ಮೊಟ್ಟೆ ಇಡುವ ಊಸರವಳ್ಳಿ ಮರಿಗೆ ಜನ್ಮ ನೀಡುವ ಅಚ್ಚರಿದಾಯಕ ವಿಡಿಯೊ ವೈರಲ್…

ಊಸರವಳ್ಳಿ ಮಗುವಿಗೆ ಜನ್ಮ ನೀಡುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಊಸರವಳ್ಳಿ ಮರಿ ಹಾಕುವುದನ್ನು ನೀವು ಎಂದಾದರೂ ನೋಡಿದ್ದೀರಾ? ಊಸರವಳ್ಳಿ ಸಸ್ತನಿ ಅಲ್ಲವಾದ್ದರಿಂದ ಅದು ಮೊಟ್ಟೆಗಳನ್ನು ಇಡುತ್ತದೆ, ಆದರೆ ಇಲ್ಲಿ ಅದು ಮರಿಗೆ ಜನ್ಮ ನೀಡಿರುವುದು ಅಚ್ಚರಿ ಮೂಡಿಸಿದೆ. ಊಸರವಳ್ಳಿ ಸಮಯ ಬಂದಾಗ ಮರಿಗೆ ಜನ್ಮ ಕೂಡ ನೀಡಬಹುದು ಎಂದು ತುಂಬಾ ಜನ ಹೇಳುತ್ತಾರೆ.

ಆದಾಗ್ಯೂ, ಊಸರವಳ್ಳಿ ತನ್ನ ಮಗುವಿಗೆ ಜನ್ಮ ನೀಡುವ ವೀಡಿಯೊವನ್ನು ಅಂತರ್ಜಾಲದಲ್ಲಿ ವೈರಲ್ ಮಾಡಲಾಗಿದೆ ಮತ್ತು ನೆಟ್ಟಿಗರು ಅದನ್ನು ನಂಬದೇ ವಿಧಿಯಿಲ್ಲದಂತಾಗಿದೆ. ನಾವು ಮಾತನಾಡುತ್ತಿರುವ ವೈರಲ್ ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ ನೇಚರ್ ಈಸ್ ಸ್ಕೇರಿ (@NatureisScary) Chameleon ಎಂಬ ಸರಳ ಶೀರ್ಷಿಕೆಯೊಂದಿಗೆ ಶೇರ್‌ ಆಗಿದೆ. 30 ಸೆಕೆಂಡುಗಳ ವೀಡಿಯೊದಲ್ಲಿ ಮರದ ಕೊಂಬೆಯ ಮೇಲೆ ಊಸರವಳ್ಳಿ ಕುಳಿತುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ.

ಮೈಬಣ್ಣ ಬದಲಿಸುವ ಊಸರವಳ್ಳಿಯ ಒಳಗುಟ್ಟು - ಹೊನಲು

ಕೆಲವು ಸೆಕೆಂಡುಗಳ ನಂತರ, ಅದು ತನ್ನ ಮರಿಗೆ ಜನ್ಮ ನೀಡುತ್ತದೆ. ಅದು ಆರಂಭದಲ್ಲಿ ಚೆಂಡಿನಂತೆ ಕಾಣುತ್ತದೆ. ದುಂಡಗಿನ ಪದಾರ್ಥ ರೆಂಬೆಯ ಕೆಳಗಿನ ಎಲೆಯ ಮೇಲೆ ಬೀಳುತ್ತದೆ. ತಕ್ಷಣ ಅದು ಊಸರವಳ್ಳಿಯಾಗಿ ರೂಪಾಂತರಗೊಳ್ಳುತ್ತದೆ. ಒಂದೆರಡು ಸೆಕೆಂಡುಗಳಲ್ಲೇ ಅದು ನೋಡಲು – ತಿರುಗಾಡಲು ಪ್ರಾರಂಭಿಸುತ್ತದೆ. ಅಸಲಿಗೆ ಕೆಲವು ಉಸರವಳ್ಳಿಗಳು ಮೊಟ್ಟೆಯನ್ನಿಟ್ಟರೆ ಇನ್ನೂ ಕೆಲವು ಉಸರವಳ್ಳಿಗಳು ದೇಹದಲ್ಲೇ ಮೊಟ್ಟೆಯನ್ನಿಟ್ಟು ಕೆಲವು ದಿನ ಕಾವು ಕೊಟ್ಟು ಆಮೇಲೆ ಮೊಟ್ಟೆಯೊಡೆದು ನೇರವಾಗಿ ಮರಿಗಳನ್ನು ಹಾಕುತ್ತದೆ.

