ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರಾಣಿಗಳು ಜಗಳವಾಡುವ ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ ಮಾತ್ರವೇ ಅಲ್ಲದೇ ಇದನ್ನು ನೋಡುವ ಜನರಿಗೂ ಕೂಡಾ ಇವು ಬಹಳಷ್ಟು ಇಷ್ಟವಾಗಿ ಹೆಚ್ಚು ಹೆಚ್ಚು ಶೇರ್ ಆಗುತ್ತಾ ಸಾಗುತ್ತವೆ ಈ ವೀಡಿಯೋಗಳು. ಹುಲಿ, ಸಿಂಹಗಳು ಅಥವಾ ಇನ್ನಾವುದೇ ಪ್ರಾಣಿಗಳು ಹೋರಾಟ ನಡೆಸುತ್ತಿರುವ ವೀಡಿಯೋಗಳನ್ನು ನೀವು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಬಾರಿ ನೋಡಿರಬಹುದು. ಆದರೆ ಈ ಬಾರಿ ಇದಕ್ಕೆ ವಿಭಿನ್ನವಾಗಿ ಒಂದು ವಿಷಪೂರಿತ ಹಾವು ಮತ್ತು ಮುಂಗುಸಿಯ ನಡುವೆ ನಡೆದ ಭೀಕರ ಜಗಳದ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದನ್ನು ಮಾಡುತ್ತಿದೆ. ನೋಡಿದವರಿಗೆ ಒಂದು ರೋಚಕವಾದ ಅನುಭವ ನೀಡುತ್ತಿದೆ.
ನಾವೆಲ್ಲರೂ ಕೂಡಾ ಹಾವು-ಮುಂಗುಸಿ ಕಡು ವೈರಿಗಳು ಎಂಬ ಸತ್ಯವನ್ನು ಈಗಾಗಲೇ ಕೇಳಿದ್ದೇವೆ. ಈಗ ವೈರಲ್ ಆಗಿರುವ ವೀಡಿಯೋ ನೋಡಿದರೆ ಹೌದು ಈ ಮಾತು ಅಕ್ಷರಶಃ ನಿಜ ಎಂದು ನಾವು ಒಪ್ಪುವಂತೆ ಇದೆ. ಹಾವು ಮುಂಗುಸಿ ಎಲ್ಲೇ ಎದುರಾದರೂ ಕೂಡಾ ಅವು ಒಂದಕ್ಕೊಂದು ಜಗಳಕ್ಕೆ ಇಳಿದು, ಹೋರಾಟವನ್ನು ಆರಂಭಿಸಿಬಿಡುತ್ತವೆ. ಹೀಗೆ ರಸ್ತೆಯೊಂದರ ಮಧ್ಯೆ ಎದುರಾದ ಹಾವು ಮುಂಗುಸಿ ಅಲ್ಲೇ ಹೋರಾಟಕ್ಕೆ ಇಳಿದಿವೆ. ವೀಡಿಯೋದಲ್ಲಿ ನೋಡಿದಾಗ ಮೊದಲು ಹಾವು ಮುಂಗುಸಿಯ ಮೇಲೆ ಆಕ್ರಮಣವನ್ನು ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ. ಹಾವು ತನ್ನ ಮೇಲೆ ಆಕ್ರಮಣ ಮಾಡಿದ ಕೂಡಲೇ ಮುಂಗುಸಿ ಕೂಡಾ ಹಾವಿಗೆ ತನ್ನ ಪ್ರತಿ ಧಾಳಿಯ ಮೂಲಕ ಉತ್ತರವನ್ನು ನೀಡಿದೆ.
ಮುಂಗುಸಿ ಪ್ರತಿ ಧಾಳಿ ಮಾಡಿದ ಕೂಡಲೇ ಹಾವು ಅದರ ಮೇಲೆ ತೀವ್ರವಾಗಿ ಹಲ್ಲೆ ಮಾಡಲು ಆರಂಭಿಸಿದೆ. ಮುಂಗುಸಿ ಮೊದಲು ಹಾವಿನ ಬಾಲವನ್ನು ಹಿಡಿದಿದ್ದರೆ, ನಂತರ ಅದರ ಬಾಯಿಯ ಮೇಲೆ ಆಕ್ರಮಣ ಮಾಡಿದೆ. ಹಾವು ಮುಂಗುಸಿಯಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಾರಂಭಿಸಿದೆ. ಆದರೆ ಮುಂಗುಸಿ ಮಾತ್ರ ತನ್ನ ಬದ್ಧ ಶತೃವನ್ನು ಯಾವುದೇ ಕಾರಣಕ್ಕೂ ಬಿಡಲು ಸಿದ್ಧವಿಲ್ಲದೇ, ಅದರ ಹೋರಾಟವನ್ನು ತ್ಯಜಿಸಲು ಇಷ್ಟವಿಲ್ಲದೇ ಹಾವಿನ ಮೇಲೆ ಆಕ್ರಮಣ ಮುಂದುವರೆಸಿದೆ. ಹೇಗೋ ತಪ್ಪಿಸಿಕೊಂಡು ಹಾವು ಓಡಿದ ತಕ್ಷಣ, ಮುಂಗುಸಿ ಅದನ್ನು ಹಿಡಿದು ತನ್ನ ಬಾಯಲ್ಲಿ ಕಚ್ಚಿಕೊಂಡು ತನ್ನ ಸ್ಥಾನದ ಕಡೆಗೆ ಎತ್ತಿಕೊಂಡು ಓಡಿದೆ.
ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಅರಣ್ಯ ಅಧಿಕಾರಿಯಾಗಿರುವ ಡಾ.ಅಬ್ದುಲ್ ಖಯ್ಯುಂ ಅವರು ಶೇರ್ ಮಾಡಿದ್ದು, ಅವರು ವೀಡಿಯೋ ಜೊತೆಗೆ, ‘ಇದು ಸ್ವಾಭಾವಿಕ, ನನಗೆ ಖುಷಿಯಾಗಿದ್ದು ಏನು ಎಂದರೆ ಈ ಎರಡೂ ಜಾತಿಗಳನ್ನು ಉಳಿಸಲು ಯಾವುದೇ ಯೋಧರು ಅಲ್ಲಿ ಧುಮುಕಲಿಲ್ಲ. ಪ್ರಕೃತಿಯಲ್ಲಿ ಜೀವಂತವಾಗಿರುವ ಅತ್ಯಂತ ಯೋಗ್ಯವಾದ ಜೀವನ” ಎಂದು ಬರೆದುಕೊಂಡಿದ್ದಾರೆ.
18 ಆಗಸ್ಟ್ ರಂದು ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಆರು ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, 500 ಕ್ಕಿಂತ ಅಧಿಕ ಲೈಕ್ಸ್ ಗಳು ದೊರೆತಿದ್ದು, ನೂರಕ್ಕಿಂತ ಅಧಿಕ ರೀಟ್ವೀಟ್ ಗಳಾಗಿವೆ.
ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಪ್ರಕೃತಿ ನಡುವೆ ನಡೆದ ಈ ಹೋರಾಟ ರೋಚಕವಾಗಿದೆ, ಮುಂಗುಸಿ ಕೊನೆಯಲ್ಲಿ ಇಷ್ಟು ಚಾಕಚಕ್ಯತೆಯಿಂದ ಹಿಡಿದಿದೆ, ಹಾವಿನ ಜೀವನವೇ ಬದಲಾಗಿ ಹೋಯಿತು, ಬಹಳ ಅಪರೂಪದ, ಭಯಾನಕ ಹಾಗೂ ಅಷ್ಟೇ ಬೇಸರವನ್ನು ಉಂಟು ಮಾಡುವ ವೀಡಿಯೋ ಎಂದು ಕೆಲವರು ಹಾವಿನ ಪರಿಸ್ಥಿತಿ ಬಗ್ಗೆ ಕರುಣೆ ಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ.
This is absolutely natural. I am happy that no crusader jumped in to save either species. It’s the survival of fittest which prevails in #nature
Vid-WA. @IfsJagan @vivek4wild pic.twitter.com/RtsR5LosnI— Dr Abdul Qayum, IFS (@drqayumiitk) August 18, 2020