ಶೇಕ್ ಇಟ್ ಪುಷ್ಪಾವತಿ ಹಾಡಿಗೆ ಭರ್ಜರಿ ಸೊಂಟ ಬಳುಕಿಸಿದ ಭೂಮಿಕಾ ಬಸವರಾಜ್! ವಿಡಿಯೋ ವೈರಲ್…

ಸೋಶಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಆ್ಯಪ್ ಬಂದಮೇಲೆ ಹಲವಾರು ಪ್ರತಿಭೆಗಳು ತಮ್ಮ ಟ್ಯಾಲೆಂಟ್ ಅನ್ನು ಪ್ರೂವ್ ಮಾಡಿ ಕೋಟೆಯ್ಯಾಂತರ ಮನಗಳನ್ನು ಗೆದ್ದರು. ಆದರೆ ಯಾವಾಗ ಅದು ಭಾರತದಲ್ಲಿ ಬ್ಯಾನ್ ಆಯಿತೋ ಆಗ ಇವರ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿದಂತೆ ಆಗಿತ್ತು. ಮತ್ತೊಮ್ಮೆ ಇವರಿಗೆಲ್ಲ ಅಂತಹ ಅವಕಾಶ ಮಾಡಿಕೊಟ್ಟಿದ್ದು ಇನ್ಸ್ಟಾಗ್ರಾಮ್ ರೀಲ್ಸ್ ಎನ್ನಬಹುದು. ಈಗ ರೀಲ್ಸ್ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರೂ ಫೇಮಸ್ ಆಗುತ್ತಿದ್ದಾರೆ, ಈ ಲಿಸ್ಟ್ ನಲ್ಲಿ ಕರ್ನಾಟಕದಲ್ಲಿ ಹಲವಾರು ಜನರು ಇದ್ದಾರೆ, ಇವರೆಲ್ಲಾ ಸದ್ಯಕ್ಕೆ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಎಂದು ಕರೆಸಿಕೊಳ್ಳುತ್ತಿದ್ದಾರೆ.

ಸಿನಿಮಾಗಳಿಗಿಂತಲೂ ಮೊಬೈಲ್ ಮೂಲಕ ಹೆಚ್ಚಿನ ಜನರಿಗೆ ತಲುಪಲು ಅವಕಾಶಗಳು ಹೆಚ್ಚಿರುವುದರಿಂದ ಇವರಿಗೆ ಸಂಬಂಧಪಟ್ಟ ವಿಷಯಗಳು ಹಾಗೂ ಇವರ ವಿಡಿಯೋಗಳು ಬೇಗನೆ ವೈರಲ್ ಆಗಿ ಇವರು ಫೇಮಸ್ ಆಗುತ್ತಾರೆ. ಕರ್ನಾಟಕದ ಮಟ್ಟಿಗೆ ಸದ್ಯಕ್ಕೆ ಕಾಫಿ ನಾಡು ಚಂದು ಹಾಗೂ ಭೂಮಿಕ ಬಸವರಾಜು ಇಬ್ಬರು ಅಷ್ಟೇ ಫೇಮಸ್ ಆಗಿದ್ದಾರೆ ಎನ್ನಬಹುದು. ಇವರಿಬ್ಬರೂ ಕೂಡ ಮೂಲತಃ ಚಿಕ್ಕಮಗಳೂರಿನವರೇ ಆಗಿದ್ದಾರೆ.

ಭೂಮಿಕ ಬಸವರಾಜು ಅವರು ಕನ್ನಡದ ಯಾವುದೇ ನಟಮಣಿಗೂ ಕಡಿಮೆ ಇಲ್ಲದಂತಹ ಸೌಂದರ್ಯ ಟ್ಯಾಲೆಂಟ್ ಮತ್ತು ಅಭಿಮಾನಿಗಳನ್ನು ಪಡೆದಿದ್ದಾರೆ ಎನ್ನಬಹುದು. ತಮ್ಮ ಅದ್ಭುತವಾದ ಪ್ರತಿಭೆ, ಸೌಂದರ್ಯ, ಡ್ಯಾನ್ಸ್ ಮೂಲಕ ಸಾಕಷ್ಟು ಮನಸ್ಸುಗಳನ್ನು ಸೆಳೆದಿರುವ ಇವರು ಮಾಡುವ ವಿಡಿಯೋಗಳು ಕೂಡ ಅಷ್ಟೇ ಚೆನ್ನಾಗಿ ಇರುತ್ತವೆ. ಯಾವುದೇ ಟ್ರೆಂಡಿಂಗ್ ಹಾಡುಗಳಿಗೂ ಕೂಡ ತಪ್ಪದೇ ರಿಲ್ಸ್ ಮಾಡುವ ಇವರು ಈಗಾಗಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೂರಾರು ವಿಡಿಯೊ ಹಂಚಿಕೊಂಡಿದ್ದಾರೆ.

ಇವರ instagram ಖಾತೆ ಫಾಲೋವರ್ ಸಂಖ್ಯೆ 9 ಲಕ್ಷವನ್ನು ಮೀರಿಸುತ್ತಿದೆ! ಈ ಮಟ್ಟಿಗಿನ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ. ಇವರು ಮಾಡುವ ರೀಲ್ಸ್ಗಳು ಬಹಳ ಬೇಗ ಫೇಮಸ್ ಆಗಿಬಿಡುತ್ತವೆ ಹಾಗೂ ವೈರಲ್ ಕೂಡ ಆಗುತ್ತವೆ, ಯಾಕೆಂದರೆ ಯಾವಾಗಲೂ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಇವರು ಸಾಂಪ್ರದಾಯಕವಾಗಿ ಸೀರೆ ಉಟ್ಟು ರೀಲ್ಸ್ ಮಾಡುತ್ತಾರೆ. ಕೆಲವೊಮ್ಮೆ ಮಾರ್ಡನ್ ಲುಕ್ ಅಲ್ಲಿ ಕಾಣಿಸಿಕೊಂಡರು ಕೂಡ ಭೂಮಿಕ ಬಸವರಾಜ್ ಅವರು ಹೇಗಿದ್ದರೂ ಜನರಿಗೆ ಇಷ್ಟವಾಗುತ್ತಿದ್ದಾರೆ.

ಈ ಬಾರಿ ಬಿಗ್ ಬಾಸ್ ನಲ್ಲಿ ಭೂಮಿಕ ಬಸವರಾಜು ಇರಲಿದ್ದಾರೆ ಎನ್ನುವ ಅನೇಕ ಚರ್ಚೆಗಳು ನಡೆದಿತ್ತು, ಈ ಮಧ್ಯೆ ಭೂಮಿಕಾ ಬಸವರಾಜ್ ಅವರು ತಮ್ಮ ಖಾತೆಯಲ್ಲಿ ಈ ಮೊದಲೇ ಅವರು ಹಾಕಿಕೊಂಡಿದ್ದ ವಿಡಿಯೋವನ್ನು ಮತ್ತೊಮ್ಮೆ ಶೇರ್ ಮಾಡುವ ಮೂಲಕ ಇದನ್ನು ಹೇಗೆ ಮರೆಯೋದು ಎನ್ನುವ ಅಡಿಬರಹವನ್ನು ಬರೆದುಕೊಂಡಿದ್ದಾರೆ. ಇಷ್ಟಕ್ಕೂ ಈ ರೀತಿ ಬರೆದುಕೊಳ್ಳುವ ಕಾರಣ ಬಹಳ ಭಾವನಾತ್ಮಕವಾಗಿದೆ.

ಇವರು ಮಾಡಿದ್ದ ಆ ವಿಡಿಯೋ ಒಂದೇ ದಿನದಲ್ಲಿ ಅವರ ಫಾಲೋವರ್ ಸಂಖ್ಯೆಯನ್ನು ದಾಖಲೆ ಮಟ್ಟದಲ್ಲಿ ಹೆಚ್ಚಿಸಿತ್ತು. ಹಾಗಾಗಿ ಆ ವಿಡಿಯೋ ಎಂದರೆ ಇವರಿಗೆ ಬಹಳ ಇಷ್ಟವಂತೆ, ಅದು ಬೇರೆ ಯಾವುದು ಅಲ್ಲ ಹಿಂದಿಯಲ್ಲಿ ರಾಣಿ ಮುಖರ್ಜಿ ಅವರು ಕುಣಿದಿದ್ದ ಡ್ರೀಮಂ ವೇಕಪ್ಪಂ ಎನ್ನುವ ಹಾಡು. ಈ ಹಾಡಿನಲ್ಲಿ ಬಿಳಿ ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ಫುಲ್ ಸ್ಲೀವ್ಸ್ ಬ್ಲೌಸ್ ನಲ್ಲಿ ಇವರು ಸೆರಗು ಸೊಂಟಕ್ಕೆ ಸಿಕ್ಕಿಸಿಕೊಂಡು ಕುಣಿದಿದ್ದರು.

ಅಂದ ಹಾಗೆ ಇವರು ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಬಹಳ ವೈರಲಾಗುತ್ತಿದ್ದು ಇವರ ಡ್ಯಾನ್ಸ್ ಮೋಡಿಗೆ ಬೆರಗಾದ ಎಲ್ಲರೂ ಮೆಚ್ಚುಗೆಯ ಸುರಿಮಳೆಗಯ್ಯುತ್ತಿದ್ದಾರೆ. ಕ್ರಾಂತಿ ಸಿನಿಮಾ ಜನವರಿ 26ರಂದು ರಿಲೀಸ್ ಆಗುತ್ತಿದೆ, ಈಗಾಗಲೇ ಸಿನಿಮಾ ಹಾಡುಗಳನ್ನು ಕೂಡ ವಿಶೇಷ ರೀತಿಯಲ್ಲಿ ಚಿತ್ರ ತಂಡ ಬಿಡುಗಡೆ ಮಾಡಿದೆ.

ಬಿಡುಗಡೆಯಾಗುತ್ತಿರುವ ಪ್ರತಿ ಹಾಡು ಕೂಡ ಕನ್ನಡಿಗರಿಗೆ ಬಹಳ ಇಷ್ಟವಾಗುತ್ತಿದ್ದು ಹೆಚ್ಚಿನ ಜನರು ಅದನ್ನು ರೀಲ್ಸ್ ಮಾಡಿ ಇನ್ನಷ್ಟು ಫೇಮಸ್ ಮಾಡುತ್ತಿದ್ದಾರೆ. ಡಿ ಬಾಸ್ ಅಭಿಮಾನಿಗಳು ಕೂಡ ಚಿತ್ರದ ಯಶಸ್ಸಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅದೇ ರೀತಿ ಭೂಮಿಕಾ ಬಸವರಾಜು ಅವರು ಸಹ ಶೇಕ್ ಇಟ್ ಪುಷ್ಪವತಿ ಎನ್ನುವ ಹಾಡಿಗೆ ಸಿನಿಮಾ ಸಿಗ್ನೇಚರ್ ಸ್ಟೆಪ್ ಜೊತೆಗೆ ತಮ್ಮದೇ ಆದ ಸ್ಟೆಪ್ಗಳನ್ನು ಬೆರೆಸಿ ಮುದ್ದಾಗಿ ಕುಣಿದಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

 

View this post on Instagram

 

A post shared by Bhumika (@bhumika_basavaraj)

You might also like

Comments are closed.