ಊಸರವಳ್ಳಿ ಊಸರವಳ್ಳಿ ಒಂದು ರೀತಿಯ ಹಲ್ಲಿ. ಊಸರವಳ್ಳಿ ಬಣ್ಣಗಳನ್ನು ಬದಲಿಸುವಲ್ಲಿ ನಿಪುಣ. ಇದು ಪ್ರಪಂಚದಾದ್ಯಂತ ಕಂಡುಬರುವ ಅತ್ಯಂತ ಆಸಕ್ತಿದಾಯಕ ಜೀವಿ. ಊಸರವಳ್ಳಿ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ…

1) ಊಸರವಳ್ಳಿ ಪ್ರಪಂಚದಾದ್ಯಂತ ಕಂಡುಬರುತ್ತದೆ. ಏಷ್ಯಾ, ಆಫ್ರಿಕಾ, ಮಡಗಾಸ್ಕರ್ ನಂತಹ ಪ್ರದೇಶಗಳಲ್ಲಿ ಹಲವು ಬಗೆಯ ಊಸರವಳ್ಳಿಗಳು ಇರುತ್ತವೆ. ಭಾರತದಲ್ಲಿಯೂ ಕಂಡುಬರುತ್ತವೆ. ಅರ್ಧಕ್ಕಿಂತ ಹೆಚ್ಚು ಜಾತಿಗಳು ಮಡಗಾಸ್ಕರ್‌ನಲ್ಲಿ ಮಾತ್ರ ಇರುತ್ತವೆ. ಪ್ರಪಂಚದಾದ್ಯಂತ ಸುಮಾರು 160 ಜಾತಿಯ ಗೋಸುಂಬೆಗಳಿವೆ. ಇವು ಕಾಡುಗಳು ಮತ್ತು ಮರುಭೂಮಿಗಳಲ್ಲಿಯೂ ಕಂಡುಬರುತ್ತವೆ.

Chameleon | crossing the road | ಗೋಸುಂಬೆ|ಊಸರವಳ್ಳಿ| Drive slow save animals life - YouTube

2) ಊಸರವಳ್ಳಿ ಹಲ್ಲಿ ಅಥವಾ ಸರೀಸೃಪಗಳ ಜಾತಿಯಾಗಿದ್ದು ಅದು ಬಣ್ಣವನ್ನು ಬದಲಾಯಿಸುವಲ್ಲಿ ಪರಿಣತಿ ಹೊಂದಿದೆ. ಆದಾಗ್ಯೂ ಊಸರವಳ್ಳಿಯ ಕೆಲವು ಜಾತಿಗಳು ಮಾತ್ರ ಬಣ್ಣವನ್ನು ಬದಲಾಯಿಸುತ್ತವೆ. ಎಲ್ಲ ಊಸರವಳ್ಳಿಗಳೂ ಬಣ್ಣ ಬದಲಾಯಿಸಲಾರವು.
3) ಬೇ’”ಟೆಗಾರ ಜೀವಿಯನ್ನು ಮೋ’”ಸಗೊಳಿಸಲು ಮತ್ತು ಜೀ’”ವವನ್ನು ಉಳಿಸಿಕೊಳ್ಳಲು ಊಸರವಳ್ಳಿ ಬಣ್ಣವನ್ನು ಬದಲಾಯಿಸುತ್ತದೆ. ಬೇಟೆಯಾಡುವಾಗಲೂ ಅವು ಪರಿಸರಕ್ಕೆ ಅನುಗುಣವಾಗಿ ಬಣ್ಣವನ್ನು ಬದಲಾಯಿಸುತ್ತವೆ.

4) ಊಸರವಳ್ಳಿ ಬಣ್ಣವನ್ನು ಹೇಗೆ ಬದಲಾಯಿಸುತ್ತದೆಂದರೆ… ಊಸರವಳ್ಳಿ ತನ್ನ ಸುತ್ತಮುತ್ತಲಿನ ಬಣ್ಣಕ್ಕೆ ತಕ್ಕನಾಗಿ ಬದಲಾಗುತ್ತದೆ. ತಾಪಮಾನ ಮತ್ತು ಅದರ ಸ್ವಭಾವವು ಬಣ್ಣವನ್ನು ಬದಲಾಯಿಸಲು ಕಾರಣವಾಗಿದೆ. ಉದಾಹರಣೆಗೆ ಅದು ಮರದ ಮೇಲೆ ಇದ್ದರೆ, ಅದರ ಬಣ್ಣವು ಮರದಂತೆಯೇ ಆಗುತ್ತದೆ. ಊಸರವಳ್ಳಿ ದೇಹ ಹೇಗೆ ಬಣ್ಣವನ್ನು ಬದಲಾಯಿಸುತ್ತದೆ ಎಂಬುದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಊಸರವಳ್ಳಿಯ ಚರ್ಮದಲ್ಲಿ ಅದರ ಬಣ್ಣ ಬದಲಾವಣೆಯ ರಹಸ್ಯ ಅಡಗಿದೆ.

ಇದರ ಚರ್ಮವು ಕ್ರೋಮಾಟೋಫೋರ್ಸ್ ಎಂದು ಕರೆಯಲ್ಪಡುವ ವಿಶೇಷ ರೀತಿಯ ಕೋಶಗಳನ್ನು ಹೊಂದಿದೆ. ಈ ಕೋಶಗಳು ಹಲವು ಬಣ್ಣಗಳ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಊಸರವಳ್ಳಿ ಅ’”ಪಾ’”ಯವನ್ನು ಗ್ರಹಿಸಿದಾಗ, ಅದರ ದೇಹದ ಉಷ್ಣತೆಯು ಬದಲಾಗುತ್ತದೆ ಮತ್ತು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಕ್ರೊಮಾಟೊಫೋರ್ಸ್ ಕೋಶಗಳು ವಿಸ್ತರಿಸುತ್ತವೆ ಮತ್ತು ಸಂಕುಚಿತಗೊಳ್ಳುತ್ತವೆ, ಇದರಿಂದಾಗಿ ಚರ್ಮದ ಬಣ್ಣವು ಬದಲಾಗುತ್ತದೆ. ಊಸರವಳ್ಳಿ ತನ್ನ ಬಣ್ಣವನ್ನು ಕಪ್ಪು, ಬಿಳಿ, ಹಸಿರು, ಕಂದು ಬಣ್ಣಗಳಲ್ಲಿ ಬದಲಾಯಿಸುತ್ತದೆ. ಇದು ಹೆಣ್ಣು ಊಸರವಳ್ಳಿಯನ್ನು ಓಲೈಸಲು ಕೂಡ ತನ್ನ ಬಣ್ಣವನ್ನು ಬದಲಾಯಿಸುವುದುಂಟು.

5) ಊಸರವಳ್ಳಿಯ ಕಣ್ಣುಗಳು ಸ್ವಲ್ಪ ಚಾಚಿಕೊಂಡಿವೆ. ಇದು ಏಕಕಾಲದಲ್ಲಿ ತನ್ನ ಎರಡೂ ಕಣ್ಣುಗಳಿಂದ ಸುಲಭವಾಗಿ ವಿರುದ್ಧ ದಿಕ್ಕಿನಲ್ಲಿ ನೋಡಬಹುದು. ಇದು ಕಣ್ಣುಗಳನ್ನು 360 ಡಿಗ್ರಿ ತಿರುಗಿಸಬಲ್ಲುದು. ಊಸರವಳ್ಳಿಗಳು ತಮ್ಮ ಕಣ್ಣುಗಳಿಂದ ನೇರಳಾತೀತ ಕಿರಣಗಳನ್ನು ಸಹ ನೋಡಬಹುದು!
6) ಊಸರವಳ್ಳಿಯ ನಾಲಿಗೆ ಉದ್ದವಾಗಿದೆ, ಇದರಿಂದಾಗಿ ಅದು ತನ್ನ ಬೇಟೆಯನ್ನು ಸುಲಭವಾಗಿ ಹಿಡಿಯುತ್ತದೆ. ಅದರ ನಾಲಿಗೆ ಅದರ ದೇಹಕ್ಕಿಂತ ಎರಡು ಪಟ್ಟು ಉದ್ದವಾಗಿದೆ!
7) ಊಸರವಳ್ಳಿಯ ಶ್ರವಣ ಸಾಮರ್ಥ್ಯ ಬಹಳ ಕಡಿಮೆ. ಅವುಗಳಿಗೆ ಕಿವಿಗಳಿವೆ ಆದರೆ ಅವು ಕೇಳುವುದು ಬಹಳ ಕಡಿಮೆ.
8) ಊಸರವಳ್ಳಿ ಊಸರವಳ್ಳಿ ಗಾತ್ರವು 0.5 ಇಂಚಿನಿಂದ 27 ಇಂಚುಗಳಷ್ಟು ಇರುತ್ತದೆ. ಚಿಕ್ಕ ಗೋಸುಂಬೆಗಳು ಮಡಗಾಸ್ಕರ್‌ ನಲ್ಲಿ ಕಂಡುಬರುತ್ತವೆ.

9) ಊಸರವಳ್ಳಿಯ ಪಾದಗಳ ರಚನೆಯು ಅವು ಮರಗಳ ಕೊಂಬೆಗಳನ್ನು ಸುಲಭವಾಗಿ ಹಿಡಿಯಬಲ್ಲವು. ಇದಕ್ಕೆ ಕಾರಣ ಅದರ ಕಾಲ್ಬೆರಳುಗಳು. ಕೆಲವು ಬೆರಳುಗಳು ಮುಂದಕ್ಕೆ ಮತ್ತು ಕೆಲವು ಹಿಂದಕ್ಕೆ ಇರುತ್ತವೆ. ಅದರ ಬೆರಳುಗಳ ಮೇಲೆ ಚೂಪಾದ ಉಗುರುಗಳೂ ಇವೆ.
10) ಊಸರವಳ್ಳಿ ಹಿಂಡಿನಲ್ಲಿ ವಾಸಿಸುವ ಬದಲು ಒಬ್ಬಂಟಿಯಾಗಿರಲು ಆದ್ಯತೆ ನೀಡುತ್ತದೆ. ಊಸರವಳ್ಳಿಯ ಮುಖ್ಯ ಆಹಾರ ಕೀಟಗಳು, ಅವು ಸುಲಭವಾಗಿ ಬೇಟೆಯಾಡುತ್ತವೆ. ದೊಡ್ಡ ಗಾತ್ರದ ಊಸರವಳ್ಳಿಗಳು ಸಣ್ಣ ಪಕ್ಷಿಗಳನ್ನು ಸಹ ತಿನ್ನುತ್ತವೆ.
11) ಹೆಚ್ಚಿನ ಊಸರವಳ್ಳಿ ಜಾತಿಗಳು ಮೊಟ್ಟೆಗಳನ್ನು ಇಡುತ್ತವೆ ಆದರೆ ಜಾಕ್ಸನ್ ಎಂಬ ಊಸರವಳ್ಳಿ ಮರಿಗಳನ್ನು ಹಾಕುತ್ತದೆ. ಸಣ್ಣ ಗಾತ್ರದ ಊಸರವಳ್ಳಿಗಳು ಒಂದು ಸಮಯದಲ್ಲಿ 4 ರಿಂದ 5 ಮೊಟ್ಟೆಗಳನ್ನು ಇಡುತ್ತವೆ ಆದರೆ ದೊಡ್ಡ ಗಾತ್ರದ ಊಸರವಳ್ಳಿಗಳು 100 ಮೊಟ್ಟೆಗಳನ್ನು ಇಡುತ್ತವೆ.
12) ಊಸರವಳ್ಳಿಯ ಜೀವಿತಾವಧಿ 2 ರಿಂದ 4 ವರ್ಷಗಳು.

ಹೀಗೆ ಮೊಟ್ಟೆಯು ದೇಹದಲ್ಲಿಯೇ ಒಡೆದು ಮರಿಗಳಾಗಿ ದೇಹದಿಂದ ಹೊರಬರುವುದನ್ನು ಓವೋವಿವಿಪ್ಯಾರಸ್ (Ovoviviparous) ಎಂದು ಕರೆಯುತ್ತಾರೆ. ಇದು ಸಾಧ್ಯವಿದೆ, ಆಶ್ಚರ್ಯಗೊಳ್ಳುವಂಥದ್ದೇನಿಲ್ಲ.

You might also like

Comments are closed.