ತ್ರಿಬಲ್ಸ್ ಬೈಕ್ ಓಡಿಸಿದ್ದಲ್ಲದೇ, ಮೂಕ ಪ್ರಾಣಿಗೂ ನೋವು ಮಾಡಿದ ಪುಂಡರ ಪುಂಡಾಟಿಕೆಗೆ ಕೊನೆಯೇ ಇಲ್ವಾ ಅಂತ ಅನಿಸುತ್ತದೆ. ಹದಿಹರೆಯದ ಮಕ್ಕನಿಗೆ ಬೈಕ್ ಎಂದರೆ ಕ್ರೇಜ್. ಲಾಂಗ್ ರೈಡ್ ಹೋಗುವುದು, ವೀಲಿಂಗ್ ಮಾಡುವುದು, ಗಾಡಿ ಓಡಿಸುವಾಗ ಇನ್ನೊಬ್ಬರಿಗೆ ತೊಂದರೆ ಕೊಡುವುದು, ಕೀಟಲೇ ಮಾಡುವುದು ಎಂದರೆ ತುಂಬಾನೇ ಇಷ್ಟ. ಆದರೆ ಇದರಿಂದ ಅವರಿಗೂ ತೊಂದರೆ, ಜನರಿಗೂ ಕಷ್ಟ. ಮನೆಯಲ್ಲಿ ಮಕ್ಕಳು ಹಠ ಮಾಡಿದರು ಅಂತಲೋ, ಅಥವಾ ಅವಶ್ಯಕತೆ ಇದೆ ಅಂತಲೋ ಬೈಕ್ ಅನ್ನು ಕೊಡಿಸುತ್ತಾರೆ. ಆದರೆ ಹುಡುಗರಿಗೆ ಅದು ಕ್ರೇಜ್ ಆಗಿ ಬಿಟ್ಟಿರುತ್ತದೆ.
ಇನ್ನು ಪುಂಡ ಹುಡುಗರ ಬಗ್ಗೆ ಹೇಳುವುದೇ ಬೇಡ. ಅವರು ಗಾಡಿ ಓಡಿಸುವಾಗ ಅಕ್ಕ-ಪಕ್ಕದಲ್ಲಿ ಗಾಡಿ ರೈಡ್ ಮಾಡುತ್ತಿರುವವರು ಕೂಡ ಹೆದರಿಕೊಳ್ಳುತ್ತಾರೆ. ಜನಜಂಗಳಿ ಇರುವ ಪ್ರದೇಶ, ಟ್ರಾಫಿಕ್ ಇರುವ ರಸ್ತೆ, ಪುಟ್ಟ ರಸ್ತೆ ಎಂದೂ ಕೂಡ ಯೋಚಿಸದೆ ವೀಲಿಂಗ್ ಮಾಡುತ್ತಾರೆ. ಸ್ಪೀಡ್ ಆಗಿ ಓಡಿಸುತ್ತಾರೆ. ಇಂತಹ ಪುಂಡರನ್ನು ಪೊಲೀಸರು ಹಿಡಿದು ಬೆದರಿಸಿದರೂ ಜಗ್ಗುವುದಿಲ್ಲ. ತಾವು ಆಡಿದ್ದೇ ಆಟ ಎೆಬಂತೆ ಬಿಂದಾಸ್ ಆಗಿ ಇರುತ್ತಾರೆ.ಕೆಲವರು ಅನಾಹುತಗಳಿಗೆ ಕಾರಣಕರ್ತರೂ ಆಗುತ್ತಾರೆಇದೀಗ ಪುಂಡರ ಪುಂಡಾಟಿಕೆಯ ವೀಡಿಯೋ ಒಂದು ವೈರಲ್ ಆಗಿ ಬಿಟ್ಟಿದೆ. ಅದಕ್ಕೆ ಕಾರಣವೂ ಇದೆ.
ಒಂದೇ ಬೈಕ್ ನಲ್ಲಿ ಮೂವರು ಮೈನ್ ರಡ್ ನಲ್ಲಿ ಫಾಸ್ಟ್ ಆಗಿ ಬರುತ್ತಾರೆ. ಈ ವೇಳೆ ರಸ್ತೆಯ ವೀಡಿಯೋ ಮಾಡುತ್ತಾ ಹೋಗುತ್ತಿದ್ದವನಿಗೂ ಚಮಕ್ ಕೊಡುತ್ತಾರೆ. ಅವರು ಹಿಂದಿಯಲ್ಲಿ ಬೈಯುವಾಗಲೇ ಸ್ಪೀಡ್ ಆಗಿ ಹೋಗುತ್ತಾರೆ. ಆಗ ಪಾಪ ರಸ್ತೆ ದಾಟುತ್ತಿದ್ದ ಹಸುವಿಗೆ ಡಿಕ್ಕಿ ಹೊಡೆಯುತ್ತಾರೆ. ಇದರಿಂದ ಹಸು ಅಲ್ಲೇ ಕುಸಿದು ಬೀಳುತ್ತದೆ. ಬೈಕ್ ಕೂಡ ಸ್ಕಿಡ್ ಆಗಿ ಮೂವರು ಬೀಳುತ್ತಾರೆ. ಇದೆಲ್ಲವೂ ಮೊತ್ತೊಬ್ಬ ಬೈಕ್ ಸನೃವಾರನ ಮೊಬೈಲ್ ನಲ್ಲಿ ಸೆರೆಯಾಗಿದೆ.