Chanaky-Neethi

ಮಹಿಳೆಯರನ್ನು ಈ 3 ವಿಚಾರದಲ್ಲಿ ಗೆಲ್ಲಲು ಪುರುಷರಿಂದ ಯಾವತ್ತೂ ಕೂಡ ಸಾಧ್ಯವಿಲ್ಲ,ಚಾಣಕ್ಯರೇ ಹೇಳಿರುವ ಮಾತಿದು.

Girls Matter/ಹೆಣ್ಣಿನ ವಿಷಯ Today News / ಕನ್ನಡ ಸುದ್ದಿಗಳು

Chanakya Neethi ಆಚಾರ್ಯ ಚಾಣಕ್ಯರ(Acharya Chanakya) ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಹಾಮಂತ್ರಿ ಆಗಿರುವ ಜೊತೆಗೆ ಸರ್ವ ವಿಚಾರಗಳ ಸಂಪೂರ್ಣ ಮಾಹಿತಿ ಕೂಡ ಅವರಲ್ಲಿತ್ತು. ಮೇಧಾವಿ ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನು ನೀಡುವಂತಹ ಐತಿಹಾಸಿಕ ವ್ಯಕ್ತಿ ಅವರಾಗಿದ್ದರು. ನಿಜಕ್ಕೂ ಅವರ ಪಾಂಡಿತ್ಯವನ್ನು ಅಳೆಯುವಂತಹ ಮಾಪನವೇ ಇಡೀ ಭೂಮಂಡಲದಲ್ಲಿ ಸಿಗುವುದಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರು ತಮ್ಮ ಚಾಣಕ್ಯ(Chanakya) ನೀತಿಯಲ್ಲಿ ಬರೆದಿರುವಂತಹ ವಿಚಾರಗಳಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಮೂರು ವಿಚಾರಗಳಲ್ಲಿ ಪುರುಷರಿಗೆ ಮ-ಹಿಳೆಯರನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ ಅವರು ಸೋಲುತ್ತಾರೆ ಎಂಬ ವಿಚಾರದ ಬಗ್ಗೆ ಆಚಾರ್ಯರು ಹೇಳಿದ್ದಾರೆ. ಹಾಗಿದ್ದರೆ ಆ ಮೂರು ವಿಚಾರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಕರುಣೆಯ ಭಾವನೆಯಲ್ಲಿ ಪುರುಷರಿಗಿಂತ ಮ-ಹಿಳೆಯರು ಯಾವಾಗಲೂ ಕೂಡ ಒಂದು ಹೆಜ್ಜೆ ಮುಂದಿರುತ್ತಾರೆ ಹಾಗೂ ಒಂದು ತೂಕ ಹೆಚ್ಚಿರುತ್ತಾರೆ. ಯಾರೇ ತಪ್ಪು ಮಾಡಿದ್ದರು ಕೂಡ ಅವರನ್ನು ಕ್ಷಮಿಸುವಲ್ಲಿ ಮಾತೃ ವಾತ್ಸಲ್ಯವನ್ನು ಮಹಿಳೆಯರು ಹೊಂದಿರುತ್ತಾರೆ. ಅವರ ಕರುಣೆ ಎನ್ನುವುದೇ ನಿಜಕ್ಕೂ ಕೂಡ ಭೂಮಿಯ ತೂಕದಷ್ಟು ಇರುತ್ತದೆ. ಹೀಗಾಗಿಯೇ ಈ ವಿಚಾರದಲ್ಲಿ ಪುರುಷರು ಮ-ಹಿಳೆಯರ ಸರಿಸಮಾನರಾಗಿರುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು ಪುರಾಣ ಗ್ರಂಥಗಳಲ್ಲಿ ಹಾಗೂ ಪ್ರಾಚೀನ ಶ್ಲೋಕಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ.

Chankaya Shastra

ತಾಳ್ಮೆ ಹಾಗೂ ತಿಳುವಳಿಕೆಯ ವಿಚಾರದಲ್ಲಿ ಕೂಡ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎನ್ನುವುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ. ಯಾವುದೇ ಕಷ್ಟದ ಪರಿಸ್ಥಿತಿಯನ್ನು ನೋಡಿದರೂ ಕೂಡ ಮಹಿಳೆ ಅದನ್ನು ತಾಳ್ಮೆಯಿಂದ ಕುಳಿತು ಪರಿಹರಿಸುವ ವಿಧಾನವನ್ನು ಕಂಡು ಹಿಡಿಯುತ್ತಾಳೆ. ಆದರೆ ಪುರುಷರು ಮಾತ್ರ ಇಂತಹ ಪರಿಸ್ಥಿತಿಗಳಲ್ಲಿ ಗಾಬರಿಯಾಗುತ್ತಾರೆ. ಇಂತಹ ವಿಚಾರಗಳಲ್ಲಿ ಪುರುಷರು ಮಹಿಳೆಯರಿಂದ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟುವೆ.

ಮೂರನೇದಾಗಿ ಹಸಿವನ್ನು ತಡೆದುಕೊಳ್ಳುವಂತಹ ವಿಚಾರದಲ್ಲಿ ಮಹಿಳೆಯರು(Ladies) ಪುರುಷರಿಗಿಂತ ಸಾಕಷ್ಟು ಮೇಲಿದ್ದಾರೆ. ಅದರಲ್ಲೂ ತಮಾಷೆ ಎನ್ನುವಂತೆ ಪುರುಷರಿಗಿಂತ ಹೆಚ್ಚಿನ ಹಸಿವನ್ನು ಕೂಡ ಅವರೇ ಹೊಂದಿರುತ್ತಾರೆ ಹಾಗೂ ಅದನ್ನು ಅದುಮಿಟ್ಟುಕೊಳ್ಳುವ ಶಕ್ತಿ ಕೂಡ ಪುರುಷರಿಗಿಂತ ಹೆಚ್ಚಾಗಿ ಇದೆ. ಈ ಮೂರು ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಸದಾ ಒಂದು ಕೈ ಮೇಲೆ ಇರುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...