ಸದ್ಯ ನಮ್ಮ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಪ್ರಾಣವನ್ನು ತೆಗೆಯಲಾಗಿದ್ದು ಹುಬ್ಬಳ್ಳಿಯ ಉಣಕಲ್ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡಗಲಲ್ಲೇ ಈ ತೀತೊ ಮಾಡಲಾಗಿದೆ. ಹೌದು ಹಾಡ ಹಗಲೇ ಚಾಕುವಿನಿಂದ ಇರಿದು ಈ ರೀತಿ ಮಾಡಿದಲಾಗಿದ್ದು ಹೊಟೆಲ್ ನ ರಿಸಪ್ಷನ್ ನಲ್ಲಿ ಇಬ್ಬರು ಬಂದು ಪ್ರಾಣ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಇದು ಆಸ್ತಿ ವಿಚಾರಕ್ಕೆ ಆದ ಕೊಲೆ ಎಂಬ ಮಾಹಿತಿ ತಿಳಿದು ಬಂದಿದೆ..
ಹೌದು ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು ಚಾಕುವಿನಿಂದ 60 ಬಾರಿ ಆಯುಧದಿಂದ ತಿವಿದು ಇರಿದು ಪರಾರಿಯಾಗಿದ್ದರು. ಹೌದು ಈ ರೀತಿ ಮಾಡಿಸ ಕೂಡಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಹೌದು ಇದೆಲ್ಲವೂ ಸಿಸಿ ಕ್ಯಾಮಾರದಲ್ಲಿ ದಾಖಲಾಗಿದ್ದು ಕೇವಲ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಬೇನಾಮಿ ಆಸ್ತಿ ಶಿಷ್ಯಂದಿರ ವಿಚಾರಕ್ಕೆ ಗುರೂಜಿ ಹಾಗೂ ಶಿಷ್ಯಂದಿರ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದ್ದಯ ಆದರೆ
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲಇನ್ನು ಇಬ್ಬರು ಆರೋಪಿಗಳು ಕೂಡ ಮಾಜಿ ನೌಕರರೇ ಎಂದು ತಿಳಿಗು ಬಂದಿದ್ದು ಗುರೂಜಿಯೇ ಇಬ್ಬರನ್ನೂ ಹೋಟೆಲ್ ಗೆ ಕರೆಯಿಸಿದ್ದರೆಂಬ ಮಾಹಿತಿ ಇದ್ದು ಮಾತಮಾಡಬೇಕೆಂದುಕೊಂಡಾಗ ಸ್ವಾಮೀಜಿ ಕಾಲಿಗೆ ಬಿದ್ದಂತೆ ನಟಿಸಿ ಚಾಕು ಇರಿದಿದ್ದಾರೆ. ಹೌದು ಹಳೆಯ ದ್ವೇಷ ಮತ್ತು ವೈಯಕ್ತಿಕ ವ್ಯವಹಾರ ಕಾರಣದಿಂದ ಈ ರೀತಿ ಮಾಡಲಾಗಿದ್ದು ಗುರೂಜಿ ಅವರು ಆಸ್ತಿ ಖರೀದಿಸಿ ಅವರ ಶಿಷ್ಯಂದಿರ ಹೆಸರಲ್ಲಿ ಇಡುತ್ತಿದ್ದರು. ಅದನ್ನು ವಾಪಸ್ ಕೊಡು ಎಂದಾಗ ಈ ರೀತಿ ಮಾಡಿದ್ದಾರೆಂಬ ಮಾಹಿತಿ ದೊರೆತಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಗಳು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
ಹೌದು ಚಂದ್ರಶೇಖರ್ ಗುರೂಜಿ ರವರ ಪ್ರಕರಣದ ಬೆನ್ನಲ್ಲೇ ಗುರೂಜಿ ಅವರ ಆಪ್ತ ಮಹಾಂತೇಶ ಶಿರೂರನ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದರು. ಗುರೂಜಿ ಅವರನ್ನು ಮಹಾಂತೇಶ ಶಿರೂರ ಮತ್ತು ಮಂಜುನಾಥ ದುಮ್ಮವಾಡನೇ ಕೊಂದಿರುವ ಆರೋಪ ಕೇಳಿ ಬಂತು. ಎಲ್ಲಕ್ಕಿಂತಾ ಹೆಚ್ಚಾಗಿ ಗುರೂಜಿಯ ಪ್ರಾಣ ತೆಗೆದಿರುವುದು ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂಬ ಅನುಮಾನ ವ್ಯಕ್ತವಾಯ್ತು.
ಆರೋಪಿ ವನಜಾಕ್ಷಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು 2019ರ ವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗುರೂಜಿ ಅವರು ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು.ಬಳಿಕ ಆಸ್ತಿ ವಾಪಸ್ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿ ಹೊರಬಿತ್ತು