How to pay current bill online here is the complete procedure: ಸಾಮಾನ್ಯವಾಗಿ ಪ್ರತಿ ತಿಂಗಳು ನಾವು ಅಗತ್ಯವಾಗಿ ಪಾವತಿಸಬೇಕಾದ ಪ್ರಮುಖ ಸೇವೆಗಳು ಹಲವಾರು ಇದ್ದು ಅದರಲ್ಲಿ ವಿದ್ಯುತ್ ಬಿಲ್ ಸಹ ಒಂದು. ಸದ್ಯ ಈಗ ಬಿಲ್ ಪಾವತಿಗೆ ಬಹಳ ಪರಿಣಾಮಕಾರಿ ವಿಧಾನಗಳಿದ್ದು ವಿದ್ಯುತ್ ಕಂಪನಿಗಳ ಕೌಂಟರ್‌ಗೆ ಹೋಗಿ ಬಿಲ್ ಕಟ್ಟುವವರು ಈಗಲೂ ಕೂಡ ಇದ್ದಾರೆ.
ಆದರೆ ಆನ್‌ಲೈನ್‌ನಲ್ಲಿ(Online) ಸುಲಭವಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿದ್ದು ರಾಜಧಾನಿ ಬೆಂಗಳೂರಿನಂಥ ನಗರಗಳಲ್ಲಿ ಬೆಂಗಳೂರು(Bangalore) ಒನ್ ಇತ್ಯಾದಿ ಸರ್ವಿಸ್ ಸೆಂಟರ್‌ಗಳಲ್ಲಿ(Service center) ಬಿಲ್ ಪಾವತಿಸಬಹುದಾಗದೆ. ಇನ್ನು ಮೀಟರ್ ರೀಡಿಂಗ್‌ನವರು ತಿಂಗಳ ಪ್ರಾರಂಭ ದಿನಗಳಲ್ಲಿ ಮನೆ ಮನೆಗೆ ಹೋಗಿ ರೀಡಿಂಗ್ ನೋಡಿ ಬಿಲ್ ಜನರೇಟ್(Generate) ಮಾಡಿ ಕೊಟ್ಟುಹೋಗುತ್ತಾರೆ.
ಹೌದು ನೀವು ವಿದ್ಯುತ್ ಮೀಟರ್‌ಗೆ ಮೊಬೈಲ್ ನಂಬರ್ ನೊಂದಾಯಿಸಿದ್ದರೆ ನಿಮಗೆ ಬಿಲ್ ಜನರೇಟ್ ಆದ ಬಳಿಕ ಮೆಸೇಜ್ ಕೂಡ ಬರಲಿದ್ದು ಬಿಲ್ ಕೊಟ್ಟು 2-3 ವಾರದೊಳಗೆ ಬಿಲ್ ಪಾವತಿಗೆ ಸಮಯಾವಕಾಶ ಕೊಡಲಾಗಿರುತ್ತದೆ. ಇನ್ನು ಅಷ್ಟರೊಳಗೆ ಬಿಲ್ ಕಟ್ಟದಿದ್ದರೆ ಮನೆ ಅಥವಾ ಕಟ್ಟಡಕ್ಕೆ ಪವರ್ ಕಟ್ ಮಾಡುತ್ತಾರೆ. ಹೀಗಾಗಿ ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸುವುದು ಅತ್ಯಗತ್ಯವಾಗಿದೆ

ಇನ್ನು ನಿಮಗೆ ವಿದ್ಯುತ್ ಸರಬರಾಜು ಒದಗಿಸುವ ಕಂಪನಿಗಳ ವೆಬ್‌ಸೈಟ್‌ನಲ್ಲಿ ಹೋಗಿ ಬಿಲ್ ಪಾವತಿಸಬಹುದಾಗಿದ್ದು ನಿಮ್ಮ ಬಿದ್ಯುತ್ ಬಿಲ್‌ನ ಆರ್ ಆರ್ ನಂಬರ್ ಇದ್ದರೆ ಸಾಕು. ಹೌದು ಆ ನಂಬರ್ ಹಾಕಿದರೆ ವಿದ್ಯುತ್ ಬಿಲ್ ಆನ್‌ಲೈನ್‌ನಲ್ಲೇ ಕಾಣಿಸುತ್ತದೆ. ಇನ್ನು ಗ್ರಾಹಕರ ಹೆಸರು ಮೀಟರ್ ದಿನಾಂಕ ಎಷ್ಟು ಓದಿದೆ ಇತ್ಯಾದಿ ವಿವರ ಇರಲಿದ್ದು ಅದು ನಿಮ್ಮದೇ ಅದ ಬಿಲ್ ಎಂಬುದು ಖಚಿತೊಂಡ ನಂತರ ಪೇಮೆಂಟ್ ಪ್ರಕ್ರಿಯೆಗೆ ಹೋಗಬಹುದು.
ಸಾಮಾನ್ಯವಾಗಿ ಇಂಥಹ ವೆಬ್‌ಸೈಟ್‌ನಲ್ಲಿ ಇರುವ ಪೇಮೆಂಟ್ ಆಪ್ಷನ್‌ಗಳಲ್ಲಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಇರಲಿದ್ದು ಕೆಲ ಸಂಸ್ಥೆಗಳು ಯುಪಿಐ ಪೇಮೆಂಟ್ ಅನ್ನೂ ಸ್ವೀಕರಿಸುತ್ತವೆ.ಇದು ಇನ್ನೂ ಸರಳವಾದ ಮಾರ್ಗವಾಗುದ್ದು ಪೇಟಿಎಂ ಫೋನ್‌ಪೇ ಗೂಗಲ್ ಪೇ ಇತ್ಯಾದಿ ಯುಪಿಐ ಪೇಮೆಂಟ್ ಆಯಪ್‌ಗಳು ಹಲವು ಪ್ರಮುಖ ನಗರಗಳ ವಿದ್ಯುತ್ ಕಂಪನಿಗಳ ಎಲೆಕ್ಟ್ರಿಸಿಟಿ ಬಿಲ್ ಪಾವತಿ ಸೇವೆಗಳನ್ನು ಒಳಗೊಂಡಿರುತ್ತವೆ ಎನ್ನಬಹುದು.

ಇನ್ನು ಬೆಂಗಳೂರಿನ ಬೆಸ್ಕಾಂನ ಬಿಲ್ ಪಾವತಿಗೆ ಬಹುತೇಕ ಆಯಪ್‌ಗಳು ವೇದಿಕೆ ಕಲ್ಪಿಸುತ್ತವೆ.ಇತ್ತ ಬಿಲ್ ಜನರೇಟ್ ಆದ ಒಂದೆರಡು ದಿನಗಳ ನಂತರ ಪೇಟಿಎಂ ಇತ್ಯಾದಿ ವ್ಯಾಲಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವ ಅವಕಾಶ ಇರುತ್ತದೆ. ಇನ್ನು ಆರ್ ಆರ್ ನಂಬರ್ ಹಾಕಿದರೆ ಬಿಲ್ ಕಾಣಿಸುತ್ತಿದ್ದು ಗ್ರಾಹಕರ ಹೆಸರು ಬಿಲ್ ಮೊತ್ತ ಇತ್ಯಾದಿ ವಿವರ ಇದರಲ್ಲಿ ಇರುತ್ತದೆ.
ಹೌದು ಒಮ್ಮೆ ನೀವು ಒಂದು ಬಿಲ್ ಅನ್ನು ಪಾವತಿಸಿದರೆ ಪ್ರತೀ ತಿಂಗಳು ನಿಮಗೆ ರಿಮೈಂಢರ್ ರೀತಿ ನೋಟಿಫಿಕೇಶನ್ ಕಾಣಿಸುತ್ತದೆ. ಇನ್ನು ನೀವು ಯಾವುದೇ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಅದರ ಮೂಲಕವೂ ಕೂಡ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿದ್ದು ಬಹುತೇಕ ಎಸ್ಕಾಂಗಳು ಇಂಥ ಪೇಮೆಂಟ್‌ಗೆಲ್ಲಾ ತೆರೆದುಕೊಂಡಿವೆ. ಟೆಲಿಕಾಂ ಕಂಫನಿಗಳ ಆಯಪ್‌ಗಳ ಮೂಲಕವೂ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.