪ್ಪಿ. ನಟ ಚೇತನ್ ಅವರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಹಾ ಸಾಕಷ್ಟು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
Comments are closed.