
ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಮತ್ತು ಈ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ (Annabhagya and Gruhalakshmi) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ (rationcard based Schemes) ಎಂದು ಹೇಳಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಯಾವೆಲ್ಲ ದಾಖಲೆಗಳು ಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಯಾವ ತಿದ್ದುಪಡಿಗಳಿಗೆ ಅವಕಾಶವಿದೆ ಎನ್ನುವುದರ ಮಾಹಿತಿಯನ್ನು ಕೂಡ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ಬಹುತೇಕರು ಕಾಯುತ್ತಿರುವ ವಿಷಯ ಇದಾಗಿದ್ದು ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ತಿದ್ದುಪಡಿಗೆ ಅವಕಾಶ:-
* ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು
* ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಿಸಲು
* ರೇಷನ್ ಕಾರ್ಡಿಗೆ ಮಕ್ಕಳ ಹೆಸರನ್ನು ಸೇರಿಸಲು
* ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸಲು
* e-KYC ಅಪ್ಡೇಟ್ ಮಾಡಿಸಲು.
ಬೇಕಾಗುವ ದಾಖಲೆಗಳು:-
1. ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ
* ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆರು ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣ ಪತ್ರ
* ಬಯೋಮೆಟ್ರಿಕ್ ಡೀಟೇಲ್ಸ್
2. ತಿದ್ದುಪಡಿ ಮಾಡಿಸುವವರಿಗೆ
* ಹಳೆಯ ರೇಷನ್ ಕಾರ್ಡ್
* ಆಧಾರ್ ಕಾರ್ಡ್ ಮತ್ತು ಸೇರ್ಪಡೆ ಆಗುವ ಸದಸ್ಯನ ಬಯೋಮೆಟ್ರಿಕ್ ಡೀಟೇಲ್ಸ್
* ರೇಷನ್ ಕಾರ್ಡ್ ಒಬ್ಬ ಸದಸ್ಯರ ಬಯೋಮೆಟ್ರಿಕ್ ಡೀಟೇಲ್ಸ್
ಎಲ್ಲಿ ಅರ್ಜಿ ಸಲ್ಲಿಸಬಹುದು:-
* ಈ ಹಿಂದೆ ಎಲ್ಲ ಸಾರ್ವಜನಿಕ ಕೇಂದ್ರಗಳಲ್ಲೂ ಕೂಡ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು, ಆದರೆ ಎಲ್ಲಾ ಕಡೆಯೂ ಜನಜಂಗುಳಿ ಸೃಷ್ಟಿಯಾಗಿ ಸರ್ವರ್ ಮೇಲೆ ಕೂಡ ಹೊಡೆತ ಬಿದ್ದಿತ್ತು. ಈ ಅವ್ಯವಸ್ಥೆಯನ್ನು ತಪ್ಪಿಸಿ ಸುಗಮವಾಗಿ ತಿದ್ದುಪಡಿ ಕಾರ್ಯ ನಡೆಯಲಿ ಎನ್ನುವ ಕಾರಣಕ್ಕಾಗಿ ಆಯಾ ಗ್ರಾಮ ಒನ್ ಕೇಂದ್ರಗಳು ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ (Grama one and Karnataka one) ಮಾತ್ರ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
* ದಿನಾಂಕ 20.11.2023 ರಿಂದಲೇ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಮಧ್ಯಾಹ್ನ 2:30 ರಿಂದ ಸಂಜೆ 5:00ಒಳಗೆ ತಿದ್ದುಪಡಿ ಮಾಡಿಸಿಕೊಳ್ಳಬಹುದು.
Comments are closed.