ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿ ಇಬ್ಬರು ಧೂಮಪಾನ ಮತ್ತು ಮದ್ಯಪಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಧೂಮಪಾನ, ಮದ್ಯಪಾನ ಮಾಡಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಮದ್ಯದ ನಶೆಯಲ್ಲಿಯೇ ಸ್ಟಾಫ್ ನರ್ಸ್ ಚಿಕಿತ್ಸೆ ನೀಡುತ್ತಾರೆ ಎಂಬ ಆರೋಪವು ಇದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸ್ಥಳದಲ್ಲೇ ಧೂಮಪಾನ ಹಾಗೂ ಮದ್ಯಪಾನದಂತಹ ಅಕ್ರಮ ಚಟುವಟಿಕೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನರ ಸೇವೆಗಾಗಿಯೇ ಮೀಸಲಾಗಿರುವ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಇಂದು ಸಾಮಾನ್ಯವಾಗಿದೆ. ಸರ್ಕಾರಿ ಕಚೇರಿಗೆ ಮದ್ಯ ಕುಡಿದು ಬರುವುದು, ಧೂಮಪಾನ ಮಾಡುವುದು ಹಾಗೂ ಶಾಲೆಗಳಲ್ಲೇ ಎಣ್ಣೆ ಪಾರ್ಟಿ ಮಾಡಿದಂತಹ ಎಷ್ಟೋ ಉದಾಹರಣೆಗಳು ನಮ್ಮ ಮುಂದು ಬಂದು ಹೋಗಿವೆ.
ಇದಕ್ಕೆ ಹೊಸದಾಗಿ ಸೇರ್ಪಡೆ ಎಂಬಂತೆ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿ ಇಬ್ಬರು ಧೂಮಪಾನ ಮತ್ತು ಮದ್ಯಪಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿ ಗ್ರೂಪ್ ಸಿಬ್ಬಂದಿ ಸಾರಿಕಾ ಮತ್ತು ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಶೈಲಾ ಪ್ರಾಥಮಿಕ ಕೇಂದ್ರದಲ್ಲೇ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆಸ್ಪತ್ರೆಯಲ್ಲೇ ಸಿಗರೇಟ್ ಸೇದಿ, ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಫೋಟೋಗಳು ಹರಿದಾಡುತ್ತಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಮದ್ಯದ ನಶೆಯಲ್ಲಿಯೇ ಸ್ಟಾಫ್ ನರ್ಸ್ ಚಿಕಿತ್ಸೆ ನೀಡುತ್ತಾರೆ ಎಂಬ ಆರೋಪವು ಇದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸ್ಥಳದಲ್ಲೇ ಧೂಮಪಾನ ಹಾಗೂ ಮದ್ಯಪಾನದಂತಹ ಅಕ್ರಮ ಚಟುವಟಿಕೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮದ್ಯಪಾನ ಮತ್ತು ಧೂಮಪಾನ ತಪ್ಪು. ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಕರ ಎಂದು ಆಸ್ಪತ್ರೆಗೆ ಬರುವವರಿಗೆ ಬುದ್ಧಿ ಹೇಳಬೇಕಾದ ಸಿಬ್ಬಂದಿಯೇ ಇಂತಹ ಕೆಲಸ ಮಾಡುವುದು ಎಷ್ಟು ಸರಿ. ಇಂಥವರನ್ನು ಕೆಲಸದಲ್ಲಿ ಮುಂದುವರಿಸುವುಸು ಸರಿಯೇ? ತಮ್ಮ ಚಟಗಳನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳಲಿ ದೇವಸ್ಥಾನ ಸ್ವರೂಪವಾದ ಆಸ್ಪತ್ರೆಯಲ್ಲಿ ಇಂತಹ ಕೃತ್ಯ ಎಸಗುವುದು ಅಕ್ಷಮ್ಯ ಅಪರಾಧ.