ಮಾನವನ ಜನುಮ ಎಂಬುದು ಕೇವಕ ಕ್ಷಣಿಕ. ಹೌದು ವಿಧಿ ಎಂಬುದು ಯಾವಾಗ ತನ್ನ ವಕ್ರದೃಷ್ಟಿಯನ್ನು ನಮ್ಮ ಮೇಲೆ ತೋರುತ್ತದೆ ಏಂದು ಹೇಳಲು ಕೂಡ ಸಾಧ್ಯವಿಲ್ಲ. ಹೌದು ರಾತ್ರಿ ಊಟ ಮಾಡಿ ಮಲುಗುವವರು ಬೆಳಿಗ್ಗೆ ಎಚ್ಚರವಾಗುತ್ತಾರೆ ಎಂದು ಹೇಳಲು ಸಹ ಸಾಧ್ಯವಾಗುವುದಿಲ್ಲ. ವ್ಯಕ್ತಿ ಎಷ್ಟೇ ಒಳ್ಳೆಯವನಾಗಿದ್ದರೂ ಕೂಡ ಜೀವನದಲ್ಲಿ ಎಷ್ಟೇ ಒಳ್ಳೆ ಕೆಲಸ ಮಾಡಿದ್ದರೂ ಸಹ ಭೂಮಿಯಲ್ಲಿ ಅವನ ಋಣ ಮುಗಿದ ಮೇಲೆ ಬಾರದ ಲೋಕಕ್ಕೆ ಪ್ರಯಾಣ ನಡೆಸಲೇಬೇಕು.
ಇನ್ನು ಮನುಷ್ಯ ಭೂಮಿ ಮೇಲಿನ ಅತಿ ಶ್ರೇಷ್ಠ ಜೀವಿಯಾಗಿದ್ದು ಆತನಿಗೆ ಸರಿ-ತಪ್ಪುಗಳ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಹೌದು ಪ್ರತಿಯೊಬ್ಬ ಮನುಷ್ಯನ ಹುಟ್ಟಿಗೆ ಒಂದು ವಿಶೇಷತೆಯಿದ್ದು ಹುಟ್ಟು ಹಾಗೂ ಅಗಲಿಕೆ ಖಚಿತ. ಇವೆರಡರ ನಡುವಿನ ಜೀವನದಲ್ಲಿ ಸಾಮಾಜಿಕ ಕಳಕಳಿ ತ್ಯಾಗ ಪರಂಪರೆಯ ವಿಶಾಲ ಮನೋಭಾವನೆ ಇರಬೇಕಾಗುತ್ತದೆ. ಸ್ವಾರ್ಥದ ಬದುಕು ಸಮಾಜಕ್ಕೆ ಕಂಟಕ ಪ್ರಾಯ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಮಾಜ ಸೇವೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಬೇಕು.
ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ವಿನಾಶಕ್ಕೆ ಮುಂದಾಗಿರುವ ಮಾನವನ ಅತಿ ಆಸೆಗಳಿಗೆ ಪ್ರಕೃತಿಯೂ ಹಾಳಾಗುತ್ತಿದೆ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ಅಳಿವಿನ ಅಂಚಿಗೆ ತಲುಪಿದ್ದು ಇದರ ಜೊತೆಗೆ ಹಣದ ಹಿಂದೆ ಓಡುವ ಮನುಷ್ಯ ಯಾವ ಹೀನ ಕೃತ್ಯ ಬೇಕಾದರೂ ಎಸಗಿ ಬಿಡುತ್ತಾನೆ. ಹೌದು ಸದಾ ತಾನು ತನ್ನ ಉಳಿವಿಗಾಗಿ ಕುಟುಂಬದ ಉಳಿವಿಗಾಗಿ ಏನು ಬೇಕಾದರೂ ಮಾಡಬೇಕು ಎಂದುಕೊಳ್ಳುವ ಬದುಲು ಬದುಕಿದ್ದಷ್ಟು ದಿನ ಪ್ರೀತಿ ಮತ್ತು ಸಮಾಜ ಸೇವೆ ಮಾಡುತ್ತಾ ಬಂದರೆ ನಮ್ಮ ಹುಟ್ಟಿಗೂ ಒಂದು ಅರ್ಥವಿರುತ್ತದೆ.
ಏಕೆಂದರೆ ಅಪಘಾತಗಳು ನಮ್ಮ ಜೀವನದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗಿ ಇಹಲೋಕ ತ್ಯಜಿಸಿದರೆ ಇನ್ನೂ ಕೆಲವೊಮ್ಮೆ ನಮ್ಮದೇನೂ ತಪ್ಪಿಲ್ಲದಿದ್ದರೂ ಸಹ ರಸ್ತೆಯಲ್ಲಿ ಚಲಿಸುವಾಗ ಅಪಘಾತದಿಂದ ಪ್ರಾಣ ಕಳೆದುಕೊಳ್ಳಬಹುದು. ಇದೇ ಕಾರಣಕ್ಕಾಗಿ ವಿಧಿ ಎಂಬುದು ಬಹಳ ಕ್ರೂರ ಎಂದು ಹೇಳುತ್ತೇವೆ.ನಾವು ಯಾವ ಸಮಯದಲ್ಲಿ ಬೇಕಾದರೂ ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ಗೊತ್ತಿದ್ದರೂ ಸಹ ಮನುಷ್ಯ ಸ್ವಾರ್ಥ ಹಾಗೂ ಹಣದ ಆಸೆ ಹಿಂದೆ ಬೀಳುವುದನ್ನು ಬಿಡುವುದಿಲ್ಲ.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆಯಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯುತ್ತವೆ. ಸುರಕ್ಷತಾ ಸಾಧನಗಳಾದ ಹೆಲ್ಮೆಟ್ ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಇದರಿಂದ ನಮ್ಮ ಜೀವವನ್ನು ನಾವೇ ಕಾಪಾಡಿಕೊಂಡಂತಾಗುತ್ತದೆ. ರಸ್ತೆಗಳಲ್ಲಿ ಅಳವಡಿಸಿದ ಸೂಚನಾ ಫಲಕಗಳನ್ನು ಗಮನಿಸಿ ವಾಹನ ಓಡಿಸಬೇಕಾಗುತ್ತದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಸುರಕ್ಷತಾ ಕ್ರಮಗಳು ನಿಯಮಗಳ ಪಾಲನೆ ಯಿಂದ ಅಪಘಾತ ತಡೆಯಲು ಸಾಧ್ಯವಿದೆ.
ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು.
ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯತೆ ತೋರದೆ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು. ಒಮ್ಮೆ ಈ ವಿಡಿಯೋ ನೋಡಿ ಇದರಲ್ಲಿ ಹೆಲ್ಮೆಟ್ಟನ್ನು ಕಡ್ಡಾಯವಾಗಿ ಯಾಕೆ ಧರಿಸಬೇಕು ಎಂದು ಹೇಳುತ್ತಾರೆ ಎಂಬುದಕ್ಕೆ ಪರಿಪೂರ್ಣ ಅರ್ಥ ಸಿಗುತ್ತದೆ. ದಯವಿಟ್ಟು ಈ ವಿಡಿಯೋ ನೋಡಿ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಧನ್ಯವಾದ.