ಯುವಕರೇ ಎಚ್ಚರ, ಫೆಸ್ ಬುಕ್ ನಲ್ಲಿ ಫೆಕ್ ಫೋಟೋ ಹಾಕಿ ಈ ಐನಾತಿ ಆಂಟಿ ಯುವಕನಿಗೆ ಅದೆಷ್ಟು ಹಣ ಉಂಡೆನಾಮ ಇಟ್ಟಿದ್ದಾಳೆ ಗೊತ್ತಾ? ಗಂಡನೇ ಇವಳಿಗೆ ಸಾಥ್ ನೀಡಿದ್ದಾನೆ ನೋಡಿ!!

Today News / ಕನ್ನಡ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಹುಷಾರಾಗಿ ಇದ್ದರೂ ಸಾಲದು, ಆದರೂ ಮೋಸ ಹೋಗುತ್ತೇವೆ. ಈ ಬಗ್ಗೆ ಎಷ್ಟೋ ಜನರಿಗೆ ಗೊತ್ತು ಆದರೂ ಮೋಸ ಹೋಗುವುದು ತಪ್ಪಿಲ್ಲ. ಸಾಮಾಜಿಕ ಜಾಲತಾಣವನ್ನ, ಒಳ್ಳೆಯದಕ್ಕೆ ಬಳಸಿಕೊಳ್ಳುವವರಿದ್ದರೆ ಇನ್ನೊಂದಿಷ್ಟು ಜನ ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕಾಗಿಯೇ ಬಳಸುತ್ತಾರೆ. ಇಲ್ಲೊಬ್ಬ ಹುಡುಗಿ ಫೇಸ್ ಬುಕ್ ನಲ್ಲಿ ಎಷ್ಟು ಬುದ್ದಿವಂತಿಕೆಯಿಂದ ಜನರನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು ಗೊತ್ತಾ?! ಗೊತ್ತಾದರೆ ನೀವು ನಿಜಕ್ಕೂ ಆಶ್ಚರ್ಯ ಪಡ್ತಿರಿ.

ಇದು ವಿಜಯಪುರದಲ್ಲಿ ನಡೆದ ಘಟನೆ. ಮಹಿಳೆಯೊಬ್ಬಳು ಅತ್ಯಂತ ಮಾ_ದ_ಕ ಲುಕ್ ಇರುವ ಫೋಟೋವನ್ನು ತನ್ನ ಫೇಸ್ ಬುಕ್ ಡಿಪಿ ಗೆ ಹಾಕಿ ಎಲ್ಲರನ್ನೂ ಎಮಾರಿಸಿದ್ದಾಳೆ. ಆಕೆಯ ಫೋಟೋ ನೋಡಿದ್ರೆ ಯಾರಿಗಾದ್ರೂ ಒಮ್ಮೆ ಎದೆ ಝಲ್ ಎನ್ನುತ್ತೆ. ಅಷ್ಟು ಸೂಪರ್ ಆಗಿರುವ ಫೋಟೋ ಅದು. ಆ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದ್ರೆ ಯಾರೂ ಎಕ್ಸೆಪ್ಟ್ ಮಾಡದೆ ಇರಲು ಸಾಧ್ಯವೇ ಇಲ್ಲ.

ಹೀಗೆ ಸುಂದರವಾದ ಹುಡುಗಿಯ ಫೋಟೋ ಹಾಕಿದ ಆ ಮಹಿಳೆ ಜನರಿಂದ ಸಾಕಷ್ಟು ಹಣ ಎಗರಿಸಿದ್ದಾಳೆ. ಅದೇ ರೀತಿ ಒಬ್ಬ ವ್ಯಕ್ತಿ ಆ ಕಿಲಾಡಿ ಹುಡುಗಿಯ ಬಲೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ಹೌದು ಆಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದ ಕೂಡಲೇ ಅದನ್ನ ಒಪ್ಪಿಕೊಂಡು ಆಕೆಯ ಬಳಿ ಚಾಟಿಂಗ್ ಶುರು ಮಾಡಿದ್ದಾನೆ. ಇಬ್ಬರ ನಡುವೆ ನಿರಂತರ ಸಂದೇಶ ರವಾನೆ ಆಗುತ್ತಲೇ ಇತ್ತು.

ಇನ್ನು ಯುವಕನ ಬಳಿ ಮಾತನಾಡುತ್ತಾ, ತಾನು ಯುಪಿಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಡಿಸಿ ಆಗುತ್ತೇನೆ. ಅದಕ್ಕೆ 40 ಲಕ್ಷ ಹಣ ಬೇಕು ಎಂದಿದ್ದಾಳೆ. ಆತನೂ ಹೇಗೋ ಹಣ ಹೊಂದಿಸಿ ಕೊಟ್ಟಿದ್ದಾನೆ. ಮಹಿಳೆಯ ಹ-ನಿ-ಟ್ರ್ಯಾ-ಪ್ ಗೆ ಪಾಪದ ಯುವಕ ಬಲಿ ಆಗಿದ್ದಾನೆ. ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಪರಶುರಾಮ ಹಾಗೂ ಫೇಸ್ ಬುಕ್ ಚೆಲುವೆ ಹಾಸನದ ಹುಡುಗಿ ನಡೆವೆ ಸಲುಗೆ ಬೆಳೆದಿತ್ತು.

ಇದನ್ನೇ ಪ್ರೀತಿ ಎಂದು ಭಾವಿಸಿ ಆಕೆಯನ್ನು ಅತಿಯಾಗಿ ಪ್ರೀತಿಸಲು ಶುರು ಮಾಡಿದ್ದ ಪರಶುರಾಮ. ಆಕೆಯ ಫೇಸ್‌ಬುಕ್‌ ಡಿಪಿ ನೋಡಿ ಮಾರುಹೋಗಿದ್ದ ಆತ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣ, ಒಂದು ಪ್ಲಾಟ್ ಎಲ್ಲವನ್ನು ಮಾರಿ ಸುಮಾರು 40 ಲಕ್ಷ ರೂ. ಹಣ ಹೊಂದಿಸಿ ಕೊಟ್ಟಿದ್ದ. ಇಷ್ಟಾದರೂ ಆಕೆ ಅವನನ್ನ ಭೇಟಿ ಮಾಡಲಿಲ್ಲ. ಅಲ್ಲದೆ ಬೆ-ತ್ತ-ಲೆಯಾಗಿ ವಿಡಿಯೋ ಕಲ್ ಮಾಡಿ ಬ್ಲ್ಯಾ-ಕ್ ಮೇ-ಲ್ ಮಾಡಿ ಹಣ ಕೇಳುವುದಕ್ಕೆ ಆರಂಭಿಸಿದಳು.

ಇನ್ನಷ್ಟು ಹಣಕ್ಕಾಗಿ ಪೀಡಿಸಿದಾಗ ಯುವಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಇದೀಗ ಮೋಸ ಮಾಡಿದ್ದ ಯುವತಿ ಪೊಲೀಸರ ಅತಿಥಿಯಾಗಿದ್ದಾಳೆ. ಫೇಸ್ ಬುಕ್ ನಲ್ಲಿ ಬೇರೆ ಫೋಟೋ ಹಾಕಿ ಮೋಸ ಮಾಡುತ್ತಿದ್ದ ಮಹಿಳೆಯ ಹೆಸರು ಮಂಜುಳಾ. ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆಕೆಯ ಫೇಸ್ ಬುಕ್ ಫೋಟೋಗು ನಿಜವಾಗಿ ಇರುವುದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ.

ಇನ್ನು ಜನರನ್ನು ಹೀಗೆ ಮೋಸ ಮಾಡುವುದಕ್ಕೆ ಆಕೆಯ ಗಂಡನದ್ದೇ ಸಪೋರ್ಟ್. ಸದ್ಯ ಆತ ಎಸ್ಕೇಪ್ ಆಗಿದ್ದಾನೆ. ಮೋಸ ಮಾಡಿ ಪಡೆದ ಹಣದಿಂದ ಕಾರು, ಬೈಕ್, ಚಿನ್ನ ಖರೀದಿಸುವ ಮಂಜುಳಾ ಊರಿನಲ್ಲಿ ಮನೆ ಕಟ್ಟುವುದಕ್ಕೆ ಶುರು ಮಾಡಿದ್ದಾಳೆ. ಅದಕ್ಕಾಗಿ ಇನ್ನಷ್ಟು ಹಣ ಪಡೆಯುವುದು ಆಕೆಯ ಉದ್ದೇಶವಾಗಿತ್ತು. 30ಸಾವಿರ ಸಂಬಳ ಪಡೆಯುತ್ತಿದ್ದ ಪರಶುರಾಮ, ಮಂಜುಳಾ ಮೋಡಿ ಮಾತಿಗೆ ಮರುಳಾಗಿ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ. ಈ ಸುದ್ದಿ ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.