beauty-parlour-case

ಬ್ಯುಟಿ ಪಾರ್ಲರ್ ಗೆ ಪದೇ ಪದೇ ಹೋಗುತ್ತಿದ್ದ ಹೆಂಡತಿ : ಸುಂದರವಾಗಿದ್ದಿಯ ಹೋಗಬೇಡ ಎಂದು ಅಡ್ಡ ಬಂದ ಗಂಡ. ಆಸೆ ಜಾಸ್ತಿ ಆಗಿ ಹೆಂಡತಿ ಏನಾಗಿದ್ದಾಳೆ ಗೊತ್ತೇ?

Today News / ಕನ್ನಡ ಸುದ್ದಿಗಳು

Kannada News: ಈಗಿನ ಕಾಲದವರು ಸಣ್ಣ ಪುಟ್ಟ ವಿಷಯಗಳಿಗೆ ದುಡುಕಿನ ನಿರ್ಧಾರ ತೆಗೆದುಕೊಂಡು ಜೀವನವನ್ನೇ ಹಾಳುಮಾಡಿಕೊಳ್ಳುವ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ರೀನಾ ಎನ್ನುವ ಮಹಿಳೆ ಹೀಗೆ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಘಟನೆ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಗಂಡ ತನ್ನ ಆಸೆಯನ್ನು ಈಡೇರಿಸಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಈ ಮಹಿಳೆ ಏನು ಮಾಡಿದ್ದಾರೆ ಗೊತ್ತಾ?

ಮಧ್ಯಪ್ರದೇಶದ ಇಂದೋರ್ ನ ಒಂದು ಗ್ರಾಮದಲ್ಲಿ ನಡೆದಿದೆ. ಇಲ್ಲಿ ರಮೇಶ್ ಯಾದವ್ ಹಾಗೂ ರೀನಾ ಎನ್ನುವ ದಂಪತಿ ವಾಸ ಮಾಡುತ್ತಿದ್ದರು. ಇವರಿಬ್ಬರ ಮದುವೆಯಾಗಿ 15 ವರ್ಷವಾಗಿತ್ತು. ಬಹಳ ಅನ್ಯೋನ್ಯವಾಗಿ ಸಂತೋಷವಾಗಿ ಇವರಿಬ್ಬರ ಸಂಸಾರ ನಡೆಯುತ್ತಿತ್ತು. ರಮೇಶ್ ಅವರು ಹತ್ತಿರದಲ್ಲೇ ಟೇಲರ್ ಆಗಿ ಕೆಲಸ ಮಾಡುತ್ತಾ, ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಇವರ ಹೆಂಡತಿಗೆ ಅದೊಂದು ವಿಚಾರದಲ್ಲಿ ಆಸೆ ಶುರುವಾಯಿತು.

ಆ ಆಸೆ ಇನ್ನೇನೋ ಅಲ್ಲ, ಬ್ಯೂಟಿ ಪಾರ್ಲರ್ ಗೆ ಹೋಗಬೇಕು ಎಂದು ಆಕೆಗೆ ಆಸೆಯಾಯಿತು. ಆದರೆ ಆಕೆಯ ಗಂಡ ಅದಕ್ಕೆ ಒಪ್ಪಲಿಲ್ಲ. ಬ್ಯೂಟಿ ಪಾರ್ಲರ್ ಗೆ ಹೋಗೋದು ಬೇಡ ಎಂದು ಹೆಂಡತಿಗೆ ಗದರಿಬಿಟ್ಟರು ರಮೇಶ್. ಇದರಿಂದ ರೀನಾ ಮನಸ್ಸಿಗೆ ನೋವಾಗಿದೆ. ಗಂಡ ತನ್ನ ಆಸೆಯನ್ನು ಪೂರೈಸಲಿಲ್ಲ ಎಂದು ಮನಸ್ಸಿಗೆ ಘಾಸಿ ಮಾಡಿಕೊಂಡ ರೀನಾ, ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿದ ಅವರ ಗಂಡ ಶಾಕ್ ಆಗಿದ್ದಾರೆ..

ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ರೀನಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ರಮೇಶ್ ಯಾದವ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬ್ಯೂಟಿ ಪಾರ್ಲರ್ ಗೆ ಹೋಗೋದು ಬೇಡ ಎಂದಿದ್ದಕ್ಕೆ ಹೀಗೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದು, ಈಗ ಪೊಲೀಸರು ಸಹ ತನಿಖೆ ಶುರು ಮಾಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.