ಫೋಟೋ ತೆಗೆಸಿಕೊಳ್ಳಲು ಬಂದ ಸೊಸೆಯ ಕೈಗೆ ಚೀಟಿ ಇಟ್ಟ ಭಾವ! ವಿಡಿಯೋ ವೈರಲ್!

Girls Matter/ಹೆಣ್ಣಿನ ವಿಷಯ

ಮದುವೆ ಎಂದರೆ ಅದೊಂದು ಸಂಭ್ರಮ, ಮದುವೆ ಮನೆಯಲ್ಲಿ ವಧು ವರರು ಕೇಂದ್ರಬಿಂದುವಾಗಿರುತ್ತಾರೆ, ಅಲ್ಲಿ ನೆರೆದ ಬಂಧು ಬಾಂಧವರು, ಸ್ನೇಹಿತರೆಲ್ಲರ ದೃಷ್ಟಿ ಹೆಚ್ಚಾಗಿ ಮದುಮಕ್ಕಳ ಮೇಲೆಯೇ ಇರುತ್ತದೆ. ಆದರೆ ಮದುವೆ ಮನೆ ಅಂದರೆ ಕೇಳಬೇಕೇ ಒಬ್ಬರಾ ಇಬ್ಬರಾ ಸಾಕಷ್ಟು ಜನರು ಸೇರಿರುತ್ತಾರೆ, ಹೀಗಾಗಿ ಅಲ್ಲಿ ಒಂದಿಲ್ಲ ಒಂದು ಚೇಷ್ಟೆ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಆ ಚೇಷ್ಟೆಗಳಿಂದಲೇ ಆ ಸಭೆ ಸಮಾರಂಭಗಳಲ್ಲಿ ನಗೆಯ ಹೊನಲು ಹರಿಯಬಹುದು ಅಥವಾ ಕೆಲವೊಮ್ಮೆ ಜ’ ಗ ಳಗಳು ಕೂಡ ಆಗಬಹುದು.

ಅಷ್ಟೇ ಅಲ್ಲದೇ ವಧು ವರರು ಮಾಡುವ ಕೆಲವು ಕೆಲಸಗಳು ಮದುವೆಗೆ ಬಂದವರನ್ನು ಹೌ ಹಾರುವಂತೆ ಮಾಡಿಸುತ್ತವೆ. ಇದೆ ರೀತಿ ಒಂದು ಮದುವೆ ನಡೆಯುತ್ತಿರುವ ಸಮಯದಲ್ಲಿ ವರ ತನ್ನ ಸೊಸೆ ಅಂದರೆ ಹೆಂಡತಿಯ ತಂಗಿಯ ಜೊತೆಗೆ ಮಾಡಿದ ಚೇ ಷ್ಟೆಗೆ ಇಡೀ ಮದುವೆ ಮಂಟಪವೇ ಹೌಹಾರಿದ ಘಟನೆ ನಡೆದಿದ್ದು ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ವರ ಮಾಡಿದ ಇಂತಹ ಚೇ ಷ್ಟೆಯನ್ನು ನೀವೆಂದು ನೋಡಿಲ್ಲ ಎಂದೆನಿಸುತ್ತದೆ, ಏಕೆಂದರೆ ಆತ ಆ ಕೆಲಸ ಮಾಡುವಾಗ ಅವರ ಪಕ್ಕದಲ್ಲಿಯೇ ವಧು ಕೂಡ ಇದ್ದಳು. ಅಂದಹಾಗೆ ಈ ವಿಡಿಯೋದಲ್ಲಿ ವರ ಮಾಡಿದ ಆ ಚೇಷ್ಟೆ ಆದರೂ ಏನೂ ಎನ್ನುತ್ತೀರಾ, ಆ ಮದುವೆ ಕಾರ್ಯಕ್ರಮ ಜೋರಾಗಿ ನಡೆಯುತ್ತಿರುತ್ತದೆ, ವರಮಾಲೆ ಕಾರ್ಯಕ್ರಮ ಮುಗಿಸಿ ವಧು ವರರು ಸ್ಟೇಜ್ ಮೇಲೆ ಕುಳಿತಿರುತ್ತಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಫೋಟೋ ತೆಗೆಸಿಕೊಳ್ಳಲು ವಧುವಿನ ತಂಗಿ ಬರುತ್ತಾಳೆ, ಆಗ ಫೋಟೋ ತೆಗೆಸಿಕೊಂಡು ಎದ್ದು ಹೋಗುತ್ತಿದ್ದ ತನ್ನ ಹೆಂಡತಿಯ ಸೋದರಿಯ ಕೈಗೆ ವರಮಹಾಶಯ ಒಂದು ಚಿಕ್ಕ ಚೀಟಿ ಇಡುತ್ತಾನೆ! ಅವಳು ಕೂಡ ಚೀಟಿ ತಗೆದುಕೊಂಡು ನಗುತ್ತಲೇ ಅಲ್ಲಿಂದ ಹೋಗುತ್ತಾಳೆ, ಸಂಬಂಧಿಗಳು ಸಹ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಹಾಸ್ಯದ ವಸ್ತುವಾಗಿದೆ, ಅಂದಹಾಗೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್ ಖಾತೆಯಾದ only._.sarcasm ಎಂಬುದರಲ್ಲಿ ‘ಸೆಟ್ಟಿಂಗ್ ಟಿಪ್ಸ್ ತೆಗೆದುಕೊಳ್ಳಿ ಸಹೋದರರೇ’ ಎಂಬ ಅಡಿಬರಹದೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಇದುವರೆಗೂ ಸಾವಿರಾರು ಜನರು ವೀಕ್ಷಿಸಿದ್ದು 1659 ಜನರು ಲೈಕ್ ಮಾಡಿದ್ದಾರೆ.

ಆ ವಿಡಿಯೋ ಕೆಳಗಿದೆ ನೋಡಿ….

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...