ನದಿಯಲ್ಲಿ ಈಜುವ ಮೀನುಗಳನ್ನು ಬೇ’ ಟೆಯಾಡುವುದನ್ನು ಮನುಷ್ಯ ಮತ್ತು ಪ್ರಾಣಿ, ಪಕ್ಷಿಗಳು ಸಹಾ ಮಾಡುತ್ತವೆ. ಹದ್ದು ಆಕಾಶದಿಂದ ಹಾರಿ ಬಂದು ನೀರಿನಲ್ಲಿನ ಮೀನುಗಳನ್ನು ಬೇ’ ಟೆಯಾಡುತ್ತದೆ, ಅದೇ ವೇಳೆ ಕೊಕ್ಕರೆಗಳು ಬಹಳ ಏಕಾಗ್ರತೆಯಿಂದ ಮೀನಿಗಾಗಿ ಕಾಯುತ್ತವೆ ಮತ್ತು ಸರಿಯಾದ ಸಮಯ ನೋಡಿ ಕೊಕ್ಕನ್ನು ನದಿಯಲ್ಲಿ ಇಟ್ಟು, ಮೀನುಗಳನ್ನು ತನ್ನ ಬೇ’ ಟೆಯನ್ನಾಗಿ ಮಾಡಿಕೊಳ್ಳುತ್ತವೆ. ಈ ಎರಡೂ ಪಕ್ಷಿಗಳಿಗೂ ಕೂಡಾ ಮೀನನ್ನು ಬೇ’ ಟೆಯಾಡಲು ತೀಕ್ಷ್ಣವಾದ ಕಣ್ಣಿನ ದೃಷ್ಟಿ ಬೇಕಾಗುತ್ತವೆ ಮತ್ತು ಈ ಗುಣವು ಬೇರೆಯವರಲ್ಲಿ ಕಂಡು ಬಂದರೆ, ಅವರು ಕೂಡಾ ಸುಲಭವಾಗಿ ಮೀನುಗಳನ್ನು ತಮ್ಮ ಬೇ’ ಟೆಯಾಗಿಸಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ, ಅಂತಹ ಒಂದು ಬೆಕ್ಕಿನ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ಬಂದಿದೆ, ಇದರಲ್ಲಿ ಬೆಕ್ಕು ಹಕ್ಕಿಗಳ ಗುಣವನ್ನು ಪ್ರದರ್ಶಿಸಿದೆ. ಬೇ’ ಟೆ ಹಿಡಿಯುವ ವಿಚಾರದಲ್ಲಿ ಬೆಕ್ಕುಗಳು ಅದ್ಭುತ ಕೌಶಲ್ಯವನ್ನು ಪಡೆದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಈಗಾಗಲೇ ವೇಗವಾಗಿ ಓಡುವ ಇಲಿಯನ್ನು ಬೆಕ್ಕು ಹೇಗೆ ಹಿಡಿಯುತ್ತದೆ, ಗುಬ್ಬಿಗಳನ್ನು, ಕೋಳಿ ಮರಿಗಳನ್ನು ಹೇಗೆ ಬೇ’ ಟೆಯಾಡುತ್ತವೆ ಎನ್ನುವುದನ್ನು ನೋಡಿರುತ್ತೇವೆ.
ಹೆಚ್ಚು ಸಮಯ ತೆಗೆದುಕೊಳ್ಳುದೇ ಸಿಕ್ಕಾಪಟ್ಟೆ ವೇಗವಾಗಿ ಇಲಿಯನ್ನು ಹಿಡಿಯುತ್ತವೆ ಬೆಕ್ಕುಗಳು. ಕಥೆಗಳಲ್ಲಿ ಬೆಕ್ಕುಗಳು ಸಿಂಹಗಳಿಗೆ ಬೇ’ ಟೆಯಾಡಲು ಕಲಿಸಿದವು ಎಂದು ಹೇಳಲಾಗುತ್ತದೆ. ಅದೇನೇ ಇದ್ದರೂ ಹರಿಯುವ ನೀರಿನಲ್ಲಿ ಬೆಕ್ಕು ಮೀನುಗಳನ್ನು ಬೇ’ ಟೆಯಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?? ನೋಡಿಲ್ಲವೆಂದಾದರೆ ಇಲ್ಲಿ ಕೊನೆಗಿರುವ ವಿಡಿಯೊವನ್ನು ನೀವು ನೋಡಲೇಬೇಕು.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಬೆಕ್ಕೊಂದು ಹರಿಯುವ ನೀರಿನಿಂದ ಮೀನುಗಳನ್ನು ಬೇ’ ಟೆ ಆಡುತ್ತಿರುವುದನ್ನು ನಾವು ನೋಡಬಹುದು. ಈ ವೀಡಿಯೋ ನೋಡಿದರೆ ನಿಮ್ಮ ಕಣ್ಣುಗಳೂ ಅಚ್ಚರಿಯಿಂದ ಅರಳುತ್ತವೆ. ಇನ್ನು ಈ ವೀಡಿಯೋದಲ್ಲಿ ನದಿಯ ದಡದಲ್ಲಿ ಒಂದು ಬೆಕ್ಕು ನಿಂತಿರುವುದನ್ನು ನೀವು ನೋಡುವಿರಿ. ಅಲ್ಲಿಂದಲೇ ವಿಡಿಯೊ ಸುರುವಾಗುತ್ತದೆ.
ಅದು ನೀರಿನಲ್ಲಿ ಈಜುತ್ತಿರುವ ಮೀನನ್ನು ಬಹಳ ಹೊತ್ತು ನೋಡುತ್ತಾ, ಸರಿಯಾದ ಸಮಯಕ್ಕಾಗಿ ಕಾದು, ನಂತರ ತನ್ನ ಕಾಲಿನಿಂದ ನೀರಿನೊಳಗಿದ್ದ ಮೀನನ್ನು ಎಗರಿಸಿ ತಟ್ಟನೆ ಹಿಡಿಯುತ್ತದೆ. ಬಹುಶಃ ಆ ಮೀನು ಕೂಡಾ ಒಂದು ಬೇ’ ಟೆಯನ್ನು ಊಹೆ ಮಾಡಿರುವುದಿಲ್ಲ. ಈ ವೀಡಿಯೊವನ್ನು ಇನ್ಸ್ಟಾಗ್ರಾಂ ನಲ್ಲಿ beautifullnatureworld ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದ್ದು ಕ್ರಮೇಣ ಎಲ್ಲ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಶೇಷವಾಗಿ ಕ್ಯಾಟ್ ಲವರ್ಸ್ ಈ ಕ್ಲಿಪ್ ಅನ್ನು ಬಹಳಷ್ಟು ಇಷ್ಟಪಡುತ್ತಿದ್ದಾರೆ. ಈ ವಿಡಿಯೋವನ್ನು ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದರೊಂದಿಗೆ ವೀಡಿಯೊವನ್ನು ವೀಕ್ಷಿಸಿದ ನಂತರ ಜನರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೇ ಬೆಕ್ಕಿನ ಚಾಣಾಕ್ಷತನವನ್ನು ಶ್ಲಾಘಿಸಿದ್ದಾರೆ. ತುಂಬಾ ಜನರ ಪ್ರಕಾರ ಮಾಡುವ ಕೆಲಸದಲ್ಲಿ ಏಕಾಗ್ರತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದಾಗಿದೆ.
ಆ ವಿಡಿಯೊ ಕೆಳಗಿದೆ ನೋಡಿ…
Cat fishing! pic.twitter.com/LRRy88YBAH
— Crazy Creator (@CrazyCreator14) June 12, 2022