ಮೈಸೂರಿನಲ್ಲಿ ಬಿಪಿ‌ ಮಾತ್ರೆ ಬದಲು ಬೇರೆ ಮಾತ್ರೆ ಸೇವಿಸಿ ಜೀವ ಕಳೆದುಕೊಂಡ ಹೆಂಡತಿ..ಕೆಲವೇ ದಿ‌ನದಲ್ಲಿ ಗಂಡ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಕುಟುಂಬ..

Girls Matter/ಹೆಣ್ಣಿನ ವಿಷಯ

ಗಂಡ ಹೆಂಡತಿಯ ಸಂಬಂಧ ಅನ್ನೋದು ಏಳೇಳು ಜನ್ಮದ ಅನುಬಂಧ ಅನ್ನೋ ಮಾತಿದೆ.. ಆದರೆ ಈಗಿನ ಕಾಲದಲ್ಲಿ ಬಹುತೇಕರ ಬಾಳಲ್ಲಿ ಇಬ್ಬರ ನಡುವಿನ ಪ್ರೀತಿ ಗೌರವ ವಿಶ್ವಾಸ ನಂಬಿಕೆ ಎಲ್ಲವೂ ಸಹ ಒಂದೊಂದಾಗಿಯೇ ನಶಿಸಿ ಹೋಗುತ್ತಿದ್ದು ಸಂಬಂಧದ ನಿಜವಾದ ಅರ್ಥವೇ ತಿಳಿಯದಂತಾಗಿದೆ.. ಆದರೆ ಅಂತಹ ಸುಳ್ಳಿನ ಗೋಪುರಗಳ ಸಾಕಷ್ಟು ಕಸ ಕಡ್ಡಿಯಂತಹ ಸಂಬಂಧಗಳ ನಡುವೆಯೂ ಸಮುದ್ರದಲ್ಲಿನ ಮುತ್ತಂತೆ ಇನ್ನೂ ಸಹ ಕೆಲ ಗಂಡ ಹೆಂಡತಿಯರು ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದಿರುವುದ ಕಂಡರೆ ಮನಸ್ಸಿಗೆ ಏನೋ ಆನಂದ.. ಆದರೆ ಅಂತವರ ಬಾಳಲ್ಲಿ ಅದ್ಯಾಕೋ ವಿಧಿ ಕೆಟ್ಟವನಾಗಿಬಿಡುವನು ಎನಿಸುತ್ತದೆ..

ಹೌದು ಗಂಡ ಪ್ರೀತಿಸಿದರೆ ಹೆಂಡತಿ ಪ್ರೀತಿಸೋದಿಲ್ಲ.. ಹೆಂಡತಿ ಪ್ರೀತಿಸಿದರೆ ಗಂಡ ಪ್ರೀತಿಸೋದಿಲ್ಲ.. ಗಂಡ ಹೆಂಡತಿ ಪ್ರೀತಿಸಿದರೆ ಒಟ್ಟಾಗಿ ಇರೋಕೆ ವಿಧಿ ಬಿಡೋದಿಲ್ಲ ಎನ್ನೋ ಮಾತು ಆಗಾಗ ಸಾಭೀತಾಗುತ್ತಲೇ ಇರುವಂತೆ ಕಾಣುತ್ತಿದೆ.. ಹೌದು ಕಳೆದ ಎರಡು ತಿಂಗಳ ಹಿಂದಷ್ಟೇ ಮೈಸೂರಿನಲ್ಲಿ ಮಹಿಳೆಯೊಬ್ಬರು ಬಿಪಿ ಮಾತ್ರೆ ಬದಲಾಗಿ ಬೇರೆ ಮಾತ್ರೆ ಸೇವಿಸಿ ಜೀವ ಕಳೆದುಕೊಂಡಿದ್ದರು. ಹೆಂಡತಿ ಅಗಲಿದ ನೋವಿನಲ್ಲಿ ಇದೀಗ ಆಕೆಯ ಗಂಡ ಮಾಡಿರುವ ಕೆಲಸ ನೋಡಿ ಆ ಕುಟುಂಬ ಬೆಚ್ಚಿಬಿದ್ದಿದೆ..

ಹೌದು ಈ ಹೆಣ್ಣು ಮಗಳ ಹೆಸರು ಗಾಯತ್ರಿ.. ಮೈಸೂರು ತಾಲೂಕಿನ ಹಂಚ್ಯ ಗ್ರಾಮದ ನಿವಾಸಿ.. ಈಕೆಯ ಗಂಡನ ಹೆಸರು ಮಹೇಶ್.. ವಯಸ್ಸು ನಲವತ್ತೈದು.. ಇವರದ್ದು ಸುಂದರ ಸಂಸಾರ.. ಈ ಜೋಡಿಗೆ ಎರಡು ಪುಟ್ಟ ಮಕ್ಕಳು.. ಇದ್ದಿದ್ದರಲ್ಲಿ ನೆಮ್ಮದಿಯಾಗಿ ಜೀವನ‌ ಮಾಡುತ್ತಿದ್ದ ಜೋಡಿ ಪರಸ್ಪರ ಅತಿಯಾಗಿ ಪ್ರೀತಿ ಮಾಡುತ್ತಿದ್ದರು.. ಎಂದೂ ಸಹ ಬಿಟ್ಟಿರುವ ಆಲೋಚನೆಯನ್ನೂ ಸಹ ಮಾಡಿರಲಿಲ್ಲ.. ಆದರೆ ವಿಧಿ ಇವರ ಬಾಳಿನಲ್ಲಿ ಬೇರೆಯಾಟವೇ ಆಡಿಬಿಟ್ಟಿತು..

ಹೌದು ಗಾಯತ್ರಿ ಅವರಿಗೆ ಬಿಪಿ ಸಂಬಂಧಪಟ್ಟ ಕಾಯಿಲೆಯಿದ್ದು ಬಿಪಿ ಮಾತ್ರೆಯನ್ನು ಸೇವಿಸುತ್ತಿದ್ದರು.. ಆದರೆ ಕಳೆದ ಎರಡು ತಿಂಗಳ ಹಿಂದೆ ಬಿಪಿ‌ ಮಾತ್ರೆ ಬದಲಾಗಿ ತಪ್ಪಿ ಬೇರೆ ಮಾತ್ರೆಯನ್ನು ಸೇವಿಸಿಬಿಟ್ಟರು.. ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದ ಗಾಯತ್ರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದುಬಿಟ್ಟರು.. ಇದರಿಂದ ಸಂಪೂರ್ಣ ಕುಟುಂಬದಲ್ಲು ನೋವು ತುಂಬಿತು.. ಇತ್ತ ಎರಡು ಪುಟ್ಟ ಮಕ್ಕಳು.. ಅಷ್ಟು ಪ್ರೀತಿಸುತ್ತಿದ್ದ ಹೆಂಡತಿ ಇನ್ನಿಲ್ಲ.. ನಿಜಕ್ಕೂ ಮಹೇಶ್ ಹೆಂಡತಿಯ ಅಗಲಿಕೆಯಿಂದ ಕುಗ್ಗಿ ಹೋದರು..

ಕೊನೆಗೆ ಮಕ್ಕಳ‌ ಬಗ್ಗೆ ಆಲೋಚನೆ ಮಾಡದೇ ದುಡುಕಿನ ನಿರ್ಧಾರ ಮಾಡಿಬಿಟ್ಟರು.. ಹೌದು ಪತ್ನಿ ಇಲ್ಲದ ಈ ಜೀವನ ಬೇಡವೆಂದು ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿ ಬಿಟ್ಟರು.. ಸಾಕಷ್ಟು ಬಾರಿ ಜೀವ ಕಳೆದುಕೊಳ್ಳಲು ಪ್ರಯತ್ನ ಪಟ್ಟರೂ ಸಹ ಸ್ನೇಹಿತರು ಸಂಬಂಧಿಕರು ತಡೆದಿದ್ದರು.. ಆದರೆ ಅದ್ಯಾಕೋ ತನ್ನ ಹೆಂಡತಿ ಇಲ್ಲದ ಈ ಜೀವನ ಮಹೇಶ್ ಗೆ ಬೇಡವಾಗಿ ಹೋಗಿತ್ತು.. ಇಂದು ತೋಟದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಾಳಿನ ಔಷಧಿ ಸೇವಿಸಿ ಬಿಟ್ಟಿದ್ದಾರೆ.. ಆ ಬಳಿಕ ಮಹೇಶ್ ತನ್ನ ಸಹೋದರನಿಗೆ ಫೋನ್ ಮಾಡಿ ಮಕ್ಕಳನ್ನು ಚೆನ್ನಾಗಿ ನೋಡಿಕೋ.. ನಾನು ಇರಲಾರೆ.. ನಾನು ಔಷಧಿ ತೆಗೆದುಕೊಂಡಿದ್ದೀನಿ.. ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಕೇಳಿಕೊಂಡಿದ್ದಾರೆ.. ವಿಚಾರ ತಿಳಿದ ತಕ್ಷಣ ಮಹೇಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟರೂ ಸಹ ಮಹೇಶ್ ಕೂಡ ಪತ್ನಿಯಂತೆಯೇ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಕೊನೆಯುಸಿರೆಳೆದು ಬಿಟ್ಟರು..

ಪತ್ನಿಯ ಹಾದಿಯನ್ನೇ ಗಂಡ ಮಹೇಶ್ ಹಿಡಿದು ಜೀವ ಕಳೆದುಕೊಂಡದ್ದ ಕಂಡು ಇಡೀ ಗ್ರಾಮವೇ ಕಂಬನಿ‌ ಮಿಡಿದಿದೆ.. ಆದರೆ ಆ ಮಕ್ಕಳು.. ಆ ಎರಡು ಪುಟ್ಟ ಮಕ್ಕಳು ಅನಾಥವಾಗಿಬಿಟ್ಟವು.. ಮಕ್ಕಳಿಗಾಗಿಯಾದರೂ ಮಹೇಶ್ ಈ ನಿರ್ಧಾರದಿಂದ ಹಿಂದೆ ಸರಿದು ಬಿಡಬೇಕಿತ್ತು.. ಕಾಲ ಮಿಂಚಿ ಹೋಗಿದೆ.. ಪತ್ನಿಯ ಮೇಲಿನ ಪ್ರೀತಿಯಿಣ್ದ ತಾನೂ ಸಹ ಸಾವಿನ ಮನೆಗೆ ಹೊಂಟು ಬಿಟ್ಟ.. ಆ ಎರಡು ಪುಟ್ಟ ಕಂದಮ್ಮಗಳಿಗಾದರೂ ಅವರ ಚಿಕ್ಕಪ್ಪ ಚಿಕ್ಕಮ್ಮ ನಿಂದ ತಂದೆ ತಾಯಿಯ ಪ್ರೀತಿ.. ಒಳ್ಳೆಯ ಜೀವನ.. ಒಳ್ಳೆಯ ಭವಿಷ್ಯ ಸಿಗುವಂತಾಗಲಿ ಅಷ್ಟೇ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...