ಹೊಸ ಸಿನಿಮಾದಲ್ಲಿ ಕಂಪ್ಲೀಟ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಟಿ ಭಾವನಾ

CINEMA/ಸಿನಿಮಾ Entertainment/ಮನರಂಜನೆ

ಭಾವನಾ. ಇವರು ಚಂದ್ರಮುಖಿ ಪ್ರಾಣಸಖಿ ಭಾವನಾ. ರಾಜಕೀಯದಲ್ಲಿಯೇ ಬ್ಯುಸಿಯಾಗಿದ್ದ ಭಾವನಾ, ಮತ್ತೊಮ್ಮೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಜಟ್ಟ ಗಿರಿರಾಜ್ ಜೊತೆ ಸುರಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಚಿತ್ರಕ್ಕಾಗಿ ನಡೆದ ವಿಶೇಷ ಫೋಟೋಶೂಟ್‍ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಭಾವನಾ. ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಮನು ಹೆಗಡೆ, ಧನ್ಯಾ ಬಾಲಕೃಷ್ಣ, ಚಿತ್ರದ ಪ್ರಮುಖ ಪಾತ್ರಧಾರಿಗಳು. ಸಂಕ್ರಾಂತಿಗೆ ಚಿತ್ರ ಸೆಟ್ಟೇರಲಿದೆ.

ನಿರುತ್ತರದ ನಂತರ ಮತ್ತೊಮ್ಮೆ ನಿರ್ಮಾಪಕಿಯಾಗಿರುವ ಭಾವನಾ, ಈ ಬಾರಿಯೂ ವಿಶೇಷ ಕಥೆಯನ್ನೇ ಕೈಗೆತ್ತಿಕೊಂಡಿದ್ದಾರೆ.

ಭಾವನಾ ರಾಮಣ್ಣ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದರು. ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷೆಯಾಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಚಿತ್ರದುರ್ಗದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ನಿರಾಕರಿಸಿತ್ತು. ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಸಭೆಯಿಂದ ಹೊರ ನಡೆದಿದ್ದರು. ಅದಾದ ಮೇಲೆ ಕೈ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಿರು. ಈಗ ಭಾವನಾ ಮತ್ತೆ ತಮ್ಮ ಮಾತೃಪಕ್ಷವನ್ನು ಸೇರಿದ್ದಾರೆ.ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...