ಮದ್ವೆ ಮಾಡೋಕೆ ಹುಡ್ಗಿ ನೋಡ್ತಾ ಇದ್ವಿ ಆಗ ನನ್ನ ಮಗ ಮಂ.ಗಳಮುಖಿಯಾಗಿ ಬದಲಾದ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ತಾಯಿ.!

ಈ ಹಿಂದಿನ ಕೆಲವು ಸೀಸನ್ ಗಳಿಗೆ ಹೋಲಿಸಿಕೊಂಡರೆ ಈ ಬಾರಿಯ ಬಿಗ್ ಬಾಸ್ (Bigboss 10) ಬಹಳ ಇಂಟರೆಸ್ಟಿಂಗ್ ಎನಿಸಿದೆ. ಜಲಸಾಮಾನ್ಯರಿಗೆ ತೀರಾ ಪರಿಚಿತ ಮುಖಗಳೇ ಮನೆ ಒಳಗೆ ಎಂಟ್ರಿ ಕೊಟ್ಟಿರುವುದರಿಂದ ಸಹಜವಾಗಿ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಮತ್ತು ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗುತ್ತಿದೆ.

ಬಿಗ್ ಬಾಸ್ ಮನೆಯ ಟಾಸ್ಕ್ ಗಳು ಹಾಗೂ ಅಲ್ಲಿನ ಘಟನೆಗಳಿಗೆ ಕಂಟೆಸ್ಟೆಂಟ್ ಗಳು ಕೊಡುವ ರೆಸ್ಪಾನ್ಸ್ ಈ ಆಟ ನೋಡುವುದಕ್ಕೆ ಆಕರ್ಷಕ ಎನಿಸಿದರೆ ನಾವು ಪ್ರತಿನಿತ್ಯ ನೋಡುತ್ತಿದ್ದವರ ವೈಯಕ್ತಿಕ ಬದುಕಿನ ಘಟನೆಗಳನ್ನು ಅವರು ಹೇಳಿಕೊಂಡಾಗ ನಮ್ಮನ್ನು ಈ ರಿಯಾಲಿಟಿ ಶೋಗೆ ಅದು ಇನ್ನಷ್ಟು ಹತ್ತಿರಗೊಳಿಸುತ್ತದೆ.

ಮೊದಲನೇ ದಿನವೇ ಸೀಸನ್ 10ರ ಜೊತೆ ಪ್ರೇಕ್ಷಕರೆಲ್ಲರಿಗೂ ಇಂತಹದೊಂದು ಕನೆಕ್ಷನ್ ಬಂದಿದೆ. ಪ್ರತಿಯೊಂದು ವಿಭಾಗದಲ್ಲೂ ಕೂಡ ವಿಶೇಷವಾದ ವ್ಯಕ್ತಿಗಳನ್ನು ಆರಿಸಿಕೊಂಡು ಮನೆ ಒಳಗೆ ಹಾಕಿರುವುದರಿಂದ ಕಣ್ಮುಚ್ಚದೆ ಇದು ಕಾರ್ಯಕ್ರಮವನ್ನು ನೋಡುವಂತೆ ಸೆಳೆಯುತ್ತಿದೆ.

ಆ ಸಿನಿಮಾ ತೋರಿಸಿ ನನ್ನ ಜೀವನವೂ ಹೀಗೆ ಎಂದು ನೀತು ಹೇಳಿದಳು'; ತಾಯಿ ವನಜಾಕ್ಷಿ - Neethu vanajakshi mother talks about how he became she rmd Kannada News

ಅದರಲ್ಲೂ ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಉಳಿದೆಲ್ಲರಿಗಿಂತ ಸ್ವಲ್ಪ ವಿಭಿನ್ನವಾಗಿ ಜನರಿಗೆ ಕಾಣಿಸುತ್ತಾರೆ. ಯಾಕೆಂದರೆ ಅವರು ತಾವೇ ಇಷ್ಟಪಟ್ಟು ಮಂಗಳಮುಖಿಯಾಗಿ (trans gender) ಬದಲಾಗಿದ್ದಾರೆ, ಇದರ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕುತೂಹಲ ಇರುತ್ತದೆ.

ಅದೇ ರೀತಿ ಸಹ ಕಂಟೆಸ್ಟೆಂಟ್ಗಳಾದ ಸಿರಿ ಹಾಗೂ ಭಾಗ್ಯಶ್ರೀ (Co-Contestants Siri and Bhagyashree) ಅವರು ಮಂಜುನಾಥ್ ನಿಂದ ಅವರು ನೀತು ವನಜಾಕ್ಷಿಯಾಗಿ ಬದಲಾದ ಕಥೆ ಬಗ್ಗೆ ಕೇಳಿದ್ದಾರೆ. ಆ ದಿನಗಳನ್ನು ನೆನೆದ ಅವರು ಕಣ್ಣೀರಿನೊಂದಿಗೆ ಉತ್ತರ ಕೊಟ್ಟಿದ್ದಾರೆ ಆದರೆ ಈ ಒಂದು ಮಾತುಕತೆಯನ್ನು ಪ್ರತಿಯೊಬ್ಬರು ನೋಡಲೇಬೇಕು ಅಷ್ಟು ಅತ್ಯಮೂಲವಾಗಿದೆ.

ತಮ್ಮ ಹಳೆ ದಿನಗಳನ್ನು ನೆನೆದ ಅವರು ನಾನು ಹುಡುಗನಾಗಿದ್ದಾಗಲೂ ಕೂಡ ಬಹಳ ಚೆನ್ನಾಗಿದ್ದೆ. ಹುಡುಗಿಯರೇ ನನಗೆ ಪ್ರಪೋಸ್ ಮಾಡಿದ್ದರು ಆದರೆ ವಿಶೇಷ ಎನಿಸುತ್ತಿರಲಿಲ್ಲ. ಹುಡುಗರು ಕೂಡ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು ನನಗೆ ಆ ಫೀಲ್ ಬರುತ್ತಿರಲಿಲ್ಲ, ಆದರೆ ನನಗೆ ಹುಡುಗರನ್ನು ಕಂಡರೆ ಇಷ್ಟ ಆಗುತ್ತಿತ್ತು.

ಅನೇಕರಿಗೆ ಮಾದರಿ ತೃತೀಯಲಿಂಗಿ ನೀತು ವನಜಾಕ್ಷಿ – TV9 Kannada | Neethu Vanajakshi Life History And What She Done In Past Rmd

ನನ್ನೊಳಗಡೆ ಆಗುತ್ತಿರುವ ಬದಲಾವಣೆ ನನಗೆ ಗೊತ್ತಾಗುತ್ತಿತ್ತು. ನಾನು ಅಕ್ಕನ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ, ಕಣ್ಣಿಗೆ ಕಾಜಲ್ ಹಚ್ಚಿಕೊಳ್ಳುತ್ತಿದ್ದೆ ಹಾಗೆಯೇ ಒಂದು ದಿನ ಧೈರ್ಯ ಮಾಡಿ ನನ್ನ ಅಮ್ಮನಿಗೆ ಇದರ ಬಗ್ಗೆ ಹೇಳಿದೆ ಆದರೆ ಅವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನ ತಾಯಿ ನನಗೆ ಕೊಟ್ಟ ಆ ಸಪೋರ್ಟ್ ಇಂದು ನಾನು ಸಾಧಕಿ ಆಗುವಂತೆ ಮಾಡಿದೆ.

ಇದೇ ರೀತಿಯಾದ ಸಪೋರ್ಟ್ ಪ್ರತಿಯೊಬ್ಬ ಮಂಗಳಮುಖಿಗೂ ಅವರ ಕುಟುಂಬದಿಂದ ಸಿಗಲಿ ಎಂದು ನಾನು ಬಯಸುತ್ತೇನೆ ಅದೇ ಉದ್ದೇಶಕ್ಕಾಗಿ ನಾನು ನನ್ನ ಜೊತೆ ನನ್ನ ಅಮ್ಮನ ಹೆಸರನ್ನು ಕೂಡ ಸೇರಿಸಿಕೊಂಡಿದ್ದಾನೆ ಎಂದು ಹೇಳಿ ಭಾವುಕರಾಗಿದ್ದಾರೆ ನೀತು ವನಜಾಕ್ಷಿ. ಮನೆಯೊಳಗೆ ನೀತು ಅಮ್ಮನ ಹೆಸರು ಹೇಳುತ್ತಿದ್ದಂತೆ ಇದ್ದ ಮೀಢಿಯಾಗಳ ಕಣ್ಣು ಕೂಡ ವನುಜಾಕ್ಷಿ ಅವರ ಮೇಲೆ ಬಿದ್ದಿದೆ.

ಅನೇಕರಿಗೆ ಮಾದರಿ ತೃತೀಯಲಿಂಗಿ ನೀತು ವನಜಾಕ್ಷಿ – TV9 Kannada | Neethu Vanajakshi Life History And What She Done In Past Rmd

ಇದೇ ರೀತಿ ಅವರು ಸುದ್ದಿ ವಾಹಿನಿ ಒಂದಕ್ಕೆ ಇಂಟರ್ ವ್ಯೂ ನೀಡುತ್ತಾ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆಗ ಅವನಿಗೆ 24 ವರ್ಷ ನಾನು ನನ್ನ ಮಗನಿಗಾಗಿ ಹೆಣ್ಣು ಹುಡುಕುತ್ತಿದ್ದೆ ಆ ಸಮಯದಲ್ಲಿ ಅವನು ಇಂತಹ ನಿರ್ಧಾರ ತೆಗೆದುಕೊಂಡ ಎಂದು ಕಣ್ಣೀರಿಟ್ಟಿದ್ದಾರೆ ನೀತು ತಾಯಿ ವನಜಾಕ್ಷಿ.

You might also like

Comments are closed.