ನಮ್ಮ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಪೂಜೆ ಸ್ಥಾನವನ್ನು ನೀಡಲಾಗುತ್ತದೆ. ಆದರೆ ಮಹಿಳೆಯ ಮನಸ್ಸಿನ ಅರ್ಥ ಮಾಡಿಕೊಳ್ಳುವ ಜಾಣ್ಮೆ ಅಥವಾ ಬುದ್ಧಿವಂತಿಕೆ ಎನ್ನುವುದು ಇದುವರೆಗೂ ಯಾವ ಪುರುಷನಲ್ಲಿಯೂ ಕೂಡ ಬಂದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ನಾವು ಚಾಣಕ್ಯ ಶಾಸ್ತ್ರದ ಪ್ರಕಾರ ಮಹಿಳೆಯರ ಕುರಿತಂತೆ ಬರೆದಿರುವ ಕೆಲವೊಂದು ವಿಚಾರಗಳನ್ನು ನಿಮಗೆ ಹೇಳಲು ಹೊರಟಿದ್ದೇವೆ.
ಹೌದು ಮಿತ್ರರೇ ಆಚಾರ್ಯ ಚಾಣಕ್ಯರು ಎಷ್ಟು ಮೇಧಾವಿಗಳು ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಯಾಕೆಂದರೆ ಅಂತಹ ದೊಡ್ಡ ಮಗದ ಸಾಮ್ರಾಜ್ಯವನ್ನು ಕೆಡವಿ ಮೌರ್ಯ ಸಾಮ್ರಾಜ್ಯವನ್ನು ಒಬ್ಬ ಚಿಕ್ಕ ಹುಡುಗನ ಕೈಯಲ್ಲಿ ಕಟ್ಟಿಸಿದವರು ಅವರು. ಇನ್ನು ಅವರ ಚಾಣಕ್ಯ ಶಾಸ್ತ್ರ ಗ್ರಂಥವು ಜೀವನದಲ್ಲಿ ಯಾವ ರೀತಿಯಲ್ಲಿ ಯಶಸ್ವಿಯಾಗಿ ಇರಬೇಕು ಎನ್ನುವುದರ ಕುರಿತಂತೆ ಇರುವಂತಹ ಭಗವದ್ಗೀತೆ ಎಂದು ಹೇಳಿದರು ತಪ್ಪಾಗಲಾರದು.
ಅವರ ಪ್ರಕಾರ ದುಷ್ಟ ನಡತೆಯ ಹೆಂಡತಿ ಮತ್ತು ವಾಚಾಳಿ ಹೆಂಡತಿಯರ ಜೊತೆಗೆ ಇರುವಂತಹ ಗಂಡಂದಿರು ಹಾಗೂ ಆ ಮನೆ ಎನ್ನುವುದು ಅತ್ಯಂತ ಬೇಗವಾಗಿ ನಶಿಸಿ ಹೋಗುತ್ತದೆ ಎಂಬುದಾಗಿ ಹೇಳುತ್ತಾರೆ. ಚಾಣಕ್ಯ ಶಾಸ್ತ್ರದ ಪ್ರಕಾರ ಹೆಂಡತಿಯ ನಿಜವಾದ ಬಲ ಎನ್ನುವುದು ಆಕೆಯ ಯೌವ್ವನ ಹಾಗೂ ಸೌಂದರ್ಯದಲ್ಲಿ ಮತ್ತು ಮೃದುವಾದ ಮಾತಿನಲ್ಲಿ ಅಡಕವಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ. ಇನ್ನು ಪುರುಷರಿಗೆ ಹೋಲಿಸಿದರೆ ಸ್ತ್ರೀಯರಿಗೆ ಇರುವಂತಹ ಕೆಲವೊಂದು ವಿಶಿಷ್ಟ ಗುಣಗಳನ್ನು ಕೂಡ ಚಾಣಕ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಅದೇನೆಂದರೆ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಿಗೆ ಎರಡು ಪಟ್ಟು ಹೆಚ್ಚು ಹಸಿವು, ನಾಲ್ಕು ಪಟ್ಟು ನಾಚಿಕೆ, ಆರು ಪಟ್ಟು ಹಾಗೂ ಎಂಟು ಪಟ್ಟು ಹೆಚ್ಚಿನ ಆಸೆ ಇರುತ್ತದಂತೆ. ಚಾಣಕ್ಯ ಶಾಸ್ತ್ರದ ಪ್ರಕಾರ ಪತ್ನಿಯ ಸೌಂದರ್ಯ ಎನ್ನುವುದು ಆಕೆಯ ಸ್ನೇಹ ಭಾವದಲ್ಲಿ ಇರುತ್ತದೆ. ಇವಿಷ್ಟು ವಿಚಾರಗಳನ್ನು ಆಚಾರ್ಯ ಚಾಣಕ್ಯರು ತಮ್ಮ ಗ್ರಂಥದಲ್ಲಿ ವಿವರಿಸಿದ್ದು ಹೆಣ್ಣಿನ ಕುರಿತಂತೆ ಇರುವಂತಹ ಪ್ರಮುಖ ವಿಚಾರಗಳನ್ನು ಇಲ್ಲಿ ಬಿಡಿಸಿ ಹೇಳಿದ್ದಾರೆ ಎಂದು ಹೇಳಬಹುದಾಗಿದೆ.