ತೊಂದರೆ, ಅ’ ಪಾ’ಯ ಎನ್ನುವುದು ಯಾವಾಗ ಮತ್ತು ಎಲ್ಲಿಂದ ಎದುರಾಗುತ್ತದೆ ಎನ್ನುವುದನ್ನು ಯಾರಿಂದಲೂ ಸಹ ಊಹೆ ಮಾಡುವದು ಅಸಾಧ್ಯವಾದ ಮಾತಾಗಿದೆ. ಮೈ ಎಲ್ಲಾ ಕಣ್ಣಾದರೂ ಸಹ ಅಪಾಯದ ಅರಿವು ಉಂಟಾಗುವುದಿಲ್ಲ ಎನ್ನುವುದನ್ನು ಕೆಲವೊಂದು ಸಂದರ್ಭಗಳಲ್ಲಿ ನಾವು ಒಪ್ಪಲೇಬೇಕಾಗುವುದು. ಇಂತಹ ಅ’ ಪಾ’ಯಗಳು ಎದುರಾಗುವ ಅನೇಕ ಸನ್ನಿವೇಶಗಳು ಅಥವಾ ಘಟನೆಗಳ ವೀಡಿಯೋಗಳನೇಕ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಈಗ ಮತ್ತೊಮ್ಮೆ ಅಂತಹ ಒಂದು ವೀಡಿಯೊ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್ ಆಗುತ್ತಾ ಸಾಗಿದೆ. ಹಾಗಾದರೆ ಅದೇನೆಂದು ತಿಳಿಯೋಣ ಬನ್ನಿ… ಈ ವೈರಲ್ ವೀಡಿಯೋ ನೋಡಿದರೆ ನಾವು ಒಂದು ಮಾತನ್ನು ಮಾತ್ರ ಹೇಳಲು ಸಾಧ್ಯ, ಅದೇನೆಂದರೆ ಆ ದಿನ ಅವರಿಗೆ ಕೆಟ್ಟ ದಿನವಾಗಿತ್ತು ಎಂದು. ವಾಸ್ತವ ವಿಷಯಕ್ಕೆ ಬಂದರೆ ಒಂದಷ್ಟು ಜನ ಹುಡುಗಿಯರ ಗುಂಪು ಫುಟ್ ಬಾಲ್ ಆಡುವುದಕ್ಕಾಗಿ ಒಂದು ತೆರೆದ ಮೈದಾನವನ್ನು ತಲುಪಿತ್ತು.
ಎಲ್ಲವೂ ಚೆನ್ನಾಗೇ ನಡೆಯುತ್ತಿತ್ತು, ಆದರೆ ಅದರ ನಡುವೆಯೇ ಅವರು ಆಡುತ್ತಿದ್ದ ಬಾಲ್ ಅಲ್ಲೇ ಹುಲ್ಲು ಮೇಯುತ್ತಿದ್ದ ಹಸುಗಳ ಹಿಂಡನ ಮಧ್ಯೆ ಹೋಗಿದೆ. ಅನಂತರ ಅಲ್ಲಿ ಏನು ನಡೆಯಿತು ಎನ್ನುವುದು ಮಾತ್ರ ಬಹಳ ತಮಾಷೆಯಾಗಿದೆ. ಈ ತಮಾಷೆಯ ಸನ್ನಿವೇಶದ ವೀಡಿಯೊವನ್ನು ಇದುವರೆಗೆ ಸಾವಿರಾರು ಜನರು ವೀಕ್ಷಣೆ ಮಾಡಿದ್ದಾರೆ. ಅನೇಕರು ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.
ಹುಡುಗಿಯರು ಆಡುತ್ತಿದ್ದ ಫುಟ್ಬಾಲ್ ಹಸುಗಳ ಹಿಂಡಿನ ನಡುವೆ ಹೋಗಿ ಬಿ’ದ್ದ ನಂತರ, ಅದನ್ನು ಅಲ್ಲಿಂದ ಎತ್ತಿಕೊಂಡು ಬರುವ ಸಲುವಾಗಿ ಹುಡುಗಿಯೊಬ್ಬಳು ಅದು ಬಿದ್ದಿರುವ ಜಾಗವನ್ನು ತಲುಪುತ್ತಾಳೆ ಹಾಗೂ ಅಲ್ಲಿದ್ದ ಹಸುಗಳನ್ನು ಅಲ್ಲಿಂದ ಓಡಿಸುವ ಪ್ರಯತ್ನವನ್ನು ಆಕೆ ಮಾಡುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಆದರೆ ಆಕೆಯ ಆ ಪ್ರಯತ್ನ ಸಫಲ ಆಗುವುದಿಲ್ಲ.
ಆಗ ಅಲ್ಲಿಗೆ ಮತ್ತೊಬ್ಬ ಹುಡುಗಿ ಕೈಯಲ್ಲಿ ದೊಣ್ಣೆ ಹಿಡಿದು ಹಸುಗಳನ್ನು ಹೆ’ದರಿಸಲು ಪಣತೊಟ್ಟ ಹಾಗೆ ಬರುತ್ತಾಳೆ. ಆದರೆ ಅವರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ಮಾತ್ರ ನಮ್ಮ ಊಹೆಗೆ ಮೀರಿದ್ದು ಹಾಗೂ ನಮ್ಮ ನಗುವಿಗೆ ಕಾರಣವಾಗುವ ವಿಚಾರವಾಗಿದೆ. ಹೌದು, ಆ ಹುಡುಗಿ ಹಸುಗಳನ್ನು ಹೆದರಿಸಲು ಪ್ರಯತ್ನಿಸಿದ ತಕ್ಷಣ, ಒಂದು ಕಪ್ಪು ಹಸು ಹುಡುಗಿಯ ಮೇಲೆ ಧಾಳಿ ಮಾಡಿದೆ. ಹಸು ಬೆನ್ನಟ್ಟಿರುವುದನ್ನು ನೋಡಿದ ಹುಡುಗಿ ಎದ್ದೆನೋ ಬಿ’ದ್ದೆನೋ ಎನ್ನುವಂತೆ ಎಕ್ಸ್ ಪ್ರೆಸ್ ರೈಲಿನಂತೆ ಅಲ್ಲಿಂದ ಓಡಿ ಹೋಗಿದ್ದಾಳೆ.
ಫುಟ್ಬಾಲ್ ಆಡುತ್ತಿದ್ದ ಪ್ರಾಣಿಗಳನ್ನು ಓಡಿಸಲು ಪ್ರಯತ್ನಿಸಿದ ಹುಡುಗಿಯರು ತಾವೇ ಓಡಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದ್ದು, ನೋಡಲು ಬಲು ತಮಾಷೆಯಾಗಿದೆ. ಈ ಹಾಸ್ಯದ ದೃಶ್ಯದ ವೀಡಿಯೊವನ್ನು 18plusguyy ಹೆಸರಿನ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಬಹಳಷ್ಟು ಸಂಖ್ಯೆಯಲ್ಲಿ ವೀಡಿಯೋಗೆ ತಮ್ಮ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
View this post on Instagram