ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ವಿಷಯಗಳಲ್ಲಿ ಬಿಗ್ ಬಾಸ್ ವಿಷಯ ಕೂಡ ಒಂದು ಎಂದು ಹೇಳಬಹುದು. ಹೌದು ಕಳೆದ ವಾರ ಆರಂಭವಾದ ಬಿಗ್ ಬಾಸ್ ಕನ್ನಡ OTT ಒಂದು ವಾರವನ್ನ ಪೂರೈಕೆ ಮಾಡಿದ್ದು ಮೊದಲ ವಾರ ಯಾರು ಮನೆಯಿಂದ ಹೊರಗೆ ಬರುತ್ತಾರೆ ಅನ್ನುವುದನ್ನ ನಾವು ಕಾದು ನೋಡಬೇಕಾಗಿದೆ. ಇದರ ನಡುವೆ ಸೋನು ಶ್ರೀನಿವಾಸ್ ಗೌಡ ಮತ್ತು ಸ್ಫೂರ್ತಿ ನಡುವೆ ಮನೆಯಲ್ಲಿ ದೊಡ್ಡ ವಾರ್ ನಡೆಯುತ್ತಿದ್ದು ಒಬ್ಬ ಹುಡುಗನಿಗಾಗಿ ಇಬ್ಬರು ಮನೆಯಲ್ಲಿ ಕಿತ್ತಾಡುತ್ತಿದ್ದಾರೆ. ಇನ್ನು ವಿಷಯಕ್ಕೆ ಬರುವುದಾದರೆ, ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ವಾರದ ಲೆಕ್ಕದಲ್ಲಿ ಸಂಭಾವನೆಯನ್ನ ಕೊಡಲಾಗುತ್ತದೆ. ಬಿಗ್ ಬಾಸ್ ಅನ್ನುವುದು ಅತೀ ದೊಡ್ಡ ರಿಯಾಲಿಟಿ ಶೋ ಅನಿಸಿಕೊಂಡಿರುವ ಕಾರಣ ಇಲ್ಲಿನ ಸ್ಪರ್ಧಿಗಳಿಗೆ ವಾರಕ್ಕೆ ಸ್ವಲ್ಪ ದೊಡ್ಡ ಮೊತ್ತದ ಸಂಭಾವನೆಯನ್ನ ಕೊಡಲಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಅದೇ ರೀತಿಯಲ್ಲಿ ಬಿಗ್ ಬಾಸ್ ನಲ್ಲಿ ಬಲಿಷ್ಠ ಸ್ಪರ್ಧಿ ಅನಿಸಿಕೊಂಡಿರುವ ಆರ್ಯವರ್ಧನ್ ಗುರೂಜಿಯವರಿಗೂ ಕೂಡ ವಾರಕ್ಕೆ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಕೊಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಬಿಗ್ ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಯಾಗಿರುವ ಆರ್ಯವರ್ಧನ್ ಗುರೂಜಿ ಅವರಿಗೆ ಎಷ್ಟು ಸಂಬಳವನ್ನ ಕೊಡಲಾಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಆರ್ಯವರ್ಧನ್ ಗುರೂಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಮತ್ತು ಕನ್ನಡ ಕಿರುತೆರೆಯಲ್ಲಿ ಬಳಷ್ಟು ಹೆಸರು ಮಾಡಿದ ಜ್ಯೋತಿಷಿಗಳಲ್ಲಿ ಒಬ್ಬರು
ಮ್ಮ ಸಂಖ್ಯಾ ಶಾಸ್ತ್ರದ ಮೂಲಕ ಬಹಳಷ್ಟು ಪ್ರಸಿದ್ಧಿಯನ್ನ ಪಡೆದುಕೊಂಡಿರುವ ಆರ್ಯವರ್ಧನ್ ಗುರೂಜಿ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಹೌದು ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ ಸುಮಾರು 25000 ರಿಂದ 30000 ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಯ ಸದಸ್ಯರಿಗೆ ವಾರದ ಲೆಕ್ಕದಲ್ಲಿ ಸಂಭಾವನೆಯನ್ನ ಕೊಡಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಆರ್ಯವರ್ಧನ್ ಗುರೂಜಿ ಅವರಿಗೂ ವಾರಕ್ಕೆ ಸುಮಾರು 25000 ದಿಂದ 30000 ಸಾವಿರ ರೂಪಾಯಿ ಸಂಭಾವನೆಯನ್ನ ಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸ್ಪರ್ಧಿಗಳು ಹೆಚ್ಚು ಸಮಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಅವರ ಸಂಭಾವನೆಯನ್ನ ಕೊಚ ಏರಿಕೆ ಕೂಡ ಮಾಡಲಾಗುತ್ತದೆ. ಇದೊಂದು ಅಂದಾಜು ಸಂಭಾವನೆಯ ಲೆಕ್ಕಾಚಾರ ಆಗಿದ್ದು ಇದಕ್ಕಿಂತ ಹೆಚ್ಚು ಸಂಭಾವನೆಯನ್ನ ಪಡೆದುಕೊಂಡರೆ ಆಶ್ಚರ್ಯ ಇಲ್ಲ ಎಂದು ಹೇಳಬಹುದು. ಸದ್ಯ ಬಿಗ್ ಬಾಸ್ OTT ಅಲ್ಲಿ ಪ್ರಸಾರ ಆಗುತ್ತಿದ್ದು ಜನರು ದಿನದ 24 ಘಂಟೆ OTT ಅಲ್ಲಿ ಬಿಗ್ ಬಾಸ್ ನೋಡಬಹುದಾಗಿದೆ. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ದೊಡ್ಡ ಜಗಳ ಮತ್ತು ಮನಸ್ತಾಪಗಳು ಆಗುತ್ತಿದ್ದು ಸದ್ಯ ಪ್ರೀತಿಯ ಕಹಾನಿ ಕೂಡ ಶುರು ಆಗಿದೆ. ಮೊದಲ ವಾರ ಯಾರು ಮನೆಯಿಂದ ಹೊರಗೆ ಬರಲಿದ್ದಾರೆ ಅನ್ನುವುದು ನಾಳೆ ತಿಳಿಯಲಿದೆ.