bsy-bjp

ಇದೇ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಲಿರುವ ರಾಜಾಹುಲಿ ಯಡಿಯೂರಪ್ಪ! ಯಾವ ಸಿನೆಮಾ ಗೊತ್ತಾದ್ರೆ ಒಂದು ಕ್ಷಣ ಶಾಕ್ ಆಗೋದು ಪಕ್ಕಾ!!

Today News / ಕನ್ನಡ ಸುದ್ದಿಗಳು

ಎಲ್ಲರಿಗೂ ಗೊತ್ತಿರುವ ಹಾಗೆ ಸಿನಿಮಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿದ ಅನೇಕರು ನಂತರ ಕಾಣಿಸಿಕೊಳ್ಳುವುದು ರಾಜಕೀಯ ಕ್ಷೇತ್ರದಲ್ಲಿ. ಕೆಲವರು ಸಿನಿಮಾ ರಾಜಕೀಯ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಸಿನಿಮಾ ಬಿಟ್ಟು ರಾಜಕೀಯದಲ್ಲಿ ಭವಿಷ್ಯ ಕಂಡು ಕೊಳ್ಳುತ್ತಾರೆ. ಅದೇ ರೀತಿ ಮೊದಲು ರಾಜಕೀಯದ ವ್ಯಕ್ತಿಗಳು ಕೂಡ ಸಿನಿಮಾದಲ್ಲಿ ನಟಿಸಿದ್ದೂ ಇದೆ. ಇದೀಗ ನಮ್ಮ‌ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೂಡ ಸಿಬಿಮಾದಲ್ಲಿ ನಟಿಸುತ್ತಿದ್ದಾರೆ.

ಹೌದು, ಅವರು ನಟಿಸುತ್ತಿರುವುದು ನೈಜ‌ ಘಟನೆ ಆಧಾರಿತ ಸಿನಿಮಾದಲ್ಲಿ. 2020 ರಲ್ಲಿ ಕರೋನಾ ಅಬ್ಬರ ಜೋರಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ತನುಜಾ ಅನ್ನುವ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲಾಗದೆ ಸಂಕಷ್ಟ ಎದುರಿಸಿದ್ದಳು. ಈ ಬಗ್ಗೆ ತಿಳಿದ ಹಿರಿಯ ಪತ್ರಕರ್ತ ವಿಶ್ವೇಶರ್ ಭಟ್ ಸುದ್ದಿ ಮಾಡಿದಾಗ ಇದಕ್ಕೆ ಆಗ ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಅವರೇ ಸಹಾಯ ಮಾಡಿದ್ದರು. ಆಕೆಗೆ ಬೇಕಾದ ವ್ಯವಸ್ಥೆ ಕಲ್ಪಿಸಿ ಬೆಂಗಳೂರಿನ ಬಸವನಗುಡಿಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದ್ದರು. ಪರೀಕ್ಷೆ ಬರೆದ ತನುಜಾ 720 ಅಂಕಗಳಿಗೆ 586 ಅಂಕ ಪಡೆದು ಸಾಧನೆ ಮಾಡಿದ್ದಳು.

images 1579

ಇದೀಗ ಇದೇ‌ ಕಥೆಯನ್ನು ಆಧಾರಿಸಿ ನಿರ್ದೇಶಕ ಹರೀಶ್ ಎಂ ಡಿ ಹಳ್ಳಿಯವರು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ರಿಯಲ್ ಆಗಿ ಯಡಿಯೂರಪ್ಪ ಅವರು ನಿರ್ವಹಿಸಿದ ಪಾತ್ರವು ಸಿನಿಮಾದಲ್ಲಿಯೂ ಮೂಡಿಬರಲಿದ್ದು, ಇದಕ್ಕೆ ಬಿ ಎಸ್ ವೈ ಬಣ್ಣ ಹಚ್ಚಿದ್ದಾರೆ. ಅದೇ ರೀತಿ ಈ ಸಿನಿಮಾದಲ್ಲಿ ವಿಶ್ವೇಶ್ವರ್ ಭಟ್, ಕೆ ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ತನುಜಾ ಪಾತ್ರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ನಟಿಸಿದ್ದ ಸಪ್ರಾ ಪಾವೂರು‌ ನಿರ್ವಹಿಸಲಿದ್ದಾರೆ. ಫೆಬ್ರವರಿ 19 ರಿಂದ ಶೂಟಿಂಗ್ ಆರಂಭವಾಗಿದ್ದು, ಈ ಸಮಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಭಾಗಿಯಾಗಿರುವ ಫೋಟೋಗಳು.

images 1576

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಾಗಿ ಕೇವಲ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇದೀಗ ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಆದ ಝಲಕ್ ಮೂಡಿಸಿದ್ದ ಬಿ ಎಸ್ ವೈ ಇನ್ನು ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ನ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.