Bride-groom-video

ಮೊಮ್ಮಗಳ ವಯಸ್ಸಿನ ವಧುವನ್ನು ವಿವಾಹವಾದ ಖುಷಿಗೆ ನಕ್ಕು ಖುಷಿ ಪಟ್ಟ ಮುದುಕ ವರ : ವಿಡಿಯೋ ವೈರಲ್

Entertainment/ಮನರಂಜನೆ

ಸೋಶಿಯಲ್ ಮೀಡಿಯಾಗಳಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವು ವಧು-ವರರ ಮನೆಯ ಸದಸ್ಯರ ನಡುವಿನ ಜಗಳ, ಪ್ರೀತಿ ಹಾಗೂ ಮೋಜು ಮಸ್ತಿಯ ವಿಡಿಯೋಗಳಾಗಿದ್ದರೆ ಮತ್ತಷ್ಟು ವಿಡಿಯೋಗಳು ವಧು ವರರ ನಡುವಿನ ತುಂಟಾಟ, ಕಿತ್ತಾಟ ಕೆಲವೊಮ್ಮೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಆ ರೀತಿ ವೈರಲ್ ಆಗುವ ವಿಡಿಯೋಗಳು ಸಾಕಷ್ಟು ಹಾಸ್ಯಮಯದಿಂದ ಕೂಡಿರುವ ಕಾರಣ ನೆಟ್ಟಿಗರ ಮನಸ್ಸು ಕದಿಯುವಲ್ಲಿ ಹಿಂದೆ ಬೀಳುವುದಿಲ್ಲ.

ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ಮದುವೆಗೆ ಸಂಬಂಧಿಸಿದ ಒಂದು ಅಚ್ಚರಿಯ ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಓರ್ವ 80 ರಿಂದ 90 ವರ್ಷ ವಯಸ್ಸಿನ ಮುದುಕ ವರಮಾಲೆ ಹಾಕಿಕೊಂಡು ವರನಾಗಿ ಓರ್ವ 20 ರ ಆಸುಪಾಸಿನ ಯುವತಿಯೊಂದಿಗೆ ವಿವಾಹವಾಗಿದ್ದು ಅಷ್ಟು ಚಿಕ್ಕ ಹುಡುಗಿಯನ್ನು ವಿವಾಹವಾಗಿದ್ದೇನೆ ಎಂಬ ಖುಷಿಗೋ ಏನೋ ಗೊತ್ತಿಲ್ಲ ಕ್ಯಾಮೆರಾ ಮುಂದೆ ತನ್ನ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾನೆ, ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಯ ಜೊತೆಗೆ ಆ ಮುದುಕ ವರನ ಕಾಲೆಳೆಯುತ್ತಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದಾಗಿದ್ದು ಕೆಂಪು ಬಣ್ಣದ ಲೆಹಂಗಾ ಧರಿಸಿ ಸುಂದರ ಮೇಕಪ್ ಮಾಡಿಸಿಕೊಂಡು ಮಿಂಚುತ್ತಿರುವ ಹರೆಯದ ವಧು ನಾಚಿಕೆಯಿಂದ ತಲೆ ತಗ್ಗಿಸಿ ಕುಳಿತಿದ್ದರೆ, ಇತ್ತ 80 ರಿಂದ 90 ವರ್ಷ ವಯೋಮಿತಿಯ ನಡುವೆ ಇರುವ ವರ ಬಿಳಿ ವಸ್ತ್ರದಲ್ಲಿ ವರಮಾಲೆ ಹಾಕಿಕೊಂಡು ಕುಳಿತಿದ್ದು ಕ್ಯಾಮೆರಾದತ್ತ ಅತ್ಯಂತ ಖುಷಿಯ ನಗೆ ಬೀರುತ್ತಾ ಇಳಿವಯಸ್ಸನಲ್ಲಿಯೂ ತನ್ನ ಸಂತಸವನ್ನು ಹಂಚಿಕೊಳ್ಳುತ್ತಿದ್ದಾನೆ.

ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಆ ಇಳಿ ವಯಸ್ಸಿನಲ್ಲಿ ವಿವಾಹವಾಗುತ್ತಿರುವ ವರನ ಕಾಲೆಳೆಯುತ್ತಿದ್ದಾರೆ, ಇನ್ನಷ್ಟು ಜನರು ಮದುವೆಯಾಗಲು ಹುಡುಗಿ ಸಿಗದೇ ನಾವಿನ್ನು ಸಿಂಗಲ್ಸ್ ಎನ್ನತ್ತಿರುವ ಹುಡುಗರನ್ನು ಈ ವಿಡಿಯೋಗೆ ಟ್ಯಾಗ್ ಮಾಡಿ ಮಾಡಿ ಛೇಡಿಸುತ್ತಿದ್ದಾರೆ.

ಅಂದಹಾಗೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಫೇಮಸ್ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ನಲ್ಲಿ psycho_biihari ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಇದುವರೆಗೂ ಈ ವಿಡಿಯೋವನ್ನು ಒಂದು ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಿಸಿದ್ದು 15 ಸಾವಿರದಷ್ಟು ಜನರು ಲೈಕ್ ಮಾಡಿದ್ದಾರೆ, ಅಲ್ಲದೇ ಈ ವಿಡಿಯೋ ಮೇಲೆ ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ, ಆ ವಿಡಿಯೋ ಇಲ್ಲಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.