ಪಡಿತರ ಪಡೆಯದಿದ್ದರೆ ಬಿಪಿಎಲ್ ಕಾರ್ಡ್‌ ರದ್ದು..!

ಸತತ ಆರು ತಿಂಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳನ್ನು ಪಡೆಯದಿದ್ದರೆ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುತ್ತಿದ್ದು, ಇದೀಗ ಅಂಥಹವರಿಗೆ ಅಂತಿಮ ಎಚ್ಚರಿಕೆಯನ್ನು ನೀಡುವ ಪ್ರಕ್ರಿಯೆ ನಡೆದಿದೆ.
ಕೇವಲ ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿಯೇ ಸಾವಿರಾರು ಮಂದಿ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಅಂಥವರಿಗೆ ಪಡಿತರ ಪದಾರ್ಥ ಬೇಕಿಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗುವ ವ್ಯವಧಾನವೂ ಅವರಿಗಿಲ್ಲ. ಹೀಗೆ ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಅವರ ಹೆಸರಿನಲ್ಲಿರುವ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ತಿಂಗಳು ಪಡಿತರ ಪದಾರ್ಥ ಪಡೆಯದಿದ್ದರೆ ಅವರ ರೇಷನ್‌ ಕಾರ್ಡ್‌ ರದ್ದುಗೊಳ್ಳಲಿದೆ. ಪಡಿತರ ಪದಾರ್ಥವಷ್ಟೇ ಅಲ್ಲ, ಅವರಿಗೆ ರೇಷನ್‌ ಕಾರ್ಡ್‌ ಮೂಲಕ ದೊರೆಯುವ ಸರಕಾರದ ಇನ್ಯಾವುದೇ ಸೌಲಭ್ಯ ಸಿಗುವುದಿಲ್ಲ. ಬಡವರಿಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲಎಂಬ ಕಾರಣಕ್ಕೆ ರಾಜ್ಯ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ ಹಾಗೂ ಹಣವನ್ನು ನೀಡುತ್ತಿದೆ. ನಿಜಕ್ಕೂ ಈ ಸೌಲಭ್ಯ ನೈಜ ಬಡವರಿಗೆ ಸಿಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸಹ ಈ ಮಾಹಿತಿ ಸಂಗ್ರಹಿಸುವ ಕಾರ್ಯ ಸಹಾಯಕವಾಗಲಿದೆ.

ಬಿಪಿಎಲ್ ಕುಟುಂಬ ಬೇರೆಡೆಗೆ ತೆರಳಿದೆಯೇ? ಅವರು ಕೇವಲ ಆರೋಗ್ಯ ಸಂಬಂಧಿ ಸೌಲಭ್ಯಕ್ಕಾಗಿ ಪಡಿತರ ಚೀಟಿ ಪಡೆದುಕೊಂಡಿದ್ದಾರೆಯೇ ? ಆ ಪಡಿತರ ಚೀಟಿದಾರರು ಮರಣ ಹೊಂದಿದ್ದಾರೆಯೇ ? ಎಂಬಿತ್ಯಾದಿ ಮಾಹಿತಿಗಳನ್ನು ಇದೀಗ ಅರೋಗ್ಯ ಇಲಾಖೆ ಕಲೆ ಹಾಕಲಾಗುತ್ತಿದೆ. ಇದೆಲ್ಲವನ್ನೂ ಸಂಗ್ರಹಿಸಿ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸೂಕ್ತ ಮಾಹಿತಿ ಆಧರಿಸಿ ಯಾವ್ಯಾವ ಪಡಿತರ ಚೀಟಿಗಳನ್ನು ರದ್ದು ಮಾಡಬೇಕೆಂಬುದನ್ನು ಹಿರಿಯ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.
ಪಡಿತರ ಚೀಟಿಗೆ ಬ್ಯಾಂಕ್‌ನಲ್ಲಿ ಆಧಾರ್‌ಗೆ ಪಡಿತರ ಕಾರ್ಡ್‌ ಲಿಂಕ್‌ ಆಗಿದೆಯೇ, ಬ್ಯಾಂಕ್‌ ಅಕೌಂಟ್‌ ಮಾಹಿತಿ ಸರಿಯಾಗಿದೆಯೇ?, ಇ ಕೆವೈಸಿ ಅಪ್‌ಡೇಟ್‌ ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂಬುದಾಗಿ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

You might also like

Comments are closed.