ಮುದ್ದಾದ ಗಂಡ, ಮಗು ಇದ್ದರೂ ಇನ್ನೊಬ್ಬನ ತೆಕ್ಕೆಯಲ್ಲಿ ಬಿದ್ದ ಯುವತಿ..! ಮುಂದಾಗಿದ್ದು ಅನಾಹುತ

Entertainment/ಮನರಂಜನೆ

ಕಳೆದ ಕೆಲವು ದಿನಗಳ ಹಿಂದೆ ಒಂದು ಸಂಬಂಧಕ್ಕೆ ಕೊಳ್ಳಿ ಇಡುವ ಭೀಕರ ಘಟನೆ ನಡೆದಿದ್ದು ಇದೀಗ ಈ ಲೇಖನದ ಮೂಲಕ ಜೀವನದಲ್ಲಿ ಯಾವುದನ್ನು ನಂಬಬೇಕು, ಯಾವುದರ ಮೇಲೆ ಪ್ರೀತಿ ವಿಶ್ವಾಸ ಇಡಬೇಕು, ಸಂಬಂಧಗಳ ನಡುವೆ ಯಾವ ರೀತಿ ಇದ್ದರೆ, ಹೇಗೆ ಅವರೊಟ್ಟಿಗೆ ಸಮಯ ಕಳೆದರೆ ನಾವು ಸುರಕ್ಷಿತ ಆಗಿರುತ್ತವೆ ಎಂಬುದಾಗಿ ಹೇಳಲು ಕೂಡ ಅಸಾಧ್ಯ ಆಗುತ್ತಿದೆ…ಹೌದು ಎರಡು ತಿಂಗಳ ಹಿಂದೆ ಉತ್ತರ ಹಳ್ಳಿಯಲ್ಲಿ ಗೌಡ್ರು ಹೋಟೆಲ್ ಎನ್ನುವ ಒಬ್ಬ ಹೋಟೆಲ್ ಮಾಲೀಕನ ಪ್ರಾಣ ತೆಗೆಯಲಾಗುತ್ತದೆ.. ಅದನ್ನು ಮಾಡಿದ್ದು ಹೇಗೆ.? ಅದನ್ನ ಮಾಡಿದ್ದು ಯಾರು..? ಇದರ ಅಸ್ಲಿಯತ್ತು ಏನು ಎಂಬುದಾಗಿ ನಾವು ಮತ್ತೊಮ್ಮೆ ಹೇಳುವ ಪ್ರಯತ್ನ ಈ ಲೇಖನದ ಮೂಲಕ ಮಾಡುತ್ತೇವೆ.

ಆತ ಚನ್ನರಾಯಪಟ್ಟಣದ ನಿವಾಸಿ. ಆರು ವರ್ಷಗಳ ಹಿಂದೆ ಮಂಡ್ಯ ಮೂಲದ ರಂಜಿತ ಎನ್ನುವವರನ್ನು ಮದುವೆ ಮಾಡಿಕೊಂಡಿರುತ್ತಾನೆ.. ಬೆಂಗಳೂರಿನಲ್ಲಿಯೆ ವಾಸವಿದ್ದು, ಗೌಡ್ರು ಹೋಟೆಲ್ ಎನ್ನುವ ಹೋಟೆಲ್ ತೆರೆದು ಬಿಸಿನೆಸ್ ಮ್ಯಾನ್ ಆಗಿರುತ್ತಾನೆ. ದಂಪತಿಗಳಿಗೆ ಎರಡು ವರ್ಷದ ಮಗು ಕೂಡ ಇರುತ್ತದೆ. ಮುದ್ದಾದ ಹೆಂಡತಿ ಸಂಸಾರ ಮಗು ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅದೇ ಹೋಟೆಲ್ ಗೆ ನೀರು ಹಾಕುವ ಇನ್ನೊಬ್ಬ ವ್ಯಕ್ತಿ ಎಂಟ್ರಿ ಆಗುತ್ತಾನೆ. ಆತನ ಹೆಸರು ಗಣೇಶ್ ಎಂಬುದಾಗಿ ತಿಳಿದು ಬಂದಿತ್ತು.

ಆತ ನೀರು ಹಾಕುತ್ತಿದ್ದು ಜೊತೆಗೆ ಫೈನಾನ್ಸ್ ಕೂಡ ಮಾಡುತ್ತಿದ್ದ. ಆ ವಿಚಾರ ಗೊತ್ತಿದ್ದ ರಂಜಿತಾಳ ಗಂಡ ಅರುಣ್ ಆತನಿಂದ ಕಷ್ಟದ ಸಮಯದಲ್ಲಿ 5 ಲಕ್ಷ ಹಣ ಪಡೆದಿದ್ದ. ನಂತರ ಒಳ್ಳೆಯ ಬಾಂಧವ್ಯ ಅರುಣ್ ಮತ್ತು ಗಣೇಶ್ ನಡುವೆ ಇತ್ತು. ಜೊತೆಗೆ ಈ ಬಾಂಧವ್ಯ ಕೇವಲ ಅರುಣ್ ಜೊತೆಗೆ ಗಣೇಶ ಇಟ್ಟುಕೊಳ್ಳದೆ ಆತನ  ಹೆಂಡತಿಯಾದ ರಂಜಿತಾ ಅವರ ಜೊತೆಗೂ ಕೂಡ ಗಣೇಶ್ ಇಟ್ಟುಕೊಂಡಿದ್ದ..ನಂತರ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚು ಬೆಳೆದು, ಅದರಿಂದ ಅ**ನೈತಿಕ ಸಂಬಂಧಕ್ಕೂ ಕೂಡ ಅವರಿಬ್ಬರು ಮುಂದಾಗಿದ್ದರು ಎನ್ನಲಾಗಿದೆ.

ನಂತರ ಆಗಿದ್ದೇನು..? ಈ ವಿಚಾರ ತಿಳಿದ ಗಂಡ ರಂಜಿತಾಳನ್ನು ಮತ್ತು ಗಣೇಶನ ಕರೆದು ಹೇಳಿದ್ದೇನು.? ಆದರೆ ಗಂಡನ ಈ ಕಿರಿಕಿರಿ ವಾರ್ನಿಂಗ್ ಮತ್ತು ಅವರಿಗೆ  ಅಡ್ಡಲಾಗಿ ಬರುವ ತಮ್ಮ ಅನೈತಿಕ ಸಂಬಂಧಕ್ಕೆ ಹೆಂಡತಿ ಗಂಡನ ಪ್ರಾಣ ತೆಗೆಯಲು ಯಾವ ರೀತಿ ಪ್ಲಾನ್ ಮಾಡಿ  ತನ್ನ ಗಂಡನನ್ನೆ ಸಾಯಿಸಿದಳು ಎಂಬುದಾಗಿ ಎಲ್ಲ ತಿಳಿಯಲು ಈ ವಿಡಿಯೋ ನೋಡಿ. ಮತ್ತು ಈ ರೀತಿ ಘಟನೆಗಳು ನಿಜಕ್ಕೂ ಜೀವನದಲ್ಲಿ ಸಂಬಂಧಗಳ ಬೆಲೆ ಕಡಿಮೆ ಮಾಡುವಂತೆ ಆಗುತ್ತಿವೆ..ಈ ರೀತಿ ಮುದ್ದಾದ ಸಂಸಾರ ಇತ್ತು. ಆಕೆಗೆ ಮಗು, ಗಂಡ ಎಲ್ಲ ಇದ್ದರೂ ಕೂಡ ದುಡಿದುಕೊಳ್ಳುವುದಕ್ಕೆ ದಾರಿ ಇದ್ದರೂ ಕೂಡ ಈ ರೀತಿ ತಪ್ಪು ಆಸೆಯಿಂದ ತನ್ನ ಜೀವನವನ್ನೇ ಸರ್ವನಾಶ ಮಾಡಿಕೊಂಡಳು..ಹೆಣ್ಣುಮಕ್ಕಳು, ಯಾರು ಈ ರೀತಿ ತಪ್ಪು ಮಾಡಬೇಡಿ..ವಿಡಿಯೋ ನೋಡಿ ( video credit : third eye )

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.