
ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ ದಿನೇ ದಿನೇ ಒಬ್ಬರೇ ಒಬ್ಬರು ವೈರಲ್ ಆಗ್ತಾನೆ ಇರ್ತಾರೆ. ಅದೇ ರೀತಿ ಈ ವೈರಲ್ ಆದಂತಹ ಜನ ಸಾಕಷ್ಟು ಪ್ರಖ್ಯಾತಿ ಆಗಿರಬಹುದು ಅಥವಾ ಅಭಿಮಾನಿ ಬಳಗವನ್ನ ಸಂಪಾದಿಸುವುದು ಕೂಡ ಸಹಜ. ಇನ್ನು ರಾತ್ರಿ ರಾತ್ರಿ ವೈರಲ್ ಆಗುವಂತಹ ಈ ಜನ ನಂತರದ ದಿನಗಳಲ್ಲಿ ಸಿನಿಮಾ ಆಗಿರಬಹುದು ಅಥವಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಕೂಡ ಉಂಟು. ಅದು ಅವರ ನಸೀಬ್ ಮೇಲೆ ನಿರ್ಧಾರ ಆಗಿರುತ್ತದೆ ಬಿಡಿ.
ಅದೇ ರೀತಿ ಸದ್ಯ ನಮ್ಮ ಕರ್ನಾಟಕದಲ್ಲಿ ಈತ ದಿನೇ ದಿನೇ ಸಿಕ್ಕಾಪಟ್ಟೆ ಪ್ರಖ್ಯಾತಿ ಗಳಿಸುತ್ತಿದ್ದಾನೆ ಅಂತಾನೇ ಹೇಳಬಹುದು. ಹೌದು ಸಾಂಗ್ ಮೂಲಕ ಬರ್ತಡೇ ವಿಶಸ್ ಹಾಡನ್ನು ಹಾಡುವ ಈತ ಹಾಡಿಗಾಗಿ ಜನ ಮುಗಿ ಬೀಳುತ್ತಾರೆ. ಅದೇ ರೀತಿ ಈತನೇ ಹೇಳಿಕೊಂಡಿರುವ ಹಾಗೆ ಸುಮಾರು 70,000 ಬರ್ತಡೇ ಸಾಂಗ್ ಗಳನ್ನು ಹಾಡಿದಾರಂತೆ. ಈಗಾಗಲೇ ಈತ ಯಾರು ಅಂತ ನಿಮಗೆ ಗೊತ್ತಾಗಿರುತ್ತೆ. ಹೌದು ಆತ ಬೇರೆ ಯಾರು ಅಲ್ಲ ಕಾಫಿ ನಾಡು ಚಂದು.
ಹೌದು ಸ್ನೇಹಿತರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಕಾಫಿನಾಡು ಚಂದು ಇನ್ಸ್ಟಾಗ್ರಾಮ್ ನಲ್ಲಿ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಅದೇ ರೀತಿ ಸಾಕಷ್ಟು ಮೀಡಿಯಾಗಳು ಹಾಗೂ ಚಾನೆಲ್ ಗಳು ಇವರ ಒಂದು ಇಂಟರ್ವ್ಯೂ ಮಾಡುತ್ತಿದ್ದು, ತುಂಬಾನೇ ಹೆಸರು ಮಾಡುತ್ತಿದ್ದಾರೆ ಅಂತನೇ ಹೇಳಬಹುದು. ಈ ರೀತಿ ವೈರಲಾಗುತ್ತಿರುವ ಕಾಫಿನಾಡು ಚಂದು ಸದ್ಯ ದೊಡ್ಮನೆ ಮಗಳಾದ ಪೂರ್ಣಿಮಾ ರಾಮಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಹೌದು ಶಿವರಾಜಕುಮಾರ್ ಅವರ ತಂಗಿಯಾಗಿರುವ ಪೂರ್ಣಿಮಾ ರಾಮಕುಮಾರ್ ಅವರನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿರುವ ಕಾಫಿನಾಡು ಚಂದು, ಅಲ್ಲಿಂದಲೇ ಶಿವರಾಜಕುಮಾರ್ ಅವರಿಗೆ ನಿಮ್ಮನ್ನು ನೋಡಬೇಕು ನಿಮ್ ಜೊತೆ ಕಾಫಿ ಕುಡಿಬೇಕು ಯಾವಾಗ ಸಿಕ್ತೀರಾ ಅಂತ ಹಾಡು ಹಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ಸಾಕಷ್ಟು ಜನ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ
ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.
Comments are closed.