chandrashekhar-guruji

ಸರಳ ವಾಸ್ತು ಚಂದ್ರಶೇಖರ್ ಕೊಲೆ ಹಿಂದಿನ ಸತ್ಯಾ ಸತ್ಯತೆಯೇನು.? ಹೆಣ್ಣು ಹೊನ್ನು ಮಣ್ಣೆ ಸಾವಿಗೆ ಕಾರಣವಾಯ್ತಾ.?

CINEMA/ಸಿನಿಮಾ Heap/ರಾಶಿ ಭವಿಷ್ಯ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ಕೊಂದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ, ‘ಸರಳ ವಾಸ್ತು’ ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಅಂದಹಾಗೇ ಚಂದ್ರಶೇಖರ ಗುರೂಜಿ ಅವರನ್ನು ಕೊಂದ ಕೊಲೆ ಆರೋಪಿಗಳಿಬ್ಬರ ಪೈಕಿ ಒಬ್ಬನ ಪತ್ನಿ ಈ ವನಜಾಕ್ಷಿ.

ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪ್ರಸಿಡೆಂಟ್​ ಹೋಟೆಲ್​ನ ರಿಸೆಪ್ಶನ್​ನಲ್ಲಿ ಭಕ್ತರ ಸೋಗಿನಲ್ಲಿ ಕುಳಿತಿದ್ದ ಯುವಕರಿಬ್ಬರು, ಚಂದ್ರಶೇಖರ ಗುರೂಜಿ ಅವರು ಆಗಮಿಸುತ್ತಿದ್ದಂತೆ ಎದ್ದು ನಿಂತರು. ಗುರೂಜಿ ಅವರು ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಇಬ್ಬರೂ ಸಮೀಪಕ್ಕೆ ಆಗಮಿಸಿ, ಒಬ್ಬ ಗುರೂಜಿ ಅವರ ಕಾಲು ಮುಟ್ಟಿ ನಮಸ್ಕರಿಸುವಂತೆ ನಟಿಸಿದ್ದು, ನೋಡನೋಡುತ್ತಿದಂತೆ ಪಕ್ಕದಲ್ಲೇ ಇದ್ದ ಮತ್ತೊಬ್ಬ ಗುರೂಜಿಗೆ ಚಾಕುವಿನಿಂದ ಹಿರಿದಿದ್ದಾನೆ.

ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕೇಸಿಗೆ ದೊಡ್ಡ ಟ್ವಿಸ್ಟ್! ಹಂತಕನ ಪತ್ನಿ ಬಿಚ್ಚಿಟ್ಟ ಅಸಲಿ ಸತ್ಯ ಬಯಲು - Karnataka Times

ಏನಾಗ್ತಿದೆ ಎಂದು ಅರಿಯುವಷ್ಟರಲ್ಲಿ ಇಬ್ಬರೂ ಗುರೂಜಿಯನ್ನ ರಿಸೆಪ್ಶನ್​ನಲ್ಲೇ ಅಟ್ಟಾಡಿಸಿಕೊಂಡು 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಿರಿದು ಕೊಂದಿದ್ದಾರೆ. ಬಳಿಕ ಚಾಕು ಹಿಡಿದುಕೊಂಡೇ ಹೋಟೆಲ್​ನಿಂದ ಹೊರ ಓಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಭಯಾನಕ ದೃಶ್ಯ ನೋಡಿದರೆ ಗುರೂಜಿಯ ಪರಿಚಿತರಿಂದಲೇ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೊಲೆ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೆವಾಡ ಬಂಧಿಸಿದ್ದಾರೆ. ಕೊಲೆಗೆ ಏನು ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಚಂದ್ರಶೇಖರ ಗುರೂಜಿ ಜತೆ ಮಹಾಂತೇಶ ಶಿರೂರ

ಕೊಲೆ ಆರೋಪಿ ಮಹಾಂತೇಶ ಶಿರೂರ ಮತ್ತು ಈತನ ಪತ್ನಿ ವನಜಾಕ್ಷಿ ಇಬ್ಬರೂ ಚಂದ್ರಶೇಖರ ಗುರೂಜಿ ಅವರ ‘ಸರಳ ವಾಸ್ತು’ ಸಂಸ್ಥೆಯ ಮಾಜಿ ಎಂಪ್ಲಾಯಿಗಳು. ಸರಳ ವಾಸ್ತು ಸಂಸ್ಥೆಯಲ್ಲಿ 2019ರ ವರೆಗೆ ಕೆಲಸ ಮಾಡಿದ್ದಳು. ಈ ವೇಳೆ ಈಕೆಯ ಹೆಸರಿನಲ್ಲಿ ಚಂದ್ರಶೇಖರ ಗುರೂಜಿ ಅವರು ಕೆಲ ಆಸ್ತಿ ಖರೀದಿಸಿದ್ದರಂತೆ. ಗೋಕುಲ ರಸ್ತೆ ಬಳಿಯ ಅಪಾರ್ಟ್​ಮೆಂಟ್​ ಅನ್ನೂ ಈಕೆಯ ಹೆಸರಿಗೆ ಮಾಡಿದ್ದಾರೆ. ಆಸ್ತಿಯನ್ನು ವಾಪಸ್​ ಕೇಳಿದಾಗ ಗಲಾಟೆ ನಡೆದಿದೆ.

ಆಸ್ತಿ ಜತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ಆಗುತ್ತಿತ್ತಂತೆ. ಇದೇ ವಿಚಾರಕ್ಕೆ ವನಜಾಕ್ಷಿ ಗಂಡ ಹಾಗೂ ಮತ್ತೊಬ್ಬ ಸೇರಿಕೊಂಡು ಗುರೂಜಿಯನ್ನ ಕೊಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಪೊಲೀಸ್​ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

ಸರಳವಾಸ್ತು ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹ'ತ್ಯೆ. ಕೆಲವೇ ಗಂಟೆಗಳಲ್ಲಿ ಹೊರಬಿತ್ತು ನೋಡಿ ಸ್ಫೋಟಕ ಮಾಹಿತಿ – ಕನ್ನಡ ನಾಡಿ

ಚಂದ್ರಶೇಖರ ಗೂರುಜಿ ಕೊಲೆಯಾದ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳ ಭೇಟಿ, ಇನ್ನು ಚಂದ್ರಶೇಖರ ಗೂರುಜಿ ಅವರ ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಇದು ಅಂತ್ಯದ ಹೀನ ಕೃತ್ಯ. ಕೊಲೆಗಾರರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಲು ಎಸ್​ಪಿ ಜತೆ ಮಾತನಾಡಿದ್ದೇನೆ. ಹತ್ಯೆಗೆ ಏನು ಕಾರಣ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಈ ಕೃತ್ಯದಲ್ಲಿ ಯಾರೇ ಇದ್ದರೂ ಶಿಕ್ಷೆಯಾಗಲಿದೆ ಎಂದಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